ಸಾಮೂಹಿಕ ವಿವಾಹ ಯೋಜನೆ ಸಮಾರಂಭದಲ್ಲಿ ವಿವಾಹ ಬಂಧನಕ್ಕೆ ಒಳಗಾದ ತಾಯಿ, ಮಗಳು
ಗೋರಖ್‌ಪುರ, ಡಿಸೆಂಬರ್14: ಒಂದು ವಿಶಿಷ್ಟ ಕಾರ್ಯಕ್ರಮವೊಂದರಲ್ಲಿ, ಗೋರಖ್‌ಪುರದ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ ಅಡಿಯಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 53 ವರ್ಷದ ತಾಯಿ ಮತ್ತು ಅವರ 27 ವರ್ಷದ ಮಗಳು ವಿವಾಹ ಬಂಧನಕ್ಕೆ ಒಳಗಾದರು.
25 ವರ್ಷಗಳ ಹಿಂದೆ ಪತಿ ಹರಿಹರ ನಿಧನರಾದ ಬಳಿಕ ಬೇಲಿ ದೇವಿ ಎಂಬ ಮಹಿಳೆ ತನ್ನ ಗಂಡನ ಕಿರಿಯ ಸಹೋದರ ಜಗದೀಶ್ (55) ರನ್ನು ವಿವಾಹವಾದರು. ಅಲ್ಲಿ ಮುಸ್ಲಿಂ ದಂಪತಿಗಳು ಸೇರಿದಂತೆ 63 ಜೋಡಿಗಳು ವಿವಾಹ ಬಂಧನಕ್ಕೆ ಒಳಗಾದರು.
ಕಳೆದ ವಾರ ನಡೆದ ಇದೇ ಸಮಾರಂಭದಲ್ಲಿ ಬೇಲಿ ದೇವಿಯ ಕಿರಿಯ ಮಗಳು ಇಂದೂ ಕೂಡ ವಿವಾಹವಾದರು. ಜಗದೀಶ್ ಕೃಷಿಕರಾಗಿದ್ದು, ಇದುವರೆಗೂ ಅವಿವಾಹಿತರಾಗಿದ್ದರು.
ಗುಜರಾತ್ ನಲ್ಲಿ ವಿವಾಹ ಸಮಾರಂಭಗಳಿಗೆ ಅನುಮತಿ ಕಡ್ಡಾಯ
ನನ್ನ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳು ಈಗಾಗಲೇ ಮದುವೆಯಾಗಿದ್ದಾರೆ. ಆದ್ದರಿಂದ ನನ್ನ ಕಿರಿಯ ಮಗಳ ವಿವಾಹದೊಂದಿಗೆ, ನಾನು ನನ್ನ ಗಂಡನ ಕಿರಿಯ ಸಹೋದರನನ್ನು ಮದುವೆಯಾಗಲು ನಿರ್ಧರಿಸಿದೆ.ಇದರಿಂದಾಗಿ ನನ್ನ ಎಲ್ಲ ಮಕ್ಕಳು ಸಂತೋಷವಾಗಿದ್ದಾರೆ ಎಂದು ಬೇಲಿ ದೇವಿ ಸುದ್ದಿಗಾರರಿಗೆ ತಿಳಿಸಿದರು.
ಇಂದೂ 29 ವರ್ಷದ ರಾಹುಲ್ ಅವರನ್ನು ವಿವಾಹವಾದರು. ನನ್ನ ತಾಯಿ ಮತ್ತು ಚಿಕ್ಕಪ್ಪ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಈಗ ಅವರು ಪರಸ್ಪರ ಚೆನ್ನಾಗಿ ಬಾಳುತ್ತಾರೆ ಎಂದು ನನಗೆ ತುಂಬಾ ಸಂತೋಷವಾಗಿದೆ ಎಂದು ಇಂದೂ ಹೇಳಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಕೆಮ್ಮು ಮತ್ತು ಶೀತವನ್ನು ಸುಲಭವಾಗಿ ಗುಣಪಡಿಸಲು ಅಡಿಗೆ ಮನೆಯಲ್ಲಿರುವ ಮನೆಮದ್ದುಗಳುhttps://t.co/oN7YerRCki
— Saaksha TV (@SaakshaTv) December 12, 2020
ಪಾಕ್ ನಲ್ಲಿ ಅಲ್ಪಸಂಖ್ಯಾತರ ಕಣ್ಮರೆಗೆ ಆತಂಕ ವ್ಯಕ್ತಪಡಿಸಿದ ಯುಎನ್ ತಜ್ಞರು – ಭಾರತವನ್ನು ರಾಕ್ಷಸ ರಾಷ್ಟ್ರ ಎಂದ ಪಾಕ್ ಪ್ರಧಾನಿhttps://t.co/ctQzl9kSQK
— Saaksha TV (@SaakshaTv) December 12, 2020