ಬಾಗಲಕೋಟೆ: ಆತ ಉರಗ ಪ್ರೇಮಿ, ಅಷ್ಟೇ ಅಪ್ಪಟ ದೇಶಾಭಿಮಾನಿ. ಹಾವು ಇದೆ ಅನ್ನೋ ವಿಷಯ ತಿಳಿಸಿದ್ರೆ ಸಾಕು ತಟ್ಟನೇ ಅಲ್ಲಿ ಹಾಜರ್ ಇರ್ತಿದ್ದ. ಹಾವು ಸೆರೆಹಿಡಿದು ಜನರ ನೆಮ್ಮದಿಗೆ ಕಾರಣವಾಗುತ್ತಿದ್ದವ ಈಗ ಇನ್ನಿಲ್ಲ. ಎರಡ್ಮೂರು ಬಾರಿ ಸಾವಿನ ದವಡೆಯಿಂದ ಪಾರಾಗಿದ್ದ ಬಾಗಲಕೋಟೆ ಉರಗ ತಜ್ಞನಿಗೆ ನಾಗರಹಾವು ಕಚ್ಚಿದ ಪರಿಣಾಮ ಆತನ ಬದುಕು ಅಂತ್ಯಕಂಡಿದೆ.

ಬಾಗಲಕೋಟೆಯ ಉರಗ ತಜ್ಞ ಡ್ಯಾನಿಯಲ್ ನ್ಯೂಟನ್, ತಿಂಗಳ ಹಿಂದಷ್ಟೇ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸ್ನೇಕ್ ಡ್ಯಾನಿಯಲ್ ಈವರೆಗೆ 3279 ಹಾವನ್ನು ರಕ್ಷಣೆ ಮಾಡಿದ್ದಾನೆ. ಅದರಲ್ಲಿ 1036 ನಾಗರಹಾವು ರಕ್ಷಣೆ ಮಾಡಿದ್ರೆ ಒಟ್ಟು 75 ಬಾರಿ ಡ್ಯಾನಿಯಲ್ ಹಾವಿನಿಂದ ಕಚ್ಚಿಸಿಕೊಂಡಿದ್ದ.
ಕಳೆದ ಜೂನ್ ತಿಂಗಳಲ್ಲಿ ನಾಗರಹಾವಿನ ಮರಿ ಕಚ್ಚಿದ ಪರಿಣಾಮ ಡ್ಯಾನಿಯಲ್ ಪರಿಸ್ಥಿತಿ ಗಂಭೀರವಾಗಿತ್ತು. ಸಾವು ಬದುಕಿನ ಮಧ್ಯೆ ಹೋರಾಡಿ ಬದುಕುಳಿದು, ಪ್ರೀತಿಸಿದವಳೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಆ ಬಳಿಕವೂ ಹಾವು ಹಿಡಿಯುವ ಕಾರ್ಯ ಮುಂದುವರಿಸಿದ್ದರು. ಹಲವು ಬಾರಿ ಅರಣ್ಯ ಇಲಾಖೆ, ಜಿಲ್ಲಾಡಳಿತಕ್ಕೆ ರಕ್ಷಣಾ ಪರಿಕರಗಳನ್ನು ಕೊಡುವಂತೆ ಮನವಿ ಮಾಡಿದ್ರು ಸ್ಪಂದಿಸಿರಲಿಲ್ಲ.
ಬಾಗಲಕೋಟೆ ಸ್ನೇಕ್ ಕ್ಯಾಚರ್ ಡ್ಯಾನಿಯಲ್ ನ್ಯೂಟನ್ ಸೀಗಿಕೇರಿ ಗ್ರಾಮದ ಮನೆಯೊಂದರಲ್ಲಿ ನಾಗರ ಹಾವು ಹಿಡಿಯುವಾಗ ಕಚ್ಚಿದೆ. ತಕ್ಷಣ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಉರಗ ತಜ್ಞ ಡ್ಯಾನಿಯಲ್ ನ್ಯೂಟನ್ ಚಿಕಿತ್ಸೆಗೆ ಸ್ಪಂದಿಸಿಲ್ಲ. ಹೀಗಾಗಿ ಡ್ಯಾನಿಯಲ್ ನ್ಯೂಟನ್ ಬದುಕು ಅಂತ್ಯವಾಗಿರುವ ಸುದ್ದಿ ತಿಳಿದು ಪತ್ನಿ ಹಾಗೂ ಅಪಾರ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತಾಗಿದೆ. ಪತ್ನಿ ಆಸ್ಮಾ ಮೃತ ಡ್ಯಾನಿಯಲ್ ನ್ಯೂಟನ್‍ಗೆ ಮುತ್ತಿಕ್ಕಿ, ಆಕ್ರಂದಿಸಿದ್ದು ಎಲ್ಲರ ಮನಕಲಕುವಂತ್ತಿತ್ತು.

ಡ್ಯಾನಿಯಲ್ ನ್ಯೂಟನ್ ಪತ್ನಿ ಆಸ್ಮಾ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಚಿಸಿದ್ವಿ, ಹಾವು ಹಿಡಿಯೋವಾಗ ಸುರಕ್ಷಿತ ಕ್ರಮ ಅನುಸರಿಸಿದ್ರೆ ಬದುಕುಳಿಯುತ್ತಿದ್ದ ಅಂತ ಕಣ್ಣೀರು ಹಾಕುತ್ತಿದ್ದಾರೆ ಕುಟುಂಬಸ್ಥರು.
ಒಟ್ನಲ್ಲಿ, ಬಾಗಲಕೋಟೆ ಉರಗ ತಜ್ಞ ಡ್ಯಾನಿಯಲ್ ನ್ಯೂಟನ್ ಹಾವು ರಕ್ಷಣೆಯ ಕಾರ್ಯದಲ್ಲಿ ಹಾವಿನಿಂದಲೇ ಇಹಲೋಕ ತ್ಯಜಿಸಿದ್ದು ನೋವಿನ ಸಂಗತಿ. ಡ್ಯಾನಿಯಲ್ ನ್ಯೂಟನ್ ದೇಹದಾನದ ಮೂಲಕ ಸಾವಿನಲ್ಲೂ ಮಾನವೀಯತೆ, ಸಾರ್ಥಕತೆ ಮೆರೆದಿದ್ದಾರೆ.
ವರದಿ, ಫೋಟೋ ಕೃಪೆ: ಮಠಪತಿ,
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








