ಕೇಂದ್ರ ಸರ್ಕಾರದಿಂದ ಕಬ್ಬಿನ ರೈತರಿಗೆ ಸಿಹಿ ಸುದ್ದಿ – ಸರ್ಕಾರ ಸಹಾಯಧನ ನೇರವಾಗಿ ರೈತರ ಖಾತೆಗೆ sugarcane farmers
ಹೊಸದಿಲ್ಲಿ, ಡಿಸೆಂಬರ್18: ಕಬ್ಬು ಬೆಳೆಯುವ ರೈತರಿಗೆ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಪಡೆಯಲು ಕೇಂದ್ರ ಸರ್ಕಾರ 3500 ಕೋಟಿ ನೆರವು ಘೋಷಿಸಿದೆ. ಈ ಮೊತ್ತದ ಮೂಲಕ 6 ದಶಲಕ್ಷ ಟನ್ ಸಕ್ಕರೆಯನ್ನು ರಫ್ತು ಮಾಡಲು ಸರ್ಕಾರ ಸಹಾಯಧನ ನೀಡಲಿದೆ. sugarcane farmers

ಈ ಉದ್ದೇಶದ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ಅನುಮೋದಿಸಿದೆ. ಕ್ಯಾಬಿನೆಟ್ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಕಬ್ಬಿನ ರೈತರು ತಮ್ಮ ಹೆಚ್ಚುವರಿ ಸಕ್ಕರೆ ದಾಸ್ತಾನು ಹೊರತೆಗೆಯಲು ಸರ್ಕಾರ ಸಹಾಯ ಮಾಡುತ್ತದೆ ಎಂದು ಹೇಳಿದರು. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ರೈತರ ಬಾಕಿ ಪಾವತಿಸಲು ಅನುಕೂಲವಾಗಲಿದೆ.
ಸಕ್ಕರೆ ಕಾರ್ಖಾನೆಗಳ ಬದಲು ಸರ್ಕಾರ ನೇರವಾಗಿ ರೈತರಿಗೆ ತಮ್ಮ ಖಾತೆಗಳಲ್ಲಿ ಸಹಾಯ ಮೊತ್ತವನ್ನು ನೀಡಲಿದೆ.
ಸಹಾನುಭೂತಿ ಆಧಾರದ ಮೇಲೆ ಉದ್ಯೋಗ ಪಡೆಯಲು ವಿವಾಹಿತ ಮಗಳಿಗೂ ಅವಕಾಶ – ಕರ್ನಾಟಕ ಹೈಕೋರ್ಟ್ ನ ಮಹತ್ವದ ತೀರ್ಪು
2020-21ನೇ ಸಾಲಿಗೆ 6 ದಶಲಕ್ಷ ಟನ್ ವರೆಗೆ ಸಕ್ಕರೆ ರಫ್ತು ಮಾಡಲು ಅನುಕೂಲವಾಗಲಿದೆ ಎಂದು ಜಾವಡೇಕರ್ ಮಾಹಿತಿ ನೀಡಿದರು. ಆಂತರಿಕವಾಗಿ ಮತ್ತು ಅಂತರಾಷ್ಟ್ರೀಯವಾಗಿ ಮಾರ್ಕೆಟಿಂಗ್, ವೆಚ್ಚಗಳನ್ನು ನಿರ್ವಹಿಸುವುದು, ನವೀಕರಣ, ಸಂಸ್ಕರಣೆ ಮತ್ತು ಸಕ್ಕರೆ ಸಾರಿಗೆ ವೆಚ್ಚಗಳಿಗೆ ಸರ್ಕಾರ ಸಹಾಯಧನವನ್ನು ನೀಡುತ್ತದೆ. ಈ ಉದ್ದೇಶಕ್ಕಾಗಿ ಸರ್ಕಾರದಿಂದ ಸುಮಾರು 3,500 ಕೋಟಿ ರೂ ಮೊತ್ತವು ಸಕ್ಕರೆ ಕಾರ್ಖಾನೆಗಳ ಬದಲು ರೈತರ ಖಾತೆಗೆ ಹೋಗುತ್ತದೆ.

ಈ ವರ್ಷ ಸಕ್ಕರೆ ಉತ್ಪಾದನೆ 310 ಲಕ್ಷ ಟನ್ ಆಗಲಿದೆ. ದೇಶದ ಬಳಕೆ 260 ದಶಲಕ್ಷ ಟನ್. ಸಕ್ಕರೆ ಬೆಲೆ ಕಡಿಮೆ ಇರುವುದರಿಂದ ರೈತರು ಮತ್ತು ಉದ್ಯಮ ತೊಂದರೆಗೆ ಸಿಲುಕಿದೆ. ಇದನ್ನು ನಿವಾರಿಸಲು 6 ಮಿಲಿಯನ್ ಟನ್ ಸಕ್ಕರೆಯನ್ನು ರಫ್ತು ಮಾಡಲು ಮತ್ತು ರಫ್ತಿಗೆ ಸಹಾಯಧನ ನೀಡಲು ನಿರ್ಧರಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1339579992452153347?s=19
https://twitter.com/SaakshaTv/status/1339580453573914626?s=19








