ಪಿಎಂ ಕಿಸಾನ್ 7 ನೇ ಕಂತು ಬಿಡುಗಡೆ: ಹಣವನ್ನು ಜಮಾ ಮಾಡಲಾಗಿದೆಯೆ ಅಥವಾ ಇಲ್ಲವೇ ಎಂದು ಹೇಗೆ ಪರಿಶೀಲಿಸುವುದು – ಇಲ್ಲಿದೆ ಮಾಹಿತಿ PM Kisan 7th instalment
ಹೊಸದಿಲ್ಲಿ, ಡಿಸೆಂಬರ್17 : ಕೇಂದ್ರ ಸರ್ಕಾರವು ದೇಶದ ಕೋಟ್ಯಾಂತರ ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಏಳನೇ ಕಂತಿನ ಮೊತ್ತವನ್ನು ಸರ್ಕಾರ ಅವರ ಖಾತೆಗೆ ವರ್ಗಾಯಿಸುತ್ತಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಏಳನೇ ಕಂತಿನ ಹಣ ಬಿಡುಗಡೆಯನ್ನು ಬಹಳ ಕಾಲದಿಂದ ನಿರೀಕ್ಷಿಸಲಾಗಿದ್ದು ಈಗ ಹಣ ಬಿಡುಗಡೆಯಾಗಿದೆ. PM Kisan 7th instalment
ಕೇಂದ್ರ ಸರಕಾರ ಪ್ರತಿ ವರ್ಷ ಮೂರು ಕಂತುಗಳಲ್ಲಿ 2ಸಾವಿರದಂತೆ ರೈತರ ಖಾತೆಗೆ 6000 ರೂ. ನೀಡುತ್ತಿದೆ. ನೀವು ಈ ಯೋಜನೆಯ ಫಲಾನುಭವಿಯಾಗಿದ್ದು, ಇದುವರೆಗೂ ಕಂತಿನ ಹಣ ನಿಮ್ಮ ಖಾತೆಗೆ ತಲುಪದೇ ಇದ್ದರೆ, ನೀವು ಒಂದು ಸರಳ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ.
ಬ್ಯಾಂಕ್ ಖಾತೆಯಲ್ಲಿ FTO ತೋರಿಸುತ್ತಿದ್ದರೆ
ನೀವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಯಾಗಿದ್ದು, ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲವಾದರೆ ಮತ್ತು FTO (ಫಂಡ್ ಟ್ರಾನ್ಸ್ ಫರ್ ಆರ್ಡರ್) ತೋರಿಸುತ್ತಿದ್ದರೆ ಗಾಬರಿಯಾಗಬೇಡಿ. ಅಂದರೆ ನಿಮ್ಮ ಮಾಹಿತಿಯನ್ನು ಸರ್ಕಾರ ಅದನ್ನು ಪರಿಶೀಲಿಸಿದ್ದು, ಶೀಘ್ರವೇ ಹಣ ನಿಮ್ಮ ಖಾತೆಗೆ ಬರಲಿದೆ.
ಬ್ಯಾಂಕ್ ಖಾತೆಯಲ್ಲಿ RFT ಸಂದೇಶವು ತೋರಿಸಿದ್ದರೆ
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಫ್ ಟಿಎ ನ ಸ್ಥಾನದಲ್ಲಿ ವಿನಂತಿ ಬರುತ್ತಿದ್ದರೆ, ನೀವು ಕಳುಹಿಸಿದ ಮಾಹಿತಿಯನ್ನು ಸರ್ಕಾರ ಪರಿಶೀಲಿಸಿದ್ದು ಅದನ್ನು ಮುಂದಿನ ಪ್ರಕ್ರಿಯೆಗೆ ಕಳುಹಿಸಲಾಗಿದೆ ಎಂದು ಇದರ ಅರ್ಥ . ಸದ್ಯದಲ್ಲೇ ಹಣ ನಿಮ್ಮ ಖಾತೆಗೆ ಬರಲಿದೆ.
