ನಟ, ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ ಇನ್ನಿಲ್ಲ
ಬೆಂಗಳೂರು : ಚಂದನವನದ ನಟ ನಿರ್ದೇಶಕ ಬೂದಾಳ್ ಕೃಷ್ಣಮೂರ್ತಿ ಅವರು ಇಂದು ಬೆಳಗಿನ ಜಾವ ಕೆಂಗೇರಿ ಶಿರ್ಕಿ ಅಪಾರ್ಟ್ ಮೆಂಟ್ ನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
1949ರಲ್ಲಿ ಚಿತ್ರದುರ್ಗದಲ್ಲಿ ಜನಿಸಿದ ಕೃಷ್ಣಮೂರ್ತಿ ಅವರು, 1973ರಲ್ಲಿ ಸಿದ್ಧಲಿಂಗಯ್ಯನವರ ಬೂತಯ್ಯನ ಮಗ ಅಯ್ಯು ಚಲನಚಿತ್ರದ ಸಹಾಯಕ ನಿರ್ದೇಶಕರಾಗುವ ಮೂಲಕ ಚಿತ್ರಂಗ ಪ್ರವೇಶಿಸಿದ್ದರು. ಇದಾದ ಬಳಿಕ ಎರಡು ದಂಡೆಯ ಮೇಲೆ, ಒಲವಿನ ಕಾಣಿಕೆ, ಸೀತಾಂಜನೇಯ, ಶುಭಲಗ್ನ, ಲಂಚ ಸಾಮ್ರಾಜ್ಯ ಮುಂತಾದ ಚಿತ್ರಗಳನ್ನು ಬೂದಾಳ್ ನಿರ್ದೇಶಿಸಿದ್ದರು.
ಸಿಎಂ ಬಿಎಸ್ವೈ ಒಪ್ಪಿದ್ರೆ ಶಾಲೆ ಶುರು: ಇಂದೇ ಡೇಟ್ ಫಿಕ್ಸ್ ಆಗುತ್ತಾ..?
ಪ್ರೊಫೆಸರ್, ಶ್ರೀಗಂಧ, ಅರಿಶಿನ ಕುಂಕುಮ, ಬಲ್ ನನ್ಮಗ, ಪ್ರಜಾಶಕ್ತಿ, ನಿರ್ಣಯ, ಆರ್ಯಭಟ ಮುಂತಾದ ಚಿತ್ರಗಳಲ್ಲಿ ಬೂದಾಳ್ ಕೃಷ್ಣಮೂರ್ತಿ ಅಭಿನಯಿಸಿದ್ದರು.
ಇನ್ನು ಕೃಷ್ಣಮೂರ್ತಿ ಅವರ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿಯುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








