ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಸರ್ಕಾರಿ ನೌಕರರೆಂದು ಪರಿಗಣಿಸುವ ಬೇಡಿಕೆ ಹೊರತುಪಡಿಸಿ 8 ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಗಳ ನೌಕರರು ಮುಷ್ಕರ ವಾಪಸ್ ಪಡೆಯಲು ಒಪ್ಪಿದ್ದಾರೆ ಎಂದೇ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದರು. ಸವದಿ ಹೇಳಿಕೆ ಬನ್ನಲ್ಲೇ ಮೆಜೆಸ್ಟಿಕ್‍ನಿಂದ ಕೆಎಸ್‍ಆರ್‍ಟಿಸಿ ಬಸ್‍ಗಳ ಸಂಚಾರವೂ ಆರಂಭವಾಗಿತ್ತು.
ಆದರೆ, ಲಕ್ಷ್ಮಣ್ ಸವದಿ ಜತೆ ನಡೆದ ಸಂಧಾನ ಸಭೆಯ ನಿರ್ಣಯಗಳನ್ನು ಫ್ರೀಡಂಪಾರ್ಕ್‍ನಲ್ಲಿ ಧರಣಿ ನಡೆಸುತ್ತಿದ್ದ ನೌಕರರ ಜತೆ ಸಮಾಲೋಚನೆ ನಡೆಸಲಾಯಿತು. ಸರ್ಕಾರ ತಮ್ಮ ಪ್ರಮುಖ ಬೇಡಿಕೆ ಸರ್ಕಾರಿ ನೌಕರರೆಂಬ ಬೇಡಿಕೆ ಈಡೇರಿಸಲು ಸರ್ಕಾರ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಮುಷ್ಕರ ಮುಂದುವರೆಸಲು ನಿರ್ಧರಿಸಲಾಗಿದೆ.
ತುರ್ತು ಸಭೆ ಕರೆದ ಸಿಎಂ ಬಿಎಸ್‍ವೈ
ಸಾರಿಗೆ ನೌಕರರ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ನಾಳೆಯೂ ಬಸ್ ಮುಷ್ಕರ ಮುಂದುವರೆಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತುರ್ತುಸಭೆ ಕರೆದಿದ್ದಾರೆ.
ಸಾರಿಗೆ ನೌಕರರು ತಮ್ಮ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು ತುರ್ತು ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ಮೇಲೆ ಎಸ್ಮಾ ಕಾಯ್ದೆಯ ಪ್ರಯೋಗ ಮಾಡಬೇಕೇ ಅಥವಾ ಬೇಡಿಕೆ ಈಡೇಸಲು ಒಪ್ಪಬೇಕೇ ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಾರಿಗೆ ನೌಕರರಿಗೆ ಖಾಸಗಿ ಬಸ್ ಮಾಲೀಕರ ಬೆಂಬಲ
ತಮ್ಮ ಬೇಡಿಕೆ ಈಡೇರಿಕೆಗಾಗಿ ಬಸ್ ಸೇವೆ ಬಂದ್ ಮಾಡಿ ಮುಷ್ಕರ ಮುಂದುವರೆಸಿರುವ ಸಾರಿಗೆ ನೌಕರರಿಗೆ ಖಾಸಗಿ ಬಸ್ ಮಾಲೀಕರ ಸಂಘ ಬೆಂಬಲ ವ್ಯಕ್ತಪಡಿಸಿದೆ. ನಾಳೆಯಿಂದ ಖಾಸಗಿ ಬಸ್‍ಗಳ ಸಂಚಾರವೂ ಇರುವುದಿಲ್ಲ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಘೋಷಣೆ ಮಾಡಿದ್ದಾರೆ. ನೌಕರರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಫ್ರೀಡಂಪಾರ್ಕ್‍ಗೆ ಆಗಮಿಸಿ ಸಾರಿಗೆ ನೌಕರರ ಹೋರಾಟಕ್ಕೆ ನಟರಾಜ್ ಶರ್ಮಾ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ನಾಳೆಯಿಂದ ಸರ್ಕಾರಿ ಬಸ್‍ಗಳ ಜತೆಗೆ ಖಾಸಗಿ ಬಸ್‍ಗಳೂ ಇರುವುದಿಲ್ಲ. ಹೀಗಾಗಿ ನಾಳೆಯಿಂದ ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಡುವ ಸಾಧ್ಯತೆ ಇದೆ.
ನೌಕರರ 8 ಬೇಡಿಗಳಿಗೆ ಸರ್ಕಾರದ ಒಪ್ಪಿಗೆ
1. ಸಾರಿಗೆ ನಿಗಮಗಳ ನೌಕರರನ್ನು ಆರೋಗ್ಯ ಸಂಜೀವಿನಿ ವಿಮೆ ವ್ಯಾಪ್ತಿಗೆ ತರಲು ಸರ್ಕಾರದ ಒಪ್ಪಿಗೆ.
2. ಕೋವಿಡ್‍ನಿಂದ ಮೃತಪಟ್ಟ ನೌಕರರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಲು ಸಮ್ಮತಿ
3. ಸಾರಿಗೆ ನೌಕರರನ್ನೂ 6ನೇ ವೇತನ ಆಯೋಗದ ವ್ಯಾಪ್ತಿಗೆ ತರಲು ಒಪ್ಪಿಗೆ
4. 2020ರ ಜನವರಿಯಿಂದ ಸ್ಥಗಿತಗೊಂಡಿ ಓಟಿ, ಭತ್ಯೆ ಆರಂಭ
5. ಅಂತರ್ ನಿಗಮ ವರ್ಗಾವಣೆಗೆ ಸಮಿತಿ ರಚನೆಗೆ ಒಪ್ಪಿಗೆ
6. ಮೇಲಧಿಕಾರಿಗಳ ಕಿರುಕುಳ ತಡೆಗೆ ಸಮಿತಿ ರಚಿಸು ನಿರ್ಧಾರ
7. ತರಬೇತಿ ಅವಧಿ 2 ವರ್ಷದಿಂದ 1 ವರ್ಷಕ್ಕೆ ಇಳಿಸಲು ತೀರ್ಮಾನ
8. ಸಾರಿಗೆ ನಿಗಮಗಳ ಮಾನವ ಸಂಪನ್ಮೂಲ ವ್ಯವಸ್ಥೆ ಜಾರಿಗೆ ಸಮ್ಮತಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel