ಕರ್ನಾಟಕ ಮತ್ತು ಕೇರಳ ಸಂಪರ್ಕವನ್ನು ಬಂದ್ ಮಾಡಿರುವುದಕ್ಕೆ ಕೇರಳ ಸಿ,ಎಂ ಪಿಣರಾಯಿ ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇರಳದಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗಿದೆ. ಜೊತೆಗೆ ರಾಜ್ಯದಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಕೊಡಗು ಮೂಲಕ ಕರ್ನಾಟಕಕ್ಕೆ ಬರುವ ಕೇರಳ ಮಾರ್ಗವನ್ನು ಬಂದ್ ಮಾಡಲಾಗಿದೆ. ಕೊಡುಗಿನ ಕುಟ್ಟ, ಮಾಕುಟ್ಟ, ಕರಿಕೆ, ಚೆಕ್ ಪೋಸ್ಟ್, ಮತ್ತು ಗಡಿಯಲ್ಲಿರುವ ರಸ್ತೆಗೆ ಮಣ್ಣು ಹಾಕಲಾಗಿದೆ. ಈ ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಕರ್ನಾಟಕದಿಂದ ಕೇರಳಕ್ಕೆ ಬರುವ ಮಾರ್ಗ ಬಂದ್ ಮಾಡಲಾಗಿದೆ. ಇದರಿಂದ ಅಗತ್ಯ ವಸ್ತಗಳ ಸಾಗಾಟಕ್ಕೆ ತೊಂದರೆ ಆಗಿದೆ. ಹಾಗಾಗಿ ರಸ್ತೆಗಳ ಸಂಪರ್ಕ ಓಪನ್ ಮಾಡಿಸಿ ಎಂದು ಪಿಣರಾಯಿ ವಿಜಯನ್, ಪಿ,ಎಂ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.
ಬ್ರೆಜಿಲ್ ನಲ್ಲಿ ವಿಮಾನ ಪತನ; 10 ಜನ ಬಲಿ
ನವದೆಹಲಿ: ವಿಮಾನ ಪತನಗೊಂಡ ಪರಿಣಾಮ 10 ಜನರು ಸಾವನ್ನಪ್ಪಿರುವ ಘಟನೆ ಬ್ರೆಜಿಲ್ ನಲ್ಲಿ ವರದಿಯಾಗಿದೆ. ಅಲ್ಲದೇ, ಘಟನೆಯಲ್ಲಿ ಸುಮಾರು 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಬ್ರೆಜಿಲ್ನ ಸಿವಿಲ್...