ಕೋತಿ ದಾಳಿಯಿಂದ ಬಿಜೆಪಿ ಶಾಸಕ ರೇಣುಕಾಚಾರ್ಯ ಬಚಾವ್
ಈ ಹಿಂದೆ ಹೋರಿಯಿಂದ ಗುಮ್ಮಿಸಿಕೊಂಡಿದ್ದ ಶಾಸಕ ರೇಣುಕಾಚಾರ್ಯ ಈ ಬಾರಿ ಕೋತಿಯಿಂದ ಬಚಾವ್ ಆಗಿದ್ದಾರೆ.
ಹೌದು..! ಹೊನ್ನಾಳಿ ಪಟ್ಟಣದ ತಾಲೂಕು ಕಚೇರಿ ಮುಂದೆ ಒಂದು ತಿಂಗಳಿನಿಂದ ಕೋತಿವೊಂದು ಸ್ಥಳೀಯರಿಗೆ ತೊಂದರೆ ಕೊಡುತ್ತಿದೆ.
ಸುಮಾರು 20ಕ್ಕೂ ಹೆಚ್ಚು ಮಂದಿಯ ಮೇಲೆ ಈ ಕೋತಿ ದಾಳಿ ಮಾಡಿದೆ. ಇಂದು ಶಾಸಕ ರೇಣುಕಾಚಾರ್ಯ ತಾಲೂಕು ಕಚೇರಿಗೆ ತೆರಳಿದ್ದು, ಈ ವೇಳೆ ಅವರ ಮೇಲೆ ಕೋತಿ ದಾಳಿ ಮಾಡಲು ಮುಂದಾಗಿದೆ.
ಆದ್ರೆ ಶಾಸಕರು ಕೋತಿ ದಾಳಿಯಿಂದ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಈ ಹಿಂದೆ ಹೋರಿಯಿಂದ ರೇಣುಕಾಚಾರ್ಯ ಗುಮ್ಮಿಸಿಕೊಂಡಿದ್ದರು. ಇದಾಗ ಬಳಿಕ ಟಗರ ಕಾಳಗದ ವೇಳೆ ಎರಡು ಟಗರುಗಳ ಕೊಂಬು ಹಿಡಿದು ಪರಸ್ಪರ ಕಾದಾಡುವಂತೆ ಶಾಸಕರು ಪ್ರೇರೇಪಿದ್ದರು.
ಈ ವೇಳೆ ಒಂದು ಟಗರು ಬಂದು ಡಿಚ್ಚಿ ಹೊಡೆದಿದೆ. ಕೂಡಲೇ ಎಚ್ಚೆತ್ತ ರೇಣುಕಾಚಾರ್ಯ ಬೇಗನೆ ಕೈಯನ್ನ ಹಿಂದಕ್ಕೆ ತೆಗೆದುಕೊಳ್ಳುವ ಮೂಲಕ ಅನಾಹುತದಿಂದ ಪಾರಾಗಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel