ನರಕಕ್ಕೆ ಹೋದ್ರೂ,,, ನಾರ್ತ್ ಕೊರಿಯಾ ಬೇಡ..! ಇಲ್ಲಿನ ಕಾನೂನುಗಳು ಎಲ್ಲಿಯೂ ಇಲ್ಲ..!
ವಿಚಿತ್ರ ಕಾನೂನುಗಳು, ವಿಚಾರಗಳು ನಾರ್ತ್ ಕೊರಿಯಾ ಬಿಟ್ರೆ ಬೇರೆಲ್ಲೂ ಇಲ್ಲ..!
ಉತ್ತರ ಕೊರಿಯಾದಯ ಜನರ ಮೇಲೆ ಅನುಕಂಪ ಹುಟ್ಟೋಕೆ ಕಾರಣ ಏನ್ ಗೊತ್ತಾ..!
ಇಂಟರ್ ನೆಟ್ ಇಲ್ಲ, ಸರ್ಕಾರದ ವಿರುದ್ಧ ಧ್ವನಿ ಎತ್ತಂಗಿಲ್ಲ, ‘ಬ್ಲೂ ಬಟ್ಟೆ’ ಹಾಕಿದ್ರೆ ಸಾವೇ ಗತಿ.!
ನಾರ್ತ್ ಕೊರಿಯಾ ಯಾಕೆ ಯಾರಿಗೂ ಇಷ್ಟವಾಗದ ದೇಶ: ಕಾರಣಗಳು..!
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ.. ಭಾರತದಲ್ಲಿ ಎಷ್ಟೋ ವಿಚರಗಳಿಗೆ ನಮಗೆ ಸ್ವಾತಂತ್ರ್ಯವಿದೆ. ಸರ್ಕಾರದ ನಿರ್ಧಾರಗಳನ್ನ ಖಂಡಿಸಿ ವಿರೋಧಿಸುವ ಸ್ವಾತಂತ್ರ್ಯವೂ ನಮಗಿದೆ. ನಮ್ಮ ದೇಶದಲ್ಲಿ ಅನೇಕ ಕಾನೂನುಗಳಿಗೆ. ಅವುಗಳನ್ನೇ ಕೆಲವೊಮ್ಮೆ ಬೈಕೊಂಡು ತಿರುಗಾಡೋರು ಇದ್ದಾರೆ. ಆದ್ರೆ ನೀವು ಒಮ್ಮೆ ವಿಶ್ವದ ಬೇರೆ ಬೇರೆ ದೇಶಗಳ ಕಾನೂನುಗಳ ಬಗ್ಗೆ ತಿಳಿದುಕೊಂಡ್ರೆ ನಿಜಕ್ಕೂ ಭಾರತೀಯರಾಗಿ ಹುಟ್ಟಿರೋದು ಅದೃಷ್ಟ ಅಂದು ಕೊಳ್ತೀರಾ… ಅದ್ರಲ್ಲೂ ನೀವೇನಾದ್ರು ಉತ್ತರ ಕೊರಿಯಾದ ಕಾನೂನುಗಳ ಬಗ್ಗೆ ತಿಳಿದುಕೊಂಡ್ರೆ ನಿಜವಾಗ್ಲೂ ಭಾರತೀಯರಾಗಿರೋದಕ್ಕೆ ಪುಣ್ಯವೆಂಬ ಅನುಭೂತಿ ಪಡೆಯುತ್ತೀರಾ… ಅಲ್ಲದೇ ನಾವು ಉತ್ತರ ಕೊರಿಯಾದಲ್ಲಿ ಜನಿಸಲಿಲ್ಲವಲ್ಲ ಎಂಬ ಖುಷಿಯ ಜೊತೆಗೆ ಅಲ್ಲಿನ ಜನರ ಜೀವನದ ಬಗ್ಗೆ ಮರುಕ ವ್ಯಕ್ತಪಡಿಸೋದು ಗ್ಯಾರಂಟಿ..
ಇನ್ನೂ ಆಡಳಿತ ವೈಖರಿಗೆ ನರಕ ಅನುಭವಿಸುತ್ತಿರುವ ಉತ್ತರ ಕೊರಿಯನ್ನರು ಈಗಾಗಲೇ ಸಾವಿರಾರು ಜನರು ಆ ದೇಶದಿಂದಲೇ ಓಡಿ ಹೋಗಿದ್ದಾರೆ. ವರ್ಷಕ್ಕೆ 1000 ಜನರಾದ್ರೂ ಅಲ್ಲಿಂದ ತಪ್ಪಿಸಿಕೊಂಡು ಹೆಚ್ಚು ಜನರು ದಕ್ಷಿಣ ಕೊರಿಯಾಗೆ ಹೋಗ್ತಾರೆ.
ಉತ್ತರಕೊರಿಯಾದಲ್ಲಿ ಸರ್ವಾಧಿಕಾರಿಗಳ ಆಡಳಿತ.. ಪ್ರಸ್ತುತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ 3 ಅಡಿ ಕಿಮ್ ಜಾಂಗ್ ಉನ್ ಸರ್ವಾಧಿಕಾರವಿದೆ. ಇವನು ಎಂಥಹ ಹುಚ್ಚ ಅನ್ನೋದನ್ನ ಹೇಳೋದೆ ಬೇಡ.. ಈಗ ಅಲ್ಲಿನ ಕೆಲ ವಿಚಿತ್ರ ಕಾನೂನುಗಳ ಬಗ್ಗೆ ನೋಡೋಣ..
ಕಿಮ್ಸ್ ಕುಟುಂಬಕ್ಕೆ ಅಗೌರವ
ಕಿಮ್ಸ್ ಕುಟುಂಬಕ್ಕೆ ಅಗೌರವ ತೋರಿದವರಿಗೆ ಜೈಲು ಗ್ಯಾರಂಟಿ.. ಅದಕ್ಕೂ ಮೀರಿದ್ರೆ ಅವರನ್ನ ಸಾಯಿಸಲಾಗುತ್ತದೆ. ಕೇವಲ ಕುಟುಂಬದವರಿಗಷ್ಟೇ ಅಲ್ಲ ಅವರ, ಹೆಸರಿಗೆ, ಅವರ ಬಾವಚಿತ್ರಗಳಿಗೆ ಅಗೌರವ ತಂದರಿಗೂ ಅಲ್ಲಿ ಉಳಿಗಾಲವಿಲ್ಲ. ಉದಾಹರಣಗೆ ತಾಯಿ ಒಬ್ಬಳು ಮಾಜಿ ಅಧ್ಯಕ್ಷ ಕಿಮ್ ಸಂಗ್ ಭಾವಚಿತ್ರದ ಬದಲಿಗೆ ತಮ್ಮ ಮಕ್ಕಳ ಪ್ರಾಣ ಉಳಿಸಲು ಪ್ರಯತ್ನ ಪಟ್ಟಿದ್ದಳು. ಇದನ್ನೇ ದೊಡ್ಡ ಅಪರಾಧವೆಂದು ಬಿಂಬಿಸಿ ಆಕೆಯನ್ನ ಜೈಲಿಗಟ್ಟಲಾಗಿತ್ತು.
ಬ್ಲೂ ಜೀನ್ಸ್ ಧರಿಸೋದು ಅಪರಾಧ
ಅಪ್ಪಿ ತಪ್ಪಿ ಈ ದೇಶದಲ್ಲಿ ಬ್ಲೂ ಜೀನ್ಸ್ ಹಾಕಿಬಿಟ್ರೆ ಅವರಿಗೆ ಜೈಲು ಪಕ್ಕಾ.. ಇಲ್ಲ ಅಂದ್ರೆ ಇಷ್ಟು ಚಿಕ್ಕ ತಪ್ಪಿಗೆ ಅವರಿಗೆ ಸಾವಿನ ಶಿಕ್ಷೆ ವಿಧಿಸಿದ್ರು ಅಚ್ಚರಿಯಿಲ್ಲ.
