==ಬಾಂಬ್ ಸಿಡಿಸ್ತಾರಾ ಮಾಜಿ ಸಿಎಂ ಸಿದ್ದು==
ಬಾಗಲಕೊಟೆ: ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ನೀಡಬೇಕೆಂದು ನಡೆಯುತ್ತಿರುವ ಹೋರಾಟಕ್ಕೆ ನನ್ನ ವಿರೋಧ ಇಲ್ಲ, ಬದಲಾಗಿದೆ ಬೆಂಬಲ ಇದೆ. ಸಚಿವ ಈಶ್ವರಪ್ಪ ಮೋದಿಯನ್ನ ಹಿಡಿದು ಎಸ್‍ಟಿ ಮೀಸಲಾತಿ ಮಾಡಿಸಲಿ, ಬೇಡ ಅಂದವರ್ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈಶ್ವರಪ್ಪ ಬಿಜೆಪಿ ಸಕಾ9ರದಲ್ಲಿ ಒಬ್ಬ ಮಂತ್ರಿ, ಅವರು ಯಾಕೆ ಬೀದಿಗೆ ಬಂದು ಹೋರಾಟ ಮಾಡಬೇಕು. ಆಡಳಿತ ಇರುವಾಗಲೇ ಮಂತ್ರಿಯಾಗಿ ಹೋರಾಟ ಮಾಡಿದ್ದು ಈಶ್ವರಪ್ಪಗೆ ಮುಜಗರ ತಂದಿದೆ. ಹೋರಾಟ ಮಾಡುವ ಬದಲು ಪ್ರಧಾನಿ ಮೋದಿ ಬಳಿ ಹೋಗಿ ಎಸ್‍ಟಿ ಮೀಸಲಾತಿ ಮಾಡಿಸಿಕೊಂಡು ಬರಲಿ ಎಂದು ಸವಾಲು ಹಾಕಿದ್ದಾರೆ.
ಕುರುಬರು ಹೆಚ್ಚಾಗಿ ಸಿದ್ದರಾಮಯ್ಯ ಜೊತೆ ಇದ್ದಾರೆ ಅನ್ನೋ ಕಾರಣಕ್ಕೆ ಬೇರೆ ಬೇರೆ ಮಾಡಬೇಕೆನ್ನುವುದೇ ಆರ್‍ಎಸ್‍ಎಸ್‍ನ ಉದ್ದೇಶ. ಕುರುಬರಿಗೆ ಮೀಸಲಾತಿ ವಿಷಯವನ್ನು ಕ್ಯಾಬಿನೆಟ್‍ಗೆ ತಂದು ಮಾಡಿಸಲಿ. ನಾನು ಸಿಎಂ ಇದ್ದಾಗ ಗೊಂಡ, ರಾಜಗೊಂಡರ ಜೊತೆ ಇರುವ ಕುರುಬ ಮತ್ತು ಹಾಲುಮತದವರನ್ನ ಎಸ್‍ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೇನೆ. ಜನರಿಗೇನು ಬೀದಿಗಿಳೀರಿ ಅಂತ ಹೇಳಿದ್ನಾ..? ನಾನೇನು ಬೀದಿಗೆ ಇಳಿದು ಚಳವಳಿ ಮಾಡಿದ್ದೀನಾ..ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೀನಿ. ಮೊದಲು ಈಶ್ವರಪ್ಪ ಅದನ್ನು ಮಾಡಿಸಲಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ಬಾಂಬ್ ಸಿಡಿಸ್ತಾರಾ ಸಿದ್ದರಾಮಯ್ಯ
ಬೇನಾಮಿ ಆಸ್ತಿ ಮಾಡಿರೋದು ಸಾಬೀತಾದ್ರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಬೆಂಗಳೂರಿನಲ್ಲೇ ಮಾತನಾಡುತ್ತೇನೆ. ಕುಮಾರಸ್ವಾಮಿ ಬೆಂಗಳೂರಲ್ಲೇ ಮಾತನಾಡಿದ್ದು, ಅಲ್ಲೆ ಮಾತನಾಡುವೆ, ಆ ಬಗ್ಗೆ ಮಾಹಿತಿ ತೆಗೆದುಕೊಂಡು ವಿವರವಾಗಿ ಮಾತನಾಡುತ್ತೇನೆ ಎನ್ನುವ ಮೂಲಕ ಎಚ್‍ಡಿಕೆ ವಿರುದ್ಧ ಸಿದ್ದರಾಮಯ್ಯ ಬಾಂಬ್ ಸಿಡಿಸ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.
