ಚೆನ್ನೈ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ತೋಪ್ಪೂರು ಕನವಾಯ್‍ನಲ್ಲಿ 15 ವಾಹನಗಳ ನಡುವೆ ಭೀಕರ ಸರಣಿ ಅಫಘಾತ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.

ಧರ್ಮಪುರಿ ಜಿಲ್ಲೆಯ ಸೇಲಂ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತೆಪ್ಪೂರು ಕನವಾಯ್‍ನಲ್ಲಿ ಕಾರು ಸೇಲಂ ಕಡೆಗೆ ಸಾಗುತ್ತಿತ್ತು. ನಂತರ ಕಾರು ಆಕಸ್ಮಿಕವಾಗಿ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಡಿವೈಡರ್ ದಾಟಿ ಹೋಗಿದೆ. ಈ ವೇಳೆ ಸೇಲಂ ಕಡೆಗೆ ವೇಗವಾಗಿ ಬರುತ್ತಿದ್ದ ಲಾರಿ ಕಾರು ಸೇರಿ ಇತರೆ ವಾಹನಗಳಿಗೆ ಡಿಕ್ಕಿ ಹೊಡೆದು ಸೇತುವೆಯ ಮೇಲೆ ಅಡ್ಡಲಾಗಿದೆ ನಿಂತಿದೆ. ಪರಿಣಾಮ ಸೇತುವೆ ಮೇಲೆ ಎರಡೂ ಕಡೆಗಳಿಂದ ಬರುತ್ತಿದ್ದ 12 ಕಾರುಗಳು, ಎರಡು ಮಿನಿ ಲಾರಿಗಳು ಮತ್ತು ಬೈಕ್ ಒಳಗೊಂಡಂತೆ ಪರಸ್ಪರ ಡಿಕ್ಕಿ ಹೊಡೆದಿವೆ. ಒಟ್ಟು 15 ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ.

ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐದಕ್ಕೂ ಹೆಚ್ಚು ಜನರನ್ನು ರಕ್ಷಿಸಿ ಧರ್ಮಪುರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಸತತ 15 ವಾಹನಗಳು ಡಿಕ್ಕಿ ಹೊಡೆದ ಕಾರಣ ಸೇಲಂ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 8 ಕಿ.ಮೀ.ವರೆಗೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಘಟನೆಯಲ್ಲಿ 10ಕ್ಕೂ ಹೆಚ್ಚು ಕಾರುಗಳು ಸಂಪೂರ್ಣ ಜಖಂ ಆಗಿವೆ. ಲಾರಿ, ಲಗೇಜ್ ಆಟೋಗಳು ಸಹ ಜಖಂ ಆಗಿದ್ದು, ಜಖಂ ಆದ ವಾಹನಗಳಲ್ಲಿ ಸಿಲುಕಿದ್ದವರನ್ನು ರಕ್ಷಿಸಲು ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