ಅಂತರಾಷ್ಟ್ರೀಯ ಕರೆ ಮಾಡಿದ್ರೆ ದೊಡ್ಡ ಅಪರಾಧ
ಉತ್ತರ ಕೊರಿಯಾದಲ್ಲಿ ಸಾಮಾನ್ಯವಾಗಿ ಹೆಚ್ಚು ಫೋನ್ ಗಳು ಇಲ್ಲ. ಅವರಿಗೆ ಹೊರಗಡೆ ಪ್ರಪಂಚದ ಅರಿವೇ ಇರೋದಿಲ್ಲ. ಸಾಮಾನ್ಯವಾಗಿ ಕಿಮ್ ಸಾಮ್ರಾಜ್ಯವನ್ನೇ ಪ್ರಪಂಚ ಅನ್ನುವಂತಹ ಪರಿಸ್ಥಿತಿ ಅಲ್ಲಿನ ಜನರದ್ದಾಗಿದೆ. ಅಂತಹದ್ರಲ್ಲಿ ಅಪ್ಪಿ ತಪ್ಪಿ ಅಲ್ಲಿನ ಜನ ಅಂತರಾಷ್ಟ್ರೀಯ ಫೋನ್ ಕಾಲ್ಸ್ ಮಾಡಿದ್ರೆ ಅವರ ಕಥೆ ಮುಗಿದೇ ಹೋಯ್ತು ಅಂತ ಅರ್ಥ. ಯಾಕಂದ್ರೆ ಇದು ದೊಡ್ಡ ಅಪರಾಧವಂತೆ. 2007ರಲ್ಲಲಿ ವ್ಯಕ್ತಿಯೊಬ್ಬ ಕೆಲ ಬಾರಿ ಅಂತರಾಷ್ಟ್ರೀಯ ಫೋನ್ ಕಾಲ್ಸ್ ಮಾಡಿದ್ದ ಹಿನ್ನೆಲೆ ಆತನನ್ನ ಕೊಲ್ಲಲಾಗಿತ್ತು.
ದೂರದರ್ಶನ
ನಮಗೆ ಕೂತಲ್ಲೇ ಯಾವ ದೇಶದ ಚಾನಲ್ಸ್ ಗಳನ್ನ ಬೇಕಾದ್ರು ನೋಡೋ ಫ್ರೀಡಂ ಇದೆ. ಆದರೆ ಉತ್ತರ ಕೊರಿಯಾದಲ್ಲಿ ಸರ್ಕಾರದ 3 ಚಾನಲ್ ಗಳು ಮಾತ್ರ ಟಿವಿಯಲ್ಲಿ ಬರುತ್ತವೆ. ಆ ಚಾನಲ್ ಗಳಲ್ಲೂ ಕೇವಲ ಕಿಮ್ ಕುಟುಂಬಬದ ಕಾರ್ಯಕ್ರಮಗಳೇ ಬರುತ್ತವೆ. ಅವನ್ನೇ ಜನರು ನೋಡಬೇಕು ಅಷ್ಟೇ.
ವಿದೇಶ ಪ್ರವಾಸ ಮಾಡಿದ್ರೆ ಮರಣದಂಡನೆ ಖಾಯಂ
ನಾರ್ತ್ ಕೊರಿಯಾದ ಜನರಿಗೆ ಬೇರೆ ದೇಶಗಳಿಗೆ ಪ್ರವಾಸ ಮಾಡುವ ಅಧಿಕಾರವಿಲ್ಲ. ಅಪ್ಪಿ ತಪ್ಪಿ ಹಾಗೆ ಹೋದರೆ ಅವರನ್ನ ಜೀವನ ಪೂರ್ತಿ ಜೈಲಿಗಟ್ಟಲಾಗುತ್ತೆ. ಇಲ್ಲದೇ ಇದ್ದರೆ ಅವರಿಗೆ ಮರಣದಂಡನೆ ಶಿಕ್ಷೆ ಖಾಯಂ. ಹೀಗಿದ್ದರು ಕೆಲವರು ಕಿಮ್ ಹುಚ್ಚಾಟದ ಆಡಳಿತದಲ್ಲಿಓದಕ್ಕಿಂತ ಸತ್ತರೆ ಸಾಯೋಣ ಅಂತ ಹೇಗೇಗೋ ಹರಸಾಹಸ ಮಾಡಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ.
