ಉಜಿರೆ | ಉದ್ಯಮಿ ಮಗನ `ಅಪಹರಣದ ಹಿಂದೆ ಬಿಟ್ ಕಾಯಿನ್ ದಂಧೆ’
ಬೆಳ್ತಂಗಡಿ : ತಾಲೂಕಿನ ಉಜಿರೆಯ ಉದ್ಯಮಿ ಬಿಜೋಯ್ ಎಂಬವರ ಮಗ ಅನುಭವ್ ಅಪಹರಣ ಪ್ರಕರಣದ ಹಿಂದೆ ಬಿಟ್ ಕಾಯಿನ್ ದಂಧೆಯ ನೆರಳಿದ್ಯಾ ಅನುಮಾನ ಮೂಡಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದಿಂದ ಕಬ್ಬಿನ ರೈತರಿಗೆ ಸಿಹಿ ಸುದ್ದಿ – ಸರ್ಕಾರ ಸಹಾಯಧನ ನೇರವಾಗಿ ರೈತರ ಖಾತೆಗೆ
ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಎಂಟು ವರ್ಷದ ಅನುಭವ್ ಆಟವಾಡಿ ವಾಪಾಸಾಗುತ್ತಿರುವಾಗ ಸಂಜೆ 6.30ರಿಂದ 6.35ರ ವೇಳೆಯಲ್ಲಿ ಅಪಹರಿಸಲಾಗಿದೆ ಎಂದು ಅಜ್ಜ ಎಕೆ ಶಿವನ್ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಅಪಹರಣದ ನಂತರ ಬಿಜೋಯ್ ಅವರ ಮಡದಿಗೆ ಅಪಹರಣಕಾರರು ಕರೆ ಮಾಡಿ ನೂರು ಬಿಟ್ ಕಾಯಿನ್ ಕೇಳಿದ್ದಾರಂತೆ. ಇದು ಭಾರಿ ಚರ್ಚೆಗೆ ಕಾರಣವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐ ಕಾಯಿನ್ ಮತ್ತು ಬಿಟ್ ಕಾಯಿನ್ ದಂಧೆ ವ್ಯಾಪಕವಾಗಿ ಹಬ್ಬಿರುವುದಕ್ಕೆ ಸಾಕ್ಷಿಯಂತೆ ಗೋಚರಿಸುತ್ತಿದೆ.
ಅಂದಹಾಗೆ ಒಂದು ಬಿಟ್ ಕಾಯಿನ್ 17 ಲಕ್ಷ ರೂಪಾಯಿ ಮೌಲ್ಯ ಅಂತ ಅಂದಾಜಿಸಲಾಗಿದ್ದು, 17 ಕೋಟಿಗೆ ಅಪಹರಣಕಾರರು ಬೇಡಿಕೆಯಿಟ್ಟಿದ್ದಾರೆ.
ಏನಿದು ಬಿಟ್ ಕಾಯಿನ್ ಅಂದ್ರೆ ಇದನ್ನು ಡಿಜಿಟಲ್ ಯುಗದ ಕರೆನ್ಸಿ ಅಂತ ಕರೆಯುತ್ತಾರೆ. ಬಿಟ್ ಕಾಯಿನ್ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ಇದಕ್ಕೆ ದೇಶ,ಭಾಷೆ,ಬ್ಯಾಂಕು ಇದ್ಯಾವುದೂ ಇಲ್ಲದೇ ವ್ಯವಹಾರ ನಡೆಸಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








