ರೈತರು ಪಿಜ್ಜಾ ತಿನ್ನುತ್ತಿರುವ ಬಗ್ಗೆ ಸುದ್ದಿ ಮಾಡುತ್ತಿರುವವರಿಗೆ ನಟ ದಿಲ್ಜಿತ್ ದೋಸಾಂಜ್ ಖಡಕ್ ಪ್ರತಿಕ್ರಿಯೆ
ಹೊಸದಿಲ್ಲಿ, ಡಿಸೆಂಬರ್15: ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಸಂದರ್ಭದಲ್ಲಿ ರೈತರು ಪಿಜ್ಜಾ ತಿನ್ನುತ್ತಿರುವ ಬಗ್ಗೆ ಸುದ್ದಿ ಮಾಡುವವರಿಗೆ ನಟ ದಿಲ್ಜಿತ್ ದೋಸಾಂಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಟ, ಸೋಮವಾರ, ಟ್ವಿಟ್ಟರ್ ನಲ್ಲಿ ಪ್ರತಿಭಟನೆ ಸಮಯದಲ್ಲಿ ಗಡಿಯಲ್ಲಿ ರೈತರು ಪಿಜ್ಜಾ ತಿನ್ನುವುದರ ಬಗ್ಗೆ ಜನರು ಎಷ್ಟು ಕಾಳಜಿ ವಹಿಸುತ್ತಿದ್ದಾರೆ ಮತ್ತು ಆತಂಕಕ್ಕೊಳಗಾಗಿದ್ದಾರೆ ಎಂದು ಬರೆದಿದ್ದಾರೆ. ಆದರೆ ರೈತರು ವಿಷ ಸೇವಿಸಿ ಆತ್ಮಹತ್ಯೆಯಿಂದ ಸಾಯುವಾಗ ಅವರಿಗೆ ಏನೂ ಸಂಬಂಧವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ
ಜನಪ್ರಿಯ ಪಂಜಾಬಿ ಗಾಯಕ ಹಾಗೂ ನಟ ದಿಲ್ಜಿತ್ ದೋಸಾಂಜ್ ವ್ಯಂಗ್ಯದ ಟ್ವೀಟ್ ಮಾಡಿದ್ದು, ರೈತರು ವಿಷ ಸೇವಿಸುವಾಗ ಕಾಳಜಿ ಇರಲಿಲ್ಲ. ಆದರೆ ರೈತರು ಪಿಜ್ಜಾ ತಿನ್ನುವುದು ಸುದ್ದಿಯಾಗಿದೆ” ಎಂದಿದ್ದಾರೆ.
Shaa Baa Shey 👏🏼
Badaa Didh Dukheya Tuadha Hain ? pic.twitter.com/u16Ti96AlN
— DILJIT DOSANJH (@diljitdosanjh) December 14, 2020
ಕೇಂದ್ರ ಸರ್ಕಾರದ ಹೊಸ ವಿವಾದಾತ್ಮಕ ಕಾನೂನುಗಳ ವಿರುದ್ಧ ದೆಹಲಿ-ಹರಿಯಾಣ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಬೆಂಬಲಿಸುತ್ತಿರುವ ದಿಲ್ಜಿತ್ ಪ್ರಬಲ ಸೆಲೆಬ್ರಿಟಿ ದನಿಗಳಲ್ಲಿ ಒಂದಾಗಿದ್ದಾರೆ.
1975 ರಲ್ಲಿ ವಿಧಿಸಲಾದ ತುರ್ತು ಪರಿಸ್ಥಿತಿಯನ್ನು ಅಸಂವಿಧಾನಿಕ ಎಂದು ಘೋಷಿಸಿದ ಸುಪ್ರೀಂ ಕೋರ್ಟ್
ಕಳೆದ ವಾರ, ಶನ್‌ಬೀರ್ ಸಿಂಗ್ ಸಂಧು ತನ್ನ ನಾಲ್ಕು ಸ್ನೇಹಿತರೊಂದಿಗೆ ರೈತರಿಗಾಗಿ ಪಿಜ್ಜಾ ಹಬ್ಬವನ್ನು ಏರ್ಪಡಿಸಿದ್ದಾರೆ ಮತ್ತು ಇಡೀ ದೇಶಕ್ಕೆ ಪಿಜ್ಜಾಕ್ಕಾಗಿ ಹಿಟ್ಟನ್ನು ಒದಗಿಸುವವರು ಸ್ವತಃ ಪಿಜ್ಜಾವನ್ನು ಆನಂದಿಸಲು ಶಕ್ತರಾಗಬಹುದು ಎಂದು ಉಲ್ಲೇಖಿಸಿದ್ದಾರೆ.

ಕೆಲವರು ಈ ಕ್ರಮವನ್ನು ಶ್ಲಾಘಿಸಿದರು ಮತ್ತು ಪಿಜ್ಜಾದಲ್ಲಿ ಬಳಸುವ ಪ್ರತಿಯೊಂದು ಪದಾರ್ಥವನ್ನು ಜಮೀನಿನಲ್ಲಿ ಬೆಳೆಯುತ್ತಾರೆ ಎಂದು ಸಮರ್ಥಿಸಿಕೊಂಡರೆ, ಕೆಲವರು ಪ್ರತಿಭಟಿಸುವ ರೈತರಿಗೆ ಪಿಜ್ಜಾಗಳು, ಮಸಾಜ್ ಕುರ್ಚಿಗಳು ! ಇದು ಪ್ರತಿಭಟನೆ ಅಥವಾ ಪಂಚತಾರಾ ಸ್ಪಾ? ಮತ್ತು ಇದನ್ನೆಲ್ಲಾ ಯಾರು ಪಾವತಿಸುತ್ತಿದ್ದಾರೆ? ಎಂದು ಬರೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಕೆಮ್ಮು ಮತ್ತು ಶೀತವನ್ನು ಸುಲಭವಾಗಿ ಗುಣಪಡಿಸಲು ಅಡಿಗೆ ಮನೆಯಲ್ಲಿರುವ ಮನೆಮದ್ದುಗಳುhttps://t.co/oN7YerRCki
— Saaksha TV (@SaakshaTv) December 12, 2020
ಪಾಕ್ ನಲ್ಲಿ ಅಲ್ಪಸಂಖ್ಯಾತರ ಕಣ್ಮರೆಗೆ ಆತಂಕ ವ್ಯಕ್ತಪಡಿಸಿದ ಯುಎನ್ ತಜ್ಞರು – ಭಾರತವನ್ನು ರಾಕ್ಷಸ ರಾಷ್ಟ್ರ ಎಂದ ಪಾಕ್ ಪ್ರಧಾನಿhttps://t.co/ctQzl9kSQK
— Saaksha TV (@SaakshaTv) December 12, 2020