ಇಂಟರ್ ನೆಟ್
ಇಡೀ ವಿಶ್ವದಲ್ಲಿ ಈಗ ಎಲ್ಲರೂ ಇಂಟರ್ ನೆಟ್ ಬಳಕೆ ಮಾಡ್ತಾರೆ. ಆದ್ರೆ ಈ ಹುಚ್ಚ ಕಿಮ್ ನ ಸಾಮ್ರಾಜ್ಯದಲ್ಲಿನ ಜನರು ಪಾಪ ಇಂಟರ್ ನೆಟ್ ಕೂಡ ಬಳಸುವ ಹಾಗಿಲ್ಲ. ಕೆಲವೇ ಕೆಲವು ಕ್ಷೇತ್ರಗಳಲ್ಲಿ ಕೆಲವರು ಮಾತ್ರ ಅದ್ರಲ್ಲೂ ಲಿಮಿಟ್ ಆಗಿ ಕೇವಲ ಸರ್ಕಾರದ ಕಾರ್ಯಗಳಿಗಾಗಿ ಇಂಟರ್ ನೆಟ್ ಬಳಸಬಹುದಾಗಿದೆ. ಅದ್ರಲ್ಲೀ ರಾಜಕಾರಣಿಗಳು, ಸರ್ಕಾರಿ ಉನ್ನತ ದರ್ಜೆಯ ಅಧಿಕಾರಿಗಳು, ಮಿಲಿಟರಿ ಕ್ಷೇತ್ರದಲ್ಲಿ ಕಿಮ್ ಜಾಂಗ್ ಉನ್ ಕುಟುಂಬದವರು ಮಾತ್ರ ಇಂಟರ್ ನೆಟ್ ಬಳಸಬಹುದಾಗಿದೆ. ಅದ್ರಲ್ಲೂ Kwangmyong ಎಂಬ ಇಂಟರ್ ನೆಟ್ ಸರ್ವರ್ ನಿಂದ ಮಾತ್ರವೇ ಇಂಟರ್ ನೆಟ್ ಆಕ್ಸಸ್ ಮಾಡಲಾಗಿದೆ.
ವೃತ್ತಿ ಜೀವನದ ಹಕ್ಕು ಜನರಿಗಿಲ್ಲ
ನಮಗೆ ಯಾವ ಕ್ಷೇತ್ರಕ್ಕೆ ಹೋಗಬೇಕು. ಯಾವ ಪ್ರೊಫೇಷನ್ ಚೂಸ್ ಮಾಡಬೇಕು ಅನ್ನೋ ಸ್ವಾತಂತ್ರ್ಯ ನಮಗಿರುತ್ತೆ. ಆದರೆ ಈ ದೇಶದಲ್ಲಿ ಹುಟ್ಟಿದ ಜನರು ಈ ವಿಚಾರದಲ್ಲೂ ಅದೃಷ್ಟವಂತರಲ್ಲ. ಯಾಕಂದ್ರೆ ಅವರು ಯಾವ ವೃತ್ತಿ ಮಾಡಬೇಕು ಯಾವ ಕ್ಷೇತ್ರಕ್ಕೆ ಹೋಗಬೇಕು ಅನ್ನೋದನ್ನು ಅಲ್ಲಿ ಸರ್ಕಾರವೇ ನಿರ್ಧಾರ ಮಾಡುತ್ತೆ. ಹೀಗೆ ತಮ್ಮನ್ನ ಯಾವ ಕೆಲಸಕ್ಕೆ ಆಯ್ಕೆ ಮಾಡ್ತಾರೋ ಅದು ಇಷ್ಟ ಇಲ್ಲದೇ ಹೋದ್ರು, ಅದೇ ಕ್ಷೇತ್ರದಲ್ಲೇ ಬಲವಂತವಾಗಿ ಕೆಲಸ ಮಾಡ್ಬೇಕಾಗುತ್ತೆ.
