ಗರುಡಪುರಾಣ ಪ್ರಕಾರ ಇಂತವರ ಮನೇಲಿ ಊಟ ಮಾಡಲೇಬಾರದು..
ಮೊದಲನೆಯದಾಗಿ ಕಳ್ಳ ಅಥವಾ ಅಪರಾಧಿಯ ಮನೆಯಲ್ಲಿ ಯಾವತ್ತೂ ಆಹಾರ ಸೇವನೆ ಮಾಡಬಾರದು.
ಗರುಡ ಪುರಾಣದ ಪ್ರಕಾರ, ಒಬ್ಬ ಕಳ್ಳನ ಮನೆಯಲ್ಲಿ ಊಟ ಮಾಡುವುದರಿಂದ ಆತ ಮಾಡಿದಂತಹ ದುಷ್ಕೃತ್ಯಗಳಲ್ಲಿ ಪಾಲುದಾರರಾಗುತ್ತೀವಿ. ಒಬ್ಬ ಕಳ್ಳ ಕುಕೃತ್ಯಗಳನ್ನು ಮಾಡಿ, ಅದರಿಂದ ಬಂದ ಹಣದಿಂದ ಆಹಾರವನ್ನು ಖರೀದಿ ಮಾಡಿರುತ್ತಾನೆ. ಈ ಆಹಾರವನ್ನು ತಿಂದರೇ ನಮಗೂ ಕೂಡ ಕಳ್ಳತನದಲ್ಲಿ ಭಾಗಿಯಾದ ಫಲ ಸಿಗುತ್ತೆ.
2ನೇಯದಾಗಿ ಕೆಟ್ಟ ನಡತೆಯ ಮಹಿಳೆಯ ಮನೆಯಲ್ಲಿ ಊಟ ಮಾಡಬಾರದು.
ಯಾಕೆಂದ್ರೆ ಆ ಮಹಿಳೆಯು ಉದ್ದೇಶಪೂರ್ವಕವಾಗಿ ಮೋಸ, ಅನೈತಿಕತೆ ಮತ್ತು ಇತರ ಕೆಲವೊಂದು ಕೆಟ್ಟ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾಳೆ. ಇದು ದೇವರ ದೃಷ್ಟಿಯಲ್ಲಿ ತಪ್ಪು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈಕೆಯ ಮನೆಯಲ್ಲಿ ಆಹಾರ ಸೇವನೆ ಮಾಡಬಾರದು. ಒಂದು ವೇಳೆ ಸೇವನೆ ಮಾಡಿದ್ರೆ ಆಕೆಯ ಪಾಪಕರ್ಮದಲ್ಲಿ ನೀವು ಕೂಡ ಪಾಲುದಾರರು ಆಗುತ್ತೀರಿ.
3ನೇಯದಾಗಿ ದುಬಾರಿ ಬಡ್ಡಿಗೆ ಸಾಲ ಕೊಡುವಾತನ ಮನೆಯಲ್ಲಿ ಆಹಾರ ಸೇವಿಸಬಾರದು.
ಕಾರಣ, ಈತ ಅತೀ ಆಸೆಯಿಂದಾಗಿ ದುಬಾರಿ ಬಡ್ಡಿಗೆ ಹಣವನ್ನು ಸಾಲದ ರೂಪದಲ್ಲಿ ನೀಡುವನು. ಇಂಹತ ವ್ಯಕ್ತಿಗಳು ಸಮಸ್ಯೆಯಲ್ಲಿರುವವರನ್ನು ಗುರಿಯಾಗಿಸಿಕೊಂಡು ಅವರಿಂದ ಲಾಭ ಪಡೆದುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಹಣಕ್ಕಾಗಿ ಇವರು ತಮ್ಮ ಸ್ನೇಹಿತರನ್ನು ಕೂಡ ತಮ್ಮ ಮೋಸದ ಜಾಲದಲ್ಲಿ ಬೀಳಿಸುತ್ತಾರೆ. ಹೀಗಾಗಿ ಇಂತಹವರ ಮನೆಯಲ್ಲಿ ಎಂದಿಗೂ ಆಹಾರ ಸೇವನೆ ಮಾಡಬಾರದೆಂದು ಗರುಡ ಪುರಾಣ ಹೇಳುತ್ತೆ.
4ನೇಯದಾಗಿ ಕೆಟ್ಟ ಕೋಪ ಬರುವ ವ್ಯಕ್ತಿಯ ಮನೆಯಲ್ಲಿ ಯಾವತ್ತೂ ಆಹಾರ ಸೇವನೆ ಮಾಡಬಾರದು. ಯಾಕಂದ್ರೆ ತನ್ನ ಕೋಪದ ಮೇಲೆ ನಿಯಂತ್ರಣ ಇಲ್ಲದೆ ಇರುವಂತಹ ವ್ಯಕ್ತಿ ತುಂಬಾ ಅಪಾಯಕಾರಿಯಾಗಿರುವರು. ಕೋಪದಲ್ಲಿ ಇವರು ನಿಮ್ಮ ಮೇಲೆ ಕೂಡ ದಾಳಿ ಮಾಡಬಹುದು. ಇಂತಹವರ ಮನೆಯಲ್ಲಿ ನೀವು ಆಹಾರ ಸೇವನೆ ಮಾಡಲೇಬಾರದು.
5ನೇಯದಾಗಿ ದುಷ್ಟ ವ್ಯಕ್ತಿ ಮತ್ತು ದುಷ್ಟ ರಾಜನ ಮನೆಯಲ್ಲಿ ಊಟ ಮಾಡಬಾರದು. ಇಲ್ಲಿ ರಾಜ ಅಂದ್ರೆ ಈಗಿನ ರಾಜಕಾರಣಿಗಳು.
ದುಷ್ಟ ವ್ಯಕ್ತಿ ಮತ್ತು ದುಷ್ಟ ರಾಜಕಾರಣಿ ಜನರನ್ನು ದುರ್ಬಳಕೆ ಮಾಡಿಕೊಂಡು ಹಣ ಸಂಪಾದಿಸುತ್ತಾನೆ. ಇವರು ಪ್ರಾಮಾಣಿಕರ ಭಾವನೆಗಳಿಗೆ ಘಾಸಿ ಉಂಟು ಮಾಡಿ ಹಣ ಸಂಪಾದನೆ ಮಾಡ್ತಾರೆ. ಅದೇ ಹಣದಲ್ಲಿ ಆಹಾರ ಖರೀದಿ ಮಾಡ್ತಾರೆ. ಇಂತಹ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಯಾವುದೇ ಸಂದರ್ಭದಲ್ಲೂ ನಿಮ್ಮನ್ನು ಕೂಡ ಬಂಧಿಯಾಗಿಸಬಹುದು. ಈ ಕಾರಣಕ್ಕಾಗಿ ಇಂತಹ ಮನೆಯಲ್ಲಿ ಊಟ ಮಾಡಬಾರದು.
ಆರನೇಯದಾಗಿ ಮಾದಕ ವ್ಯಸನಿಗಳ ಮನೆಯಲ್ಲಿ ಆಹಾರ ಸೇವಿಸಬಾರದು. ಇವರು ಹಣಕ್ಕಾಗಿ ಏನು ಬೇಕಾದರೂ ಮಾಡುವರು. ಇಂತವರ ಸಂಗವು ಒಬ್ಬರ ಜೀವನವನ್ನು ಹಾಳು ಮಾಡಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