ಆನ್ ಲೈನ್ ನಲ್ಲಿ ನಿಮ್ಮ ಸ್ಟೇಟಸ್ ಅನ್ನು ಈ ರೀತಿ ಪರಿಶೀಲಿಸಿ..!
ಆನ್ ಲೈನ್ ನಲ್ಲಿ ನಿಮ್ಮ ಸ್ಟೇಟಸ್ ನೋಡಲು ನೀವು https://pmkisan.gov.in/ ಭೇಟಿ ನೀಡಿ .
ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಈಗ ಹೊಸ ಪುಟ ತೆರೆಯುತ್ತದೆ.
ಎರಡನೇ ಹಂತ: ಹೊಸ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಬರೆಯಿರಿ, ನಂತರ ನಿಮ್ಮ ಖಾತೆ ಸಂಖ್ಯೆ, ಮತ್ತು ಮೊಬೈಲ್ ನಂಬರ್ ನಮೂದಿಸಬೇಕು. ನಂತರ, ʼಡೇಟಾ ಪಡೆಯಿರಿʼ ಮೇಲೆ ಕ್ಲಿಕ್ ಮಾಡಿ . ನಂತರ ನಿಮ್ಮ ಸ್ಟೇಟಸ್ ಬಗ್ಗೆ ನಿಮಗೆ ಮಾಹಿತಿ ದೊರೆಯುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎಂದರೇನು?
ಈ ಯೋಜನೆಯಡಿ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ರೈತರ ಬ್ಯಾಂಕ್ ಖಾತೆಗಳಿಗೆ ಪ್ರತಿ ವರ್ಷ 6 ಸಾವಿರ ರೂ ಯನ್ನು 2 ಸಾವಿರ ರೂ.ಗಳಂತೆ ಮೂರು ಕಂತುಗಳಲ್ಲಿ ವರ್ಗಾವಣೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಈ ಯೋಜನೆ ಸಣ್ಣ ಮತ್ತು ಮಧ್ಯಮ ರೈತರಿಗೆ ಸಹಾಯ ಮಾಡುವುದಾಗಿದ್ದು, ಈ ಯೋಜನೆಯನ್ನು 2019ರಲ್ಲಿ ಪ್ರಧಾನಿ ಮೋದಿ ಅವರು ಪ್ರಾರಂಭಿಸಿದರು.
ಆರ್‌ಬಿಐ 2021 ರ ಜನವರಿ 1 ರಿಂದ ಜಾರಿಗೊಳಿಸಲಿರುವ ಹೊಸ ವೇತನ ವ್ಯವಸ್ಥೆ ಬಗ್ಗೆ ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ನೀವು ಇನ್ನೂ ನೋಂದಾಯಿಸಿಕೊಂಡಿಲ್ಲವಾದರೆ, ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ನೋಂದಾಯಿಸುವ ಮೊದಲು ನೀವು ಕೆಲವು ದಾಖಲೆಗಳನ್ನು ಹೊಂದಿರಬೇಕು. ನೀವು ಕೃಷಿ ಭೂ ಕಾಗದವನ್ನು ಹೊಂದಿರಬೇಕು. ಇದಲ್ಲದೆ ಆಧಾರ್ ಕಾರ್ಡ್, ನವೀಕರಿಸಿದ ಬ್ಯಾಂಕ್ ಖಾತೆ, ವಿಳಾಸ ಪುರಾವೆ, ಕೃಷಿ ಮಾಹಿತಿ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಅಗತ್ಯವಿದೆ. ನೀವು ಈ ಎಲ್ಲವನ್ನು ಹೊಂದಿದ್ದರೆ, ಮನೆಯಲ್ಲಿ ಕುಳಿತುಕೊಂಡು ಈ ಯೋಜನೆಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಬಹುದು.
ಮೊದಲ ಹಂತ: ಪಿಎಂ ಕಿಸಾನ್ ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ (https://pmkisan.gov.in/). ಹೊಸ ನೋಂದಣಿ ಆಯ್ಕೆ ಇಲ್ಲಿ ಲಭ್ಯವಿರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಈಗ ಹೊಸ ಪುಟ ತೆರೆಯುತ್ತದೆ.
ಎರಡನೇ ಹಂತ: ಹೊಸ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಬರೆಯಿರಿ, ನಂತರ ನೋಂದಣಿ ಫಾರ್ಮ್ ತೆರೆಯುತ್ತದೆ.
ಮೂರನೇ ಹಂತ: ಸಂಪೂರ್ಣ ಮಾಹಿತಿಯನ್ನು ನೋಂದಣಿ ರೂಪದಲ್ಲಿ ನೀಡಬೇಕಾಗಿದೆ. ಉದಾಹರಣೆಗೆ, ನೀವು ಯಾವ ರಾಜ್ಯದಿಂದ ಬಂದಿದ್ದೀರಿ, ಯಾವ ಜಿಲ್ಲೆ, ನಿಮ್ಮ ಬ್ಲಾಕ್ ಅಥವಾ ಹಳ್ಳಿಯ ಬಗ್ಗೆ ಮಾಹಿತಿಯನ್ನು ನೀಡಬೇಕು. ಇದಲ್ಲದೆ, ರೈತರು ತಮ್ಮ ಹೆಸರು, ಲಿಂಗ, ವರ್ಗ, ಆಧಾರ್ ಕಾರ್ಡ್ ಮಾಹಿತಿ, ಹಣವನ್ನು ವರ್ಗಾಯಿಸುವ ಬ್ಯಾಂಕ್ ಖಾತೆ ಸಂಖ್ಯೆ, ಅದರ ಐಎಫ್‌ಎಸ್‌ಸಿ ಕೋಡ್, ವಿಳಾಸ, ಮೊಬೈಲ್ ಸಂಖ್ಯೆ, ಹುಟ್ಟಿದ ದಿನಾಂಕ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.
ಇದಲ್ಲದೆ, ನಿಮ್ಮ ಜಮೀನಿನ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿದೆ. ಸಮೀಕ್ಷೆ ಅಥವಾ ಖಾತೆ ಸಂಖ್ಯೆ, ಖಾಸ್ರಾ ಸಂಖ್ಯೆ, ಎಷ್ಟು ಭೂಮಿ, ಈ ಎಲ್ಲ ಮಾಹಿತಿಯನ್ನು ನೀಡಬೇಕಾಗಿದೆ. ಎಲ್ಲಾ ಮಾಹಿತಿಯನ್ನು ನೀಡಿದ ನಂತರ, ನೋಂದಣಿಗಾಗಿ ಫಾರ್ಮ್ ಅನ್ನು ಸಲ್ಲಿಸಬೇಕು. ಭವಿಷ್ಯದಲ್ಲಿ ನೀವು ಈ ಎಲ್ಲಾ ಮಾಹಿತಿಯನ್ನು ತಿಳಿಯಲು ಸಹ ಸುರಕ್ಷಿತಗೊಳಿಸಬಹುದು.
ನೀವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಿದರೆ, ನೀವು ಕೃಷಿ ಸಚಿವಾಲಯದ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಪಿಎಂ-ಕಿಸಾನ್ ಸಹಾಯವಾಣಿ 155261 ಅಥವಾ ಟೋಲ್ ಫ್ರೀ 1800115526 ಅಥವಾ ಪಿಎಂ ಕಿಸಾನ್ ಸಚಿವಾಲಯದ ಸಂಖ್ಯೆ – 011-24300606 ಸಂಪರ್ಕಿಸಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಸೇವಿಸಬೇಕಾದ ಭಾರತೀಯ ಆಹಾರಗಳುhttps://t.co/y67YjE7rOw
— Saaksha TV (@SaakshaTv) December 15, 2020
ಮೊಬೈಲ್ ಚಾರ್ಜಿಂಗ್ ನಲ್ಲಿ ಇಡುವಾಗ ನೆನಪಿಡಬೇಕಾದ ಅಂಶಗಳುhttps://t.co/JUsVugINo3
— Saaksha TV (@SaakshaTv) December 15, 2020