ಹೇರ್ ಸ್ಟೈಲ್
ಕನಿಷ್ಠ ಪಕ್ಷ ತಮಗೆ ಇಷ್ಟವಾದ ಹೇರ್ ಸ್ಟೈಲ್ ಮಾಡಿಕೊಳ್ಳೋ ಸ್ವಾತಂತ್ರವೂ ಅಲ್ಲಿನ ಜನರಿಗಿಲ್ಲ. ಇನ್ನೂ ವಿಚಿತ್ರ ಅಂದ್ರೆ ಸರ್ಕಾರದಿಂದ 28 ಹೇರ್ ಸ್ಟೈಲ್ ಗಳನ್ನ ನಿಗದಿ ಮಾಡಲಾಗಿದೆ. ಅದ್ರಲ್ಲಿ 18 ಮಹಿಳೆಯರಿಗೆ, 10 ಪುರುಷರಿಗೆ. ಅದೇ ಹೇರ್ ಸ್ಟೈಲ್ ಗಳನ್ನ ಜನರು ಮಾಡಿಸಬೇಕು.
ವಿದೇಶಿ ಪ್ರವಾಸಿಗರು ಮೊಬೈಲ್ ಬಳಸಬಾರದು
ವಿದೇಶಿ ಪ್ರವಾಸಿಗರು ನಾರ್ತ್ ಕೊರಿಯಾಗೆ ಹೋದ್ರೆ ಅವರು ತಮ್ಮ ಮೊಬೈಲ್ ಗಳನ್ನ ಕೊಟ್ಟು ಹೋಗಬೇಕು. ವಾಪಸ್ ತಮ್ಮ ದೇಶಕ್ಕೆ ಹಿಂದಿರುಗುವಾಗ ಮೊಬೈಲ್ ಗಳನ್ನ ವಾಪಸ್ ಪಡೆಯಬಹುದು. ಇನ್ನೂ ಈ ರಾಷ್ಟ್ರದಲ್ಲಿ ವಿದೇಶಿಗರು ಅಲ್ಲಿನ ಕರೆನ್ಸಿ ಬಳಸೋ ಹಾಗಿಲ್ಲ. ತಮ್ಮ ದೇಶದ ಕರೆನ್ಸಿಯನ್ನೇ ಬಳಸಬೇಕು. ಮತ್ತೊಂದು ಸರ್ಕಾರದಿಂದ ವಿದೇಶಿ ಪ್ರವಾಸಿಗರಿಗೆ ಗೈಡ್ ಗಳನ್ನ ನೇಮಿಸಲಾಗಿರುತ್ತೆ. ಆ ಗೈಡ್ ಗಳ ಮಾರ್ಗದರ್ಶನದಂತೆಯೇ ಟ್ರಾವೆಲ್ ಮಾಡಬೇಕಾಗುತ್ತೆ.
