ಟ್ರಂಪ್ ಗೆ ಸೋಲಿನ ಮೇಲೆ ಸೋಲು.. ಕಡೆಯ ಪ್ರಯತ್ನವೂ ಫೇಲು..!
ಅಮೆರಿಕ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ಹೀನಾಯವಾಗಿ ಸೋಲುಂಡರೂ ಡೊನಾಲ್ಡ್ ಟ್ರಂಪ್ ಮಾತ್ರ ಸೋಲೊಪ್ಪಿಕೊಳ್ಲಲು ಸುತಾರಾಂ ಸಿದ್ಧರಿಲ್ಲ. ನಾನೇ ಗೆದ್ದಿದ್ದು, ನಾವೇ ಗೆದ್ದಿದ್ದು ಅಂತ ಹೇಳಿಕೊಂಡು ಮತೆಣಿಕೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಟ್ರಂಪ್ ಇದೀಗ ಮುಖಭಂಗ ಅನುಭವಿಸಿದ್ದಾರೆ. ಇದ್ದ ಕಡೆಯ ಅವಕಾಶದಲ್ಲೂ ಫೇಲ್ ಆಗಿದ್ಧಾರೆ.
ನಿಯೋಜಿತ ಅಧ್ಯಕ್ಷ ಜೋ ಬಿಡೆನ್ ಅವರ ಗೆಲುವನ್ನು ಅಮಾನ್ಯ ಗೊಳಿಸಲು ನಿರ್ಮಿತ ಅಧ್ಯಕ್ಷರಾದ ಟ್ರಂಪ್ ಹೂಡಿದ್ದ ಮೊಕದ್ದಮೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದಕ್ಕೂ ಮುನ್ನ ಟ್ರಂಪ್ ಹೂಡಿದ್ದ ಮೊಕದ್ದಮೆಗಳನ್ನು ಸ್ಥಳೀಯ ಹಾಗೂ ಫೆಡರಲ್ ನ್ಯಾಯಾಧೀಶರುಗಳು ತಿರಸ್ಕರಿಸಿದ್ದರು. ಕಕೊನೆಗೆ ಸುಪ್ರೀಂ ಕೋರ್ಟ್ ನಲ್ಲೂ ಟ್ರಂಪ್ ಗೆ ಸೋಲಾಗಿದೆ.
ಪ್ರತಿಭಟನೆಗೆ ಪ್ರಚೋದನೆ : ಪತ್ರಕರ್ತನನ್ನು ಗಲ್ಲಿಗೇರಿಸಿದ ಇರಾನ್ ಸರ್ಕಾರ
ಚುನಾವಣೆಯಲ್ಲಿ ಅಕ್ರಮ ನಡೆದಿದೆ, ಆದ್ದರಿಂದ ಫಲಿತಾಂಶವನ್ನು ರದ್ದುಗೊಳಿಸಬೇಕೆಂದು ಟ್ರಂಪ್ ಕೋರ್ಟ್ ಮೊರೆ ಹೋಗಿದ್ದರು. ಆದರೆ ಟ್ರಂಪ್ ಹಾಗೂ 19 ರಿಪಬ್ಲಿಕನ್ ಸ್ಟೇಟ್ ಅಟಾರ್ನಿ ಜನರಲ್ ಗಳು, 126 ಹೌಸ್ ರಿಪಬ್ಲಿಕನ್ ಗಳು ಮಂಡಿಸಿದ್ದ ವಾದವನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ಪೂರ್ಣವಾಗಿ ನಿರಾಕರಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ನಲ್ಲಿ ನಿರಾಸೆಯಾಗಿದೆ.
ಇದು ಡೊನಾಲ್ಡ್ ಟ್ರಂಪ್ ಗೆ ಒಂದೇ ವಾರದಲ್ಲಿ ಉಂಟಾಗಿರುವ ಎರಡನೇ ಹಿನ್ನಡೆಯಾಗಿದ್ದು, ಇದಕ್ಕೂ ಮುನ್ನ ಪೆನ್ಸಲ್ವೇನಿಯಾ ರಿಪಬ್ಲಿಕನ್ನರು ಮಂಡಿಸಿದ್ದ ವಾದವನ್ನು ನ್ಯಾಯಾಧೀಶರು ತಿರಸ್ಕರಿಸಿದ್ದರು. ಇನ್ನೂ ಇಷ್ಟಾದ್ರೂ ಬುದ್ದಿ ಕಲಿಯದ ಟ್ರಂಪ್ ಮಾತ್ರ , ಈ ಬಗ್ಗೆ ಟ್ವೀಟ್ ಮಾಡಿ ‘ಸುಪ್ರೀಂ ಕೋರ್ಟ್ ನಮ್ಮ ಮನವಿಯನ್ನ ಕೈಬಿಟ್ಟಿತು. ಬುದ್ಧಿವಂತಿಕೆ ಇಲ್ಲ, ಧೈರ್ಯವಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








