ಸಹ ಆಟಗಾರನಿಗೆ ಹೊಡೆಯಲು ಮುಂದಾದ ಮುಶ್ಫೀಕರ್ : ಇದೆಂಥ ವರ್ತನೆ..?
ಢಾಕಾ : ಬಾಂಗ್ಲಾದೇಶದಲ್ಲಿ ಸದ್ಯ ಕ್ರಿಕೆಟ್ ಹೆಚ್ಚು ಜನಪ್ರಿಯಗೊಳುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬಾಂಗ್ಲಾ ತಂಡ ನಿಧಾನವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬಲಿಷ್ಠಗೊಳ್ಳುತ್ತಿರುವುದು.
ಈ ಮಧ್ಯೆ ಬಾಂಗ್ಲಾ ಕ್ರಿಕೆಟಿಗರ ಅತಿರೇಕದ ವರ್ತನೆ ಕೂಡ ವಿಶ್ವ ಕ್ರಿಕೆಟ್ ನಲ್ಲಿ ಸದ್ದು ಮಾಡುತ್ತಲೇ ಇರುತ್ತೆ. ಇದೀಗ ಅಂತಹದ್ದೇ ಒಂದು ಘಟನೆ ಬಾಂಗ್ಲಾ ಬಂಗಬಂಧು ಟಿ20 ಕಪ್ ನಲ್ಲಿ ನಡೆದಿದೆ.
ನಿನ್ನೆ ನಡೆದ ಟಿ 20 ಪಂದ್ಯದಲ್ಲಿ ಬೆಕ್ಸಿಮ್ಕೊ ಢಾಕಾ ನಾಯಕ ಮುಶ್ಫೀಕರ್ ರಹೀಂ, ಸಹ ಆಟಗಾರ ನೇಸಮ್ ಅಹ್ಮದ್ ಗೆ ಇನ್ನೇನು ಹೊಡೆದೇ ಬಿಟ್ಟರು ಎಂಬ ಸ್ಥಿತಿ ನಿರ್ಮಾಣವಾಗಿತ್ತು.
Calm down, Rahim. Literally. What a chotu 🐯🔥
(📹 @imrickyb) pic.twitter.com/657O5eHzqn
— Nikhil 🏏 (@CricCrazyNIKS) December 14, 2020
ಘಟನೆ ಏನು..?
ನಿನ್ನೆ ಬೆಕ್ಸಿಮ್ಕೊ ಢಾಕಾ- ಫಾರ್ಚೂನ್ ಬಾರಿಶಾಲ್ ನಡುವೆ ಭಾರಿ ನಿರ್ಣಾಯಕ ಪಂದ್ಯ ನಡೆಯುತ್ತಿತ್ತು. ಫಾರ್ಚೂನ್ ಬಾರಿಶಾಲ್ ಗೆ 19 ಎಸೆತದಲ್ಲಿ 45 ರನ್ ಬೇಕಿತ್ತು. ಬಾರಿಶಾಲ್ ಪರ ಬ್ಯಾಟ್ಸ್ ಮನ್ ಆತಿಫ್ ಹೊಸೇನ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದರು.
17ನೇ ಓವರ್ ಕೊನೆಯ ಎಸೆತದಲ್ಲಿ ಆತಿಫ್ ಕ್ಯಾಚ್ ನೀಡಿದರು. ಇದನ್ನು ಹಿಡಿಯಲು ಮುಶ್ಫೀಕರ್ ಧಾವಿಸಿದರು. ಇನ್ನೊಂದು ಕಡೆಯಿಂದ ನೇಸಮ್ ಬಂದರು.
ಇನ್ನೇನು ಇಬ್ಬರೂ ಡಿಕ್ಕಿಯಾಗಬೇಕು ಅನ್ನುವಷ್ಟರಲ್ಲಿ ಕೀಪರ್ ಮುಶ್ಫೀಕರ್ ರಹೀಂ ಕ್ಯಾಚ್ ಹಿಡಿದು, ನೇಸಮ್ ರನ್ನು ಹೊಡೆಯಲು ಮುಂದಾದ್ರು. ಅಷ್ಟರಲ್ಲಿ ನೇಸಮ್ ಸೇರಿದಂತೆ ಸಹ ಆಟಗಾರರು ಆತನನ್ನು ಶಾಂತಗೊಳಿಸಿದರು.
ಇನ್ನು ಘಟನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ನೆಟ್ಟಿಗರು ಮುಶ್ಫೀಕರ್ ನಡೆಗೆ ಬೇಸರ ಹೊರಹಾಕುತ್ತಿದ್ದಾರೆ.
ಇಂಡೋ ಆಸೀಸ್ ಮೊದಲ ಟೆಸ್ಟ್ – ಟೀಮ್ ಇಂಡಿಯಾದ 11ರ ಬಳಗಕ್ಕೆ ಬಿರುಸಿನ ಸ್ಪರ್ಧೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