ಮಿಲಿಟರಿ ಮಾಂಡೇಟರಿ
ಸೌತ್ ಕೊರಿಯಾದಲ್ಲಿ ಪುರುಷರಿಗೆ ಅದ್ರಲ್ಲೂ ಕೇವಲ 2 ವರ್ಷ ಮಿಲಿಟರಿಯಲ್ಲಿ ಕಾರ್ಯ ನಿರ್ವಹಿಸಬೇಕೆನ್ನೋ ನಿಯಮವಿದೆ. ಆದ್ರೆ ನಾರ್ತ್ ಕೊರಿಯಾದಲ್ಲಿ ಪುರುಷರು 10 ವರ್ಷ ಮಹಿಳೆಯರು 7 ವರ್ಷ ಮಿಲಿಟರಿಯಲ್ಲಿ ಸೇವೆ ಸಲ್ಲಿಸಲೇ ಬೇಕೆನ್ನೋ ಕಾನೂನಿದೆ.
ಸಾಲವನ್ನು ಮರುಪಾವತಿಸಲು ತನ್ನ ಮೂತ್ರಪಿಂಡವನ್ನೇ ಮಾರಾಟಕಿಟ್ಟ !
ಕಿಮ್ ಕುಟುಂಬವರು ಸತ್ರೆ..
ಕಿಮ್ ಕುಟುಂಬದಲ್ಲಿ ಯಾರಾದ್ರು ಸತ್ತರೆ ಜನರು ಕಣ್ಣೀರು ಹಾಕಲೇ ಬೇಕು.. ಬಲವಂತವಾಗಿ ಅಳು ಬಾರದೇ ಇದ್ದರೂ ಜೋರಾಗಿ ಅತ್ತು ಗೌರವ ಸೂಚಿಸಬೇಕು.. ಇಲ್ಲದೇ ಹೋದಲ್ಲಿ ಅವರಿಗೆ ಸಾವು ಹತ್ರ ಆಗಿದೆ ಅಂತನೇ ಅರ್ಥ ..
ನಾರ್ತ್ ಕೊರಿಯಾದಲ್ಲಿ ಇಲ್ಲ ಮೆಕ್ ಡಾಲೆನ್ಸ್
ಮೆಕ್ ಡಾಲೆನ್ಸ್ ಹಾಗೂ ಫಾಸ್ಟ್ ಫುಡ್ ಅಂತೂ ಕೊರಿಯಾದಲ್ಲಿ ಇಲ್ಲವೇ ಇಲ್ಲ. ವೆಸ್ಟರ್ನ್ ಆಹಾರ ಪದ್ದತಿಗೆಎ ಇಲ್ಲಿ ಬ್ರೇಕ್ ಬಿದ್ದಿದೆ.
ಬಿಸಿ ನೀರಲ್ಲಿ ಸ್ನಾನ ಮಾಡೋಹಾಗಿಲ್ಲ
ನಾರ್ತ್ ಕೊರಿಯಾದಲ್ಲಿ ಬಿಸಿ ನೀರಲ್ಲಿ ಸ್ನಾನ ಮಾಡೋ ಹಾಗಿಲ್ಲ. ಮನೆಗಳಿಗೆ ಬಿಸಿ ನೀರಿನ ಸಪ್ಲೈ ಕೂಡ ಇಲ್ಲ.
ಇನ್ನೂ ಅದೆಷ್ಟೋ ಕರ್ಮಕಾಂಡ ಎನ್ನಿಸೋ ಕಾನೂನುಗಳು ಈ ದೇಶದಲ್ಲಿವೆ. ಇದೊಂದು ದೇಶಕ್ಕೆ ಮಾತ್ರ ಸಾಯೋವರೆಗೂ ಹೋಗಬಾರದೂ . ಪಾಪ ಮಾಡಿನೂ ಈ ದೇಶದಲ್ಲಿ ಮಾತ್ರ ಜನಿಸಬಾರದು ಅನ್ನೋದು ನನ್ನ ಅಭಿಪ್ರಾಯ. ಎಷ್ಟೋ ಜನರಿಗೆ ಈ ದೇಶದ ಬಗ್ಗೆ ಕೇಳಿದ್ರೆ ಇದೇ ರೀತಿ ಎನ್ನಿಸೋದ್ರಲ್ಲಿ ತಪ್ಪೇನಿಲ್ಲ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel