50ನೇ ವಿಜಯ್ ದಿವಸ್ ಸಂಭ್ರಮ : ಶುಭ ಕೋರಿದ ‘ರಾಗಾ’
ಇಂದು ದೇಶಾದ್ಯಂತ 50ನೇ ವಿಜಯ್ ದಿವಸ್ ಸಂಭ್ರಮಾಚರಣೆ ಮನೆಮಾಡಿದೆ. 1971ರ ಯುದ್ಧದ 50 ನೇ ವರ್ಷಾಚರಣೆ ಹಿನ್ನೆಲೆ ಅನೇಕ ರಾಜಕೀಯ ಗಣ್ಯರು ಶುಭಕೋರುತ್ತಿದ್ದಾರೆ. ಪ್ರದಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರು ವಿಶ್ ಮಾಡಿದ್ದಾರೆ ಅದರಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಹ ಶುಭಕೋರಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು ‘ಆಗಿನ ಕಾಲದಲ್ಲಿ ನಮ್ಮ ದೇಶದ ಪ್ರಧಾನಿ ಅವರನ್ನು ನೆರೆ ರಾಷ್ಟ್ರಗಳು ಗುರುತಿಸುತ್ತಿದ್ದವು. ನಮ್ಮ ಗಡಿ ದಾಟಲು ಭಯಪಡುತ್ತಿದ್ದವು. 1971ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ಐತಿಹಾಸಿಕ ವಿಜಯವನ್ನು ತನ್ನದಾಗಿಸಿಕೊಂಡಿತು. ಇದಕ್ಕಾಗಿ ನಾನು ಜನರಿಗೆ ಶುಭಶಾಯ ಕೋರುತ್ತೇನೆ. ಭಾರತೀಯ ಸೇನೆಯ ಶೌರ್ಯಕ್ಕೆ ನಮನ ಸಲ್ಲಿಸುತ್ತೇನೆ’ ಎಂದಿದ್ದಾರೆ.
50ನೇ ‘ವಿಜಯ್ ದಿವಸ್’ : ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ‘ನಮೋ’ ಗೌರವ ನಮನ..!
ಇನ್ನೂ 1971ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ ಪ್ರತೀಕವಾಗಿ ‘ವಿಜಯ್ ದಿವಸ್’ ಅನ್ನ ಪ್ರತಿ ವರ್ಷ ಡಿ. 16ರಂದು ಆಚರಣೆ ಮಾಡಲಾಗುತ್ತೆ. ಅಂದ್ಹಾಗೆ ಯುದ್ಧದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದರು. ಅಲ್ಲದೇ ಅದೇ ದಿನವೇ ಬಾಂಗ್ಲಾದೇಶ ಕೂಡ ರಚನೆಯಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








