ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಕೋವಿಡ್–19 ಸೋಂಕಿನ ಕುರಿತು ಜಾಗೃತಿ ಮೂಡಿಸುವ ವೀಡಿಯೋವನ್ನು ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ್ದು, ಜನರು ಮನೆಯಲ್ಲೇ ಇದ್ದು ಸುರಕ್ಷಿತವಾಗಿರುವಂತೆ ಕೈಮುಗಿದು ಬೇಡಿಕೊಂಡಿದ್ದಾರೆ.
https://twitter.com/anilkumble1074/status/1243533719496839168?s=20
‘ಎಲ್ಲರಿಗೂ ನಮಸ್ಕಾರ. ಈ ಕೊರೊನಾ ವೈರಸ್ ಭಾರತಕ್ಕಷ್ಟೇ ಸೀಮಿತವಲ್ಲ. ನಮಗೆಲ್ಲ ತಿಳಿದಿರುವಂತೆ ಇಡೀ ವಿಶ್ವಕ್ಕೇ ಹರಡಿದೆ. ಸೋಷಿಯಲ್ ಡಿಸ್ಟೆನ್ಸಿಂಗ್ (ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ) ಒಂದೇ ನಮ್ಮನ್ನು ಕೊರೊನಾದಿಂದ ಕಾಪಾಡಬಲ್ಲದು. ನಮ್ಮ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸರ್ಕಾರಿ ಅಧಿಕಾರಿಗಳಿಗೆ ಸ್ಪಂದಿಸೋಣ. ಅವರನ್ನು ಬೆಂಬಲಿಸಿ ಅವರಿಗೆ ಸಹಕಾರ ಕೊಡಬೇಕು ಎಂದಿದ್ದರೆ, ದಯಮಾಡಿ ಮನೆಯಲ್ಲಿ ಇರಿ. ಈ ಲಾಕ್ ಡೌನ್ ಅವಧಿಯಲ್ಲಿ ನಮ್ಮ ಸರ್ಕಾರ ಏನು ಆದೇಶ ಕೊಟ್ಟಿದೆಯೋ ಅದನ್ನು ಚಾಚೂ ತಪ್ಪದೆ ಪಾಲಿಸಿ. ಕೈಮುಗಿದು ಕೇಳಿಕೊಳ್ತಾ ಇದ್ದೇನೆ, ಎಲ್ಲರೂ ಮನೆಯಲ್ಲೇ ಇರಿ. ಮಕ್ಕಳಿಗೂ ಈಗ ಶಾಲೆಗೆ ರಜೆ ಇದ್ದು, ಹೊರಗಡೆ ಹೋಗಿ ಆಡಬೇಕು ಎನ್ನುತ್ತಾರೆ. ಆದರೆ ದಯಮಾಡಿ ಅವರನ್ನು ಹೊರಗೆ ಕಳುಹಿಸಬೇಡಿ. ನೀವೂ ಎಲ್ಲರೂ ಮನೆಯಲ್ಲೇ ಇರಿ. ನಾವೆಲ್ಲ ಮನೆಯಲ್ಲೇ ಇರೋಣ, ಆರೋಗ್ಯವಾಗಿರೋಣ, ಸುರಕ್ಷಿತವಾಗಿರೋಣ’ ಎಂದು ಕುಂಬ್ಳೆ ಮನವಿ ಮಾಡಿದ್ದಾರೆ.








