ಬೆಳಗಾವಿ: ಚುನಾವಣೆಗಳು ಘೊಷಣೆ ಆಗುತ್ತಿದ್ದಂತೆ ಒಂದೇ ಗಲ್ಲಿಯಲ್ಲಿ ಬೆಳೆದ ಗೆಳೆಯರು ಪರಸ್ಪರ ವಿರೋಧಿಗಳಾಗುವು ಕಾಮನ್. ಕೆಲವೊಂದು ಬಾರಿ ಅಣ್ಣ ತಮ್ಮಂದಿರಲ್ಲೆ ಕಲಹ ಶುರುವಾಗಿಬಿಡುತ್ತೆ.
ಆದರೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಜನ ಕಳೆದ 7 ದಶಕಗಳಿಂದ ಗ್ರಾಮ ಪಂಚಾಯಿತಿ ಚುನಾವಣೆ ಮಾಡಿ ಕೈಗೆ ಶಾಹಿ ಹಾಕಿಕೊಂಡ ಉದಾಹರಣೆಯೇ ಇಲ್ಲ. ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಬ್ಯಾಲೆಟ್ ಪೇಪರ್ ನೋಡೆ ಇಲ್ಲ.

ಬದಲಾಗಿ ಕತ್ತಿ ಸಹೋದರರು ಗ್ರಾಮದ ಸದಸ್ಯರನ್ನು ಸೇರಿಸಿ ತೆಗೆದುಕೊಳ್ಳುವ ಒಮ್ಮತದ ನಿರ್ಧಾರಕ್ಕೆ ಬದ್ದವಾಗಿ ಗ್ರಾಮದ ಅಭಿವೃದ್ದಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಗ್ರೂಪ್ ಪಂಚಾಯ್ತಿ..ಮಂಡಲ ಪಂಚಾಯ್ತಿ ಕಾಲದಿಂದಲೂ ಸಹ ಬೆಲ್ಲದ ಬಾಗೇವಾಡಿಯಲ್ಲಿ ಅವಿರೋಧ ಆಯ್ಕೆ ಮಾತ್ರ ನಡೆಯುತ್ತಿದೆ.

1977ರಲ್ಲಿ ಗ್ರಾಮದಲ್ಲಿ ಒಂದು ಬಾರಿ ಒಂದೇ ವಾರ್ಡಿಗೆ ಚುನಾವಣೆ ನಡೆದಿದ್ದು ಬಿಟ್ಟರೆ ಇಲ್ಲಿಯವರೆಗೂ ಸಹ ಗ್ರಾಮಸ್ಥರು ಅವಿರೋಧ ಆಯ್ಕೆ ಮಾಡುತ್ತ ಬಂದಿದ್ದಾರೆ. ಸದ್ಯ ಗ್ರಾಮದ 9 ವಾರ್ಡುಗಳಿಗೆ 33 ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಸದಸ್ಯರನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿ ಸನ್ಮಾನ ಮಾಡಿ ಗ್ರಾಮದ ಏಳಿಗೆಗಾಗಿ ಶ್ರಮಿಸುವಂತೆ ಕಿವಿಮ ಮಾತು ಹೇಳಿದ್ದಾರೆ.
ಅವಿರೋಧ ಆಯ್ಕೆಯಾದ ಸದಸ್ಯರು ಮಾತನಾಡಿ, ಕತ್ತಿ ಸಹೋದರರ ಪ್ರಯತ್ನದಿಂದ ಅವಿರೋಧ ಆಯ್ಕೆ ಆಗಿದ್ದು ಗ್ರಾಮದ ಅಭಿವೃದ್ದಿಗಾಗಿ ಶ್ರಮಿಸುವುದಾಗಿ ಹೇಳಿದರು. ರಮೇಶ ಕತ್ತಿ ಅವರ ಈ ಸಾಧನೆ ಬಿಜೆಪಿ ಪಕ್ಷದಲ್ಲಿ ಪ್ರಶಂಸೆಗೆ ಕಾರಣವಾಗಿದೆ.

ಅವಿರೋಧ ಆಯ್ಕೆಗಾಗಿ ಗ್ರಾಮದೇವರ ಹೆಸರಿನಲ್ಲಿ ಲಕ್ಷ ಲಕ್ಷಕ್ಕೆ ಹರಾಜು ಹಾಕುವ ಗ್ರಾಮಗಳಿಗೆ ಬೆಲ್ಲದ ಬಾಗೇವಾಡಿ ಗ್ರಾಮಸ್ಥರು ಮಾದರಿಯಾಗಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








