ಬೆಂಗಳೂರು: ಜನವರಿ 1ರಿಂದ ಶಾಲೆ-ಕಾಲೇಜುಗಳನ್ನು ಆರಂಭಿಸಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆಸ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿರುವುದನ್ನು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸ್ವಾಗತಿಸಿವೆ.
ಶಾಲೆ ಪ್ರಾರಂಭ ಮಾಡಬಹುದು ಎಂದು ಮುಖ್ಯಮಂತ್ರಿಗಳು ನಿರ್ಧಾರ ಮಾಡಿರುವುದು ಸಂತಸದ ವಿಷಯ. ಆದರೆ, 9 ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನೂ ಒಟ್ಟಿಗೆ ಆರಂಭಿಸಬಹದಿತ್ತು ಎಂದು ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ಹೇಳಿದ್ದಾರೆ.
ಶಾಲೆಗಳನ್ನು ಆರಂಭ ಮಾಡುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ಇದೆ. ಶಿಕ್ಷಣ ಇಲಾಖೆ ಕೋವಿಡ್ ಮಾರ್ಗಸೂಚಿಗಳನ್ನು ರಚಿಸಬೇಕು ಹಾಗೂ ಸಿಲಬಸ್‍ಗಳನ್ನು ಅಂತಿಮ ಮಾಡಬೇಕಿದೆ. ಕೊರೊನಾ ಗೈಡ್‍ಲೈನ್ಸ್ ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ನಿಗದಿ ಮಾಡದೇ ಸರ್ಕಾರಿ ಶಾಲೆಗಳಿಗೂ ನಿಗದಿ ಮಾಡಬೇಕು. ಶಾಲೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಮಾಜ ಹಾಗೂ ಪೋಷಕರು ಏನು ಮಾಡಬೇಕು ? ಏನು ಮಾಡಬಾರದು ? ಎಂಬುದರ ಬಗ್ಗೆ ಸರ್ಕಾರ ಎಸ್‍ಒಪಿ ನಿಗದಿ ಮಾಡಲಿ. ಇದು ಹಂತ-ಹಂತವಾಗಿ ಶಾಲೆ ಪ್ರಾರಂಭಿಸಲು ಅನುಕೂಲ ಆಗುತ್ತದೆ. ