ಆಕೆ ಅಪ್ರಾಪ್ತೆ.. ಈತ ವಿವಾಹಿತ : ಹುಚ್ಚು ಪ್ರೀತಿ ಕಂಡದ್ದೇ ದುರಂತ ಅಂತ್ಯ..!
ರಾಯಚೂರು : ಆಕೆ 17 ರ ಹದಿ ಹರೆಯದ ಅಪ್ರಾಪ್ತೆ.. ಈತ 28 ವರ್ಷದವ. ಜೊತೆಗೆ ವಿವಾಹಿತ. ಸಾಲದಕ್ಕೆ ಇಬ್ಬರು ಮಕ್ಕಳು. ಆದರೂ ಈತನಿಗೆ ಲವ್ ಆಗಿದ್ದು ಅಪ್ರಾಪ್ತೆ ಮೇಲೆ. ಅಪ್ರಾಪ್ತೆಯನ್ನು ಪ್ರೀತಿಸಿ ಆಕೆ ಜೊತೆ ಓಡಿ ಹೋಗಿದ್ದ. ಇವರ ಈ ಹುಚ್ಚು ಪ್ರೀತಿ ಕೊನೆಯಲ್ಲಿ ಕಂಡಿದ್ದು ದುರಂತ ಅಂತ. ಈ ಇಬ್ಬರ ಹುಚ್ಚಾಟಕ್ಕೆ 2 ಕುಟುಂಬಗಳು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಅಯ್ಯೋ ಮದುವೆಯಾಗಿ ತಪ್ಪು ಮಾಡಿದೆ… ನಾನು ದಿವಾಳೆಯಾದೆ : ರಾಖಿ ಸಾವಂತ್
ಅಂದ್ಹಾಗೆ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ ಅಪ್ರಾಪ್ತೆ ಹಾಗೂ ವಿವಾಹಿತ ವ್ಯಕ್ತಿ ತಮ್ಮ ಲವ್ ಗೆ ಸಪೋರ್ಟ್ ಸಿಗದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಾಲೇರದೊಡ್ಡಿಯ ಮಹಾದೇವಿ ಹಾಗೂ ಯರಜಂತಿ ಗ್ರಾಮದ ನರಸಪ್ಪ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದ್ರೆ ನರಸಪ್ಪಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಹೀಗಾಗಿ ಬಾಲಕಿಯ ಮನೆಯಲ್ಲಿ ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಈ ಇಬ್ಬರು ಊರು ಬಿಟ್ಟು ಓಡಿ ಹೋಗಿದ್ದರು. ಬಳಿಕ ಅಪ್ರಾಪ್ತೆಯಾಗಿದ್ದರಿಂದ ಮೇಜರ್ ಆಗೋವರೆಗೆ ಬಾಲಮಂದಿರದಲ್ಲಿರಿಸಿ, ಆನಂತ್ರ ವಿವಾಹವಾಗಲು ಬಾಲಮಂದಿರದ ಅಧಿಕಾರಿಗಳು ತಿಳಿಸಿದ್ದರಂತೆ. ಆದರೆ ಅಷ್ಟರೊಳಗೇ ಈ ಇಬ್ಬರು ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ. ಪೈದೊಡ್ಡಿ ಗ್ರಾಮದ ಹೊರವಲಯದಲ್ಲಿ ವಿಷ ಸೇವಿಸಿದ್ದಾರೆ. ಬಾಲಕಿ ಸಾವನಪ್ಪಿದ್ದಾಳೆ. ನರಸಪ್ಪ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡ್ತಿದ್ದಾನೆ. ಅದೇನೇ ಇರಲಿ ಹುಚ್ಚು ಪ್ರೀತಿಯಲ್ಲಿ ಮನುಷ್ಯ ಮತಿ ಕಳೆದುಜಕೊಂಡು ಏನೆಲ್ಲಾ ಮಾಡ್ತಾನೆ ಅನ್ನೋದಕ್ಕೆ ಇದೊಂದು ಚಿಕ್ಕ ಉದಾಹರಣೆ ಅಷ್ಟೇ..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








