ಹಾವೇರಿ: ದೇವಸ್ಥಾನದಲ್ಲಿ ಭಕ್ತಿ ಎಷ್ಟು ಮುಖ್ಯವೋ, ಅದೇ ರೀತಿ ಪಕ್ಷದ ಕಚೇರಿ ಬಗ್ಗೆ ಕಾರ್ಯಕರ್ತರು ಸೇರಿದಂತೆ ಎಲ್ಲರಿಗೂ ಭಕ್ತಿಯೂ ಅಷ್ಟೇ ಮುಖ್ಯ. ದೇವಸ್ಥಾನದ ಪ್ರತಿಯೊಂದು ಕಲ್ಲು ಭಕ್ತಿಯ ಕಥೆ ಹೇಳಿದರೆ, ಬಿಜೆಪಿ ಪಕ್ಷದ ಕಚೇರಿಯ ಕಟ್ಟಡದ ಕಲ್ಲುಗಳು ಕಾರ್ಯಕರ್ತರ ಸೇವೆಯನ್ನು ಹೇಳುತ್ತವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಾವೇರಿಯ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನದ ಕಾಮಗಾರಿ ಪ್ರಾರಂಭೋತ್ಸವ ಹಾಗೂ ಶಿಲಾಫಲಕ ಅನಾವರಣ ಕಾರ್ಯಕ್ರಮ ಹಾಗೂ ನೂತನ ಕಾರ್ಯಾಲಯ ಭವನದ ಕಾಮಗಾರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆಗೂಡಿ ಬಿ.ಸಿ.ಪಾಟೀಲ್ ಗುದ್ದಲಿಪೂಜೆ ನೆರವೇರಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಪಕ್ಷದ ಕಚೇರಿಯ ನಿರ್ಮಾಣದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಭಾಗಿದಾರನೇ. ದೇವಸ್ಥಾನಕ್ಕೆ ಕಲ್ಲುಗಳು ಹೇಗೆ ಮುಖ್ಯವೋ ಅದೇ ರೀತಿ ಪಕ್ಷದ ನಿರ್ಮಾಣದಲ್ಲಿ ಕಾರ್ಯಕರ್ತರ ಸೇವೆ ಶ್ರಮವೂ ಅಷ್ಟೇ ಮುಖ್ಯ ಪಕ್ಷಕ್ಕೆ ವಂತಿಕೆ ಎನ್ನುವುದು ದೇವಸ್ಥಾನಕ್ಕೆ ದಕ್ಷಿಣೆ ನೀಡಿದಂತೆ. ದೇವಸ್ಥಾನದ ಕಟ್ಟಡದ ಬಗ್ಗೆ ಭಕ್ತಿಯಿರುವಂತೆ ಪಕ್ಷದ ಕಚೇರಿಯ ಬಗ್ಗೆಯೂ ಕಾರ್ಯಕರ್ತರು ಸೇರಿದಂತೆ ಎಲ್ಲರಿಗೂ ಗೌರವ ಭಕ್ತಿಯಿರಬೇಕು ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಕಚೇರಿಯ ಶಿಲಾನ್ಯಾಸ ನಡೆದಿರುವುದು ಸಂತೋಷದ ವಿಚಾರ. ಬಿಜೆಪಿಗೆ ಬಂದು ನಾನು ಬಂದು ವರ್ಷವಾಯಿತು. ಕಚೇರಿಯ ಶಿಲಾನ್ಯಾಸದಲ್ಲಿ ಭಾಗವಹಿಸಿರುವುದು ಹೆಮ್ಮೆಯ ವಿಚಾರ. ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಜವಾಬ್ದಾರಿ ಹಂಚಿಕೆಗೆ ಕಚೇರಿ ನಿರ್ಮಾಣವಾಗಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರಾಜ್ಯದ ಮೂಲೆಮೂಲೆ ಸಂಚರಿಸಿ ಪಕ್ಷಕ್ಕೆ ಬಲ ತಂದುಕೊಡುತ್ತಿದ್ದಾರೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ್ ಉದಾಸಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜು ಸೇರಿದಂತೆ ಮತ್ತಿತ್ತರರು ಪಾಲ್ಗೊಂಡಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








