ರಜನಿಕಾಂತ್ ಜೊತೆ ರಾಜಕೀಯ ಮೈತ್ರಿ : ಕಮಲ್ ಹಾಸನ್ ಸ್ಪಷ್ಟನೆ
ಚೆನ್ನೈ : ಡಿಸೆಂಬರ್ 31 ರಂದು ರಾಜಕೀಯ ಪ್ರವೇಶದ ಕುರಿತು ಅಧಿಕೃತ ಮಾಹಿತಿ ನೀಡುವುದಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ತಿಳಿಸಿದ್ದಾರೆ.
ಮುಂದಿನ ತಮಿಳುನಾಡು ವಿಧಾನಸಭಾ ಚುನಾವಣೆಲ್ಲಿ ಸ್ಪರ್ಧಿಸುವುದಾಗಿ ರಜಿನಿ ತಿಳಿಸಿದ್ದಾರೆ.
ಏತನ್ಮಧ್ಯೆ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿರುವ ನಟ ಹಾಗೂ ಮಕ್ಕಲ್ ನೀದಿ ಮೈಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ರಜಿನಿ ಜೊತೆ ರಾಜಕೀಯ ಮೈತ್ರಿ ಬಗ್ಗೆ ಮಾಹಿತಿ ನೀಡಿದ್ದಾರೆ.
ರಜಿನಿ ಜೊತೆ ರಾಜಕೀಯ ಮೈತ್ರಿ ಬಗೆಗಿನ ಪ್ರಶ್ನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಮಲ್ ಹಾಸನ್, ರಾಜಕೀಯ ತತ್ವ, ಆದರ್ಶಗಳು ಹೊಂದಿಕೆಯಾದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ ಸೇರಿ ಕೆಲಸ ಮಾಡಲು ಸಿದ್ಧನಿದ್ದೇನೆ.
ಇದನ್ನೂ ಓದಿ : ಕೋತಿ ದಾಳಿಯಿಂದ ಬಿಜೆಪಿ ಶಾಸಕ ರೇಣುಕಾಚಾರ್ಯ ಬಚಾವ್
ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಈಗಾಗಲೆ ಮಾಹಿತಿ ನೀಡಿದ್ದು, ತಮ್ಮ ಮತ್ತು ರಜನಿಕಾಂತ್ ಅವರ ರಾಜಕೀಯ ತತ್ವ, ಆದರ್ಶಗಳು ಹೊಂದಿಕೆಯಾದರೆ ಖಂಡಿತಾ ಒಟ್ಟು ಸೇರಿ ಕೆಲಸ ಮಾಡುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ.
ರಾಜ್ಯದ ಜನತೆಗೆ ಪ್ರಯೋಜನವಾಗುವುದಾದರೆ ನಮ್ಮ ಅಹಂ ಭಾವನೆಗಳನ್ನು ತೆಗೆದುಹಾಕಿ ಒಂದಾಗುತ್ತೇವೆ. ಆದರೆ ತಾವು ನಿರ್ಧಾರಕ್ಕೆ ಬರುವ ಮೊದಲು ರಜನಿಕಾಂತ್ ಅವರ ಪಕ್ಷದ ತತ್ವ, ಆದರ್ಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ ಕಮಲ್ ಹಾಸನ್.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel