ಬಳಕೆದಾರರಿಗೆ ಶಾಕ್ ನೀಡಿದ ವ್ಯಾಟ್ಸಾಪ್ – 2021ರಲ್ಲಿ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಸ್ಥಗಿತಗೊಳ್ಳಲಿದೆ ವ್ಯಾಟ್ಸಾಪ್ ! WhatsApp Stop Working
ಹೊಸದಿಲ್ಲಿ, ಡಿಸೆಂಬರ್17: ಫೇಸ್ಬುಕ್ ಒಡೆತನದ ವ್ಯಾಟ್ಸಾಪ್ ಬಳಕೆದಾರರಿಗೆ ಶಾಕ್ ನೀಡಿದೆ. ಮುಂದಿನ ವರ್ಷದಿಂದ ಕೆಲವು ಆ್ಯಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲು ವ್ಯಾಟ್ಸಾಪ್ ನಿರ್ಧರಿಸಿದೆ. WhatsApp Stop Working

ಮುಂದಿನ ವರ್ಷದಿಂದ ಕೆಲವು ಸ್ಮಾರ್ಟ್ಫೋನ್ ಮತ್ತು ಐಫೋನ್ನಲ್ಲಿ ವ್ಯಾಟ್ಸಾಪ್ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಐಒಎಸ್ 9 ಮತ್ತು ಆ್ಯಂಡ್ರಾಯ್ಡ್ 4.0.3 ಅಪರೇಟಿಂಗ್ ಸಿಸ್ಟಂನಲ್ಲಿ 2021 ರಿಂದ ವ್ಯಾಟ್ಸಾಪ್ ಬಳಸಲು ಸಾಧ್ಯವಾಗುವುದಿಲ್ಲ ಎಂದು ಅದು ಹೇಳಿದೆ.
ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವಕರಿಗೆ ಎನ್‌ಐಟಿಐ ಆಯೋಗ್‌ನಲ್ಲಿ ಉದ್ಯೋಗಾವಕಾಶ
ವಾಟ್ಸಾಪ್ ಇಲ್ಲಿಯವರೆಗೆ ಹೊಸ ಫೀಚರ್ಗಳನ್ನು ಪರಿಚಯಿಸುತ್ತಾ ಬಂದಿದ್ದು, ಮುಂದಿನ ಹೊಸ ವರ್ಷನ್ಗಳಿಗೆ ಐಫೋನ್ ಐಒಎಸ್ 9 ಮತ್ತು ಆ್ಯಂಡ್ರಾಯ್ಡ್ 4.0.5 ಆಪರೇಟಿಂಗ್ ಸಿಸ್ಟಂ ಬೆಂಬಲ ನೀಡುವುದಿಲ್ಲ. ಹಾಗಾಗಿ ವಾಟ್ಸಾಪ್ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದೆ.
ಆದುದರಿಂದ ಐಫೋನ್ 4, ಐಫೊನ್ 4 ಎಸ್, ಐಫೋನ್ 5, ಐಫೋನ್ 5 ಎಸ್, ಐಫೋನ್ 6, ಐಫೋನ್ 6 ಎಸ್ ಐಒಎಸ್ 9 ಆಪರೇಟಿಂಗ್ ಸಿಸ್ಟಂನಲ್ಲಿ ವ್ಯಾಟ್ಸಾಪ್ ಹೊಸ ವರ್ಷನ್ ಅನ್ನು ಅಪ್ಡೇಟ್ ಮಾಡಲು ಸಾಧ್ಯವಿಲ್ಲದ ಕಾರಣ ವ್ಯಾಟ್ಸಾಪ್ ಬಳಕೆ ಸಾಧ್ಯವಿಲ್ಲ.

ಇನ್ನು ಇದರ ಜೊತೆಗೆ ಆ್ಯಂಡ್ರಾಯ್ಡ್ 4.0.3 ವರ್ಷನ್ಗಳಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್2, ಹೆಟಿಸಿ, ಡಿಸೈರ್, ಎಲ್ಜಿ ಒಪ್ಪಿಮಸ್ ಬ್ಲಾಕ್, ಮೊಟೊರೊಲಾ ಡ್ರೊಯ್ಡ್ ರೇಜರ್ ಮಾಡೆಲ್ಗಳಲ್ಲಿ ಕೂಡ ಹೊಸ ವರ್ಷನ್ ಅಪ್ಡೇಟ್ ಮಾಡಲು ಸಾಧ್ಯವಿಲ್ಲದ ಕಾರಣ ವ್ಯಾಟ್ಸಾಪ್ ಕಾರ್ಯ ನಿರ್ವಹಿಸುವುದಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಸೇವಿಸಬೇಕಾದ ಭಾರತೀಯ ಆಹಾರಗಳುhttps://t.co/y67YjE7rOw
— Saaksha TV (@SaakshaTv) December 15, 2020
ಮೊಬೈಲ್ ಚಾರ್ಜಿಂಗ್ ನಲ್ಲಿ ಇಡುವಾಗ ನೆನಪಿಡಬೇಕಾದ ಅಂಶಗಳುhttps://t.co/JUsVugINo3
— Saaksha TV (@SaakshaTv) December 15, 2020