ಸಭೆ ಕರೆಸು ಸಾರಿಗೆ ಸಮಸ್ಯೆ ಬಗೆಹರಿಸಲಿ
ಸಾರಿಗೆ ನೌಕರರ ಮುಷ್ಕರ ಬಗ್ಗೆ ನಿನ್ನೆಯೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ಜತೆ ಮಾತನಾಡಿದ್ದೇನೆ. ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದೇನೆ. ಮುಷ್ಕರದಿಂದ ಜನರಿಗೆ ತೊಂದರೆಯಾಗುತ್ತದೆ, ಕೂಡಲೇ ಸಮಸ್ಯೆ ಬಗೆಹರಿಸಲಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಸರ್ಕಾರ ವರ್ಸಸ್ ಕೋಡಿಹಳ್ಳಿ ವಿಚಾರ ಬಗ್ಗೆ ನನಗೆ ಗೊತ್ತಿಲ್ಲ. ಏನಾದರೂ ಮಾಡಲಿ ಮೊದಲು ಚಳುವಳಿ ನಿಲ್ಲಿಸಲಿ. ಜನರಿಗೆ ಬಸ್ ಸೌಕರ್ಯ ಒದಗಿಸಲಿ.
ಬಿಎಸ್‍ವೈ ಪುತ್ರನ ವಿರುದ್ಧ ಕೋರ್ಟ್‍ಗೆ ಹೋಗ್ತೇವೆ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಆರ್‍ಟಿಜಿಎಸ್ ಮೂಲಕ ಹಣ ಪಡೆದ ವಿಚಾರದ ಬಗ್ಗೆ ನಾನು ಅಸೆಂಬ್ಲಿಯಲ್ಲಿ ಹೇಳಿದ್ದೀನಿ. ಕೋರ್ಟ್‍ಗೆ ಹೋಗೋಣಾ ಅಂತ ನಿಧಾ9ರ ಮಾಡಿದ್ದೀನಿ. ಲಾಯರ್ ಗಳಿಗೆ ಪರಿಶೀಲಿಸಲು ಹೇಳಿದ್ದೀನಿ. ಅಲ್ಲೇ 7 ಕೋಟಿ 40 ಲಕ್ಷ ಆರ್‍ಟಿಜಿಎಸ್ ಜಮಾ ಆಗಿರೋದನ್ನ ತೋರಿಸಿದ್ದೀನಿ. ಬಿಡಿಎ ಹಗರಣ ಇದು, ರಾಮಲಿಂಗಂ ಕನ್ಸ್‍ಟ್ರಕ್ಷನ್ ಕಂಪನಿಯವರು ಕಟ್ಟಡಕ್ಕೆ ಸಂಬಂಧಿಸಿದಂತೆ ವಿಜಯೇಂದ್ರನಿಗೆ ಮಾತಾಡಿ ಕೊಟ್ಟಿರೋ ದುಡ್ಡದು. ಅವರು ದಪ9 ಚಮ9ದವರು, ಏನು ಮಾಡೋದಿಲ್ಲವಲ್ಲ. ಅದಕ್ಕೆ ಕಾನೂನು ಹೋರಾಟಕ್ಕೆ ಮುಂದಾಗಲಿದ್ದೇವೆ. ಬಿಡಿಎ ಗುತ್ತಿಗೆ ಕೊಡುವ ವಿಚಾರದಲ್ಲಿ 7ಕೋಟಿ 40 ಲಕ್ಷ ಲಂಚ ಪಡೆದಿರೋ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel