ಸಾಕ್ಷಾಟಿವಿ ವಿಶೇಷ – ಡಿಸೆಂಬರ್ 14 ರಿಂದ 19 ರ ವರೆಗೆ ಫಿಟ್ ಇಂಡಿಯಾ ಸಪ್ತಾಹ
ಬೆಂಗಳೂರು, ಡಿಸೆಂಬರ್12: ಪ್ರಧಾನಿ ನರೇಂದ್ರ ಮೋದಿ ಅವರು 29 ಅಗಸ್ಟ್ 2019ರಂದು ಜನರನ್ನು ದೈನಂದಿನ ದಿನಚರಿಯಲ್ಲಿ ದೈಹಿಕ ಚಟುವಟಿಕೆ ಮತ್ತು ಕ್ರೀಡೆಗಳನ್ನು ಪ್ರೋತ್ಸಾಹಿಸಲು ರಾಷ್ಟ್ರವ್ಯಾಪಿ ಫಿಟ್ ಇಂಡಿಯಾ ಮೂವ್ಮೆಂಟ್ ಅನ್ನು ಪ್ರಾರಂಭಿಸಿದರು.
![]()
ಉತ್ತಮ ಅಭ್ಯಾಸಗಳು ರೂಪುಗೊಳ್ಳುವ ಮೊದಲ ಸ್ಥಾನ ಶಾಲೆ. ಹಾಗಾಗಿ 2019 ರಲ್ಲಿ ಶಾಲಾ ಸಮಯದಲ್ಲಿ ಶಾಲಾ ಮಕ್ಕಳನ್ನು ಸಕ್ರಿಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು, ವಿದ್ಯಾರ್ಥಿಗಳಲ್ಲಿ ನಿಯಮಿತ ದೈಹಿಕ ಚಟುವಟಿಕೆ ಮತ್ತು ಹೆಚ್ಚಿನ ಮಟ್ಟದ ಫಿಟ್‌ನೆಸ್ ತಿಳುವಳಿಕೆಯನ್ನು ಮೂಡಿಸುವ, ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಫಿಟ್ ಇಂಡಿಯಾ ಸ್ಕೂಲ್ ವೀಕ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ವರ್ಷ ವರ್ಚುವಲ್ ಫಿಟ್ ಇಂಡಿಯಾ ಸ್ಕೂಲ್ ವೀಕ್ ಕಾರ್ಯಕ್ರಮವನ್ನು ಡಿಸೆಂಬರ್‌ನಲ್ಲಿ ಶಾಲೆಗಳು ಆಚರಿಸಲಿವೆ.
ಉತ್ತಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆ ಅಗತ್ಯ. ಇದರ ಅಡಿಯಲ್ಲಿ ನಿಯಮಿತ ವ್ಯಾಯಾಮ, ಯೋಗ, ಕ್ರೀಡೆಯಲ್ಲಿ ತೊಡಗುವುದು ಮುಖ್ಯ. ಏಕೆಂದರೆ ಆರೋಗ್ಯಕರ ಮನಸ್ಸು ಆರೋಗ್ಯಕರ ದೇಹದಲ್ಲಿ ಸಿಗಲು ಸಾಧ್ಯ. ಇದಕ್ಕಾಗಿ ಯೋಗ ಮಾಡಿ. ಇತರ ವ್ಯಾಯಾಮಗಳನ್ನು ಅಭ್ಯಾಸ ಮಾಡಿ ಅಥವಾ ಫಿಟ್ ಇಂಡಿಯಾ ಸಪ್ತಾಹ ಅಡಿಯಲ್ಲಿ ಪ್ರತಿದಿನ ಕನಿಷ್ಠ 30 ನಿಮಿಷಗಳಾದರೂ ಕಡ್ಡಾಯವಾಗಿ ಯೋಗ ಅಥವಾ ಬ್ಯಾಡ್ಮಿಂಟನ್, ಟೆನಿಸ್ ಅಥವಾ ಫುಟ್ಬಾಲ್, ಕರಾಟೆ ಅಥವಾ ಕಬಡ್ಡಿಯಲ್ಲಿ ತೊಡಗಿಕೊಳ್ಳಿ. ಇದರಿಂದ ಮಕ್ಕಳು ಆರೋಗ್ಯವಾಗಿರಲು ಸಾಧ್ಯ ಮತ್ತು ಖಿನ್ನತೆಯಂತಹ ಅನಾರೋಗ್ಯಕ್ಕೆ ಬಲಿಯಾಗುವುದಿಲ್ಲ. ಅಷ್ಟೇ ಅಲ್ಲ ಅವರಲ್ಲಿ ಸ್ವಾಭಿಮಾನ ಮತ್ತು ವಿಶ್ವಾಸ ಹೆಚ್ಚಾಗುತ್ತದೆ ಎಂದು ಭಾರತ ಸರ್ಕಾರ ಕೇಳಿಕೊಂಡಿದೆ.

ಸಾಕ್ಷಾಟಿವಿ ಯೂಟ್ಯೂಬ್ ಚಾನಲ್ ನಲ್ಲಿ ಡಿಸೆಂಬರ್ 14 ರಿಂದ ಡಿಸೆಂಬರ್ 19 ರ ವರೆಗೆ ವರ್ಚುವಲ್ ಫಿಟ್ ಇಂಡಿಯಾ ಕಾರ್ಯಕ್ರಮವು ಪ್ರಸಾರವಾಗಲಿದ್ದು, ಯೋಗ ಗುರು ಶ್ರೀ ನರೇಂದ್ರ ಕಾಮತ್ ಕೆ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಾಕ್ಷಾಟಿವಿ ವಿಶೇಷ ಫಿಟ್ ಇಂಡಿಯಾ ಸಪ್ತಾಹವನ್ನು ಡಿಸೆಂಬರ್ 14 ರಿಂದ 19 ರ ವರೆಗೆ ಸಾಕ್ಷಾಟಿವಿ ಯೂಟ್ಯೂಬ್ ಚಾನಲ್ ನಲ್ಲಿ ಬೆಳಗ್ಗೆ 7.00 ಗಂಟೆಗೆ ವೀಕ್ಷಿಸಬಹುದಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶುಂಠಿ ನೀರಿನ ಆರೋಗ್ಯ ಪ್ರಯೋಜನಗಳು ಮತ್ತು ತಯಾರಿಸುವ ವಿಧಾನhttps://t.co/3593OwUXu3
— Saaksha TV (@SaakshaTv) December 11, 2020
ಕೇರಳದಲ್ಲಿ 'ಪ್ಲಾಸ್ಮೋಡಿಯಂ ಓವಲ್' ಎಂಬ ಹೊಸ ಅಪರೂಪದ ಮಲೇರಿಯಾ ಪ್ರಕರಣ ಪತ್ತೆhttps://t.co/Pnpf9Eo8iI
— Saaksha TV (@SaakshaTv) December 11, 2020








