ಜೆಇಇ (ಮುಖ್ಯ) 2021ರ ಪರೀಕ್ಷೆ – ವೇಳಾಪಟ್ಟಿ ಪ್ರಕಟ ; ಮುಂದಿನ ವರ್ಷದಿಂದ ಕನ್ನಡದಲ್ಲೂ ನಡೆಯಲಿದೆ ಪರೀಕ್ಷೆ JEE Main 2021 Exam
ಹೊಸದಿಲ್ಲಿ, ಡಿಸೆಂಬರ್17: ಜೆಇಇ (ಮುಖ್ಯ) 2021ರ ಪರೀಕ್ಷೆ ವೇಳಾಪಟ್ಟಿಯನ್ನು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಅವರು ಬುಧವಾರ ಬಿಡುಗಡೆ ಮಾಡಿದ್ದಾರೆ. ಪ್ರೀಮಿಯರ್ ಐಐಟಿ, ಎನ್‌ಐಟಿಗಳಲ್ಲಿ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆ ಫೆಬ್ರವರಿ 23 ರಿಂದ 26 ರವರೆಗೆ ನಡೆಯಲಿದೆ. ಅಭ್ಯರ್ಥಿಗಳು jeemain.nta.nic.in ನಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. JEE Main 2021 Exam
ಎಂಜಿನಿಯರಿಂಗ್ ಪ್ರವೇಶವು ಮುಂದಿನ ವರ್ಷದಿಂದ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಿನಿಂದ ಅನೇಕ ಪಾಳಿಯಲ್ಲಿ ನಡೆಯಲಿದೆ ಎಂದು ಸಚಿವರು ಹೇಳಿದ್ದಾರೆ.
ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಮ್ಮ ಟ್ವೀಟ್‌ನಲ್ಲಿ ಬುಧವಾರ, ಜೆಇಇ (ಮುಖ್ಯ) ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಿಮ್ಮ ರಚನಾತ್ಮಕ ಸಲಹೆಗಳನ್ನು ಹಂಚಿಕೊಂಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಸಲಹೆಗಳನ್ನು ನಾವು ಪರಿಶೀಲಿಸಿದ್ದೇವೆ. ನಾನು ವೇಳಾಪಟ್ಟಿಯನ್ನು ಇಂದು ಸಂಜೆ 6 ಗಂಟೆಗೆ ಪ್ರಕಟಿಸಲಿದ್ದೇನೆ. ಟ್ಯೂನ್ ಮಾಡಿ ಎಂದಿದ್ದರು. ಅಂದರಂತೆ ಅವರು ಬುಧವಾರ ಸಂಜೆ ವೇಳಾಪಟ್ಟಿ ಪ್ರಕಟ ಮಾಡಿದ್ದಾರೆ.
ಜೆಇಇ ಮೇನ್ಸ್ ನ ಮೊದಲ ಆವರ್ತವು ಫೆಬ್ರವರಿ 23 ರಿಂದ 26 ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದ ಅವರು ಜೆಇಇ ಮೇನ್ಸ್ ಮುಂದಿನ ವರ್ಷದಿಂದ 13 ಭಾಷೆಗಳಲ್ಲಿ ನಡೆಯಲಿದೆ ಎಂದಿದ್ದಾರೆ. ಅವುಗಳಲ್ಲಿ ಇಂಗ್ಲಿಷ್, ಹಿಂದಿ, ಬಂಗಾಳಿ, ಗುಜರಾತಿ, ಅಸ್ಸಾಮಿ, ಕನ್ನಡ, ಮರಾಠಿ, ಪಂಜಾಬಿ, ತಮಿಳು, ತೆಲುಗು, ಉರ್ದು, ಒಡಿಯಾ ಮತ್ತು ಮಲಯಾಳಂ ಸೇರಿವೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಿಳಿಸಿದ್ದಾರೆ.
ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವಕರಿಗೆ ಎನ್‌ಐಟಿಐ ಆಯೋಗ್‌ನಲ್ಲಿ ಉದ್ಯೋಗಾವಕಾಶ
ಈ ಬಾರಿ ಹೊಸ ಪೇಪರ್ ಮಾದರಿಯಲ್ಲಿ, 15 ಪರ್ಯಾಯ ಪ್ರಶ್ನೆಗಳಲ್ಲಿ ಯಾವುದೇ ನಕಾರಾತ್ಮಕ ಅಂಕ ಇರೋದಿಲ್ಲ ಎಂದು ತಿಳಿಸಿದ ಅವರು ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತದ ಪ್ರತಿ ವಿಭಾಗದಲ್ಲಿ ಅಭ್ಯರ್ಥಿಗಳು 90 ಪ್ರಶ್ನೆಗಳಲ್ಲಿ 75 ಅಥವಾ 30 ಪ್ರಶ್ನೆಗಳಲ್ಲಿ 25 ಪ್ರಶ್ನೆಗಳನ್ನು ಉತ್ತರಿಸಬೇಕು ಎಂದು ಇದೇ ವೇಳೆ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್, ಈ ವರ್ಷ ಪರೀಕ್ಷಾ ಆವರ್ತನಗಳ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯಲ್ಲಿ ಪ್ರಾದೇಶಿಕ ಭಾಷೆಯನ್ನು ಸೇರ್ಪಡೆ ಮಾಡಲಾಗಿರುವುದನ್ನು ತಿಳಿಸಿದರು.
ಬದಲಾದ ಪರೀಕ್ಷಾ ಮಾದರಿ, ಪರೀಕ್ಷಾ ಕೇಂದ್ರದ ಸಂಖ್ಯೆ ಹೆಚ್ಚಳದಂತಹ ಪ್ರಮುಖ ಬದಲಾವಣೆಗಳನ್ನು ಕಾಣಬಹುದು. ಐಐಟಿ, ಎನ್ ಐಟಿ, ಇತರ ಕೇಂದ್ರ ಅನುದಾನಿತ ತಾಂತ್ರಿಕ ಸಂಸ್ಥೆಗಳು (ಸಿಎಫ್ ಟಿಐ), ಅನುದಾನಿತ/ಮಾನ್ಯತೆ ಪಡೆದ ರಾಜ್ಯ ಸರಕಾರಗಳ ಮಾನ್ಯತೆ ಪಡೆದ ಸಂಸ್ಥೆಗಳು/ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಬಯಸುವ ಜೆಇಇ ಮೇನ್ಸ್ ಗೆ ಪ್ರತಿವರ್ಷ ಸುಮಾರು 8-9 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿರುತ್ತಾರೆ ಎಂದು ತಿಳಿಸಿದರು.
ಜೆಇಇ ಮೇನ್ 2021 ಪರೀಕ್ಷೆ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ನಾಲ್ಕು ಬಾರಿ ನಡೆಯಲಿದೆ. ಜೆಇಇ ಮೇನ್ ನ ಮೊದಲ ಆವರ್ತವು ಫೆಬ್ರವರಿ 23 ರಿಂದ 26 ರವರೆಗೆ ನಡೆಯಲಿದೆ ಎಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದರು
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯಕರ ಜೀವನಕ್ಕಾಗಿ ಪ್ರತಿದಿನ ಸೇವಿಸಬೇಕಾದ ಭಾರತೀಯ ಆಹಾರಗಳುhttps://t.co/y67YjE7rOw
— Saaksha TV (@SaakshaTv) December 15, 2020
ಮೊಬೈಲ್ ಚಾರ್ಜಿಂಗ್ ನಲ್ಲಿ ಇಡುವಾಗ ನೆನಪಿಡಬೇಕಾದ ಅಂಶಗಳುhttps://t.co/JUsVugINo3
— Saaksha TV (@SaakshaTv) December 15, 2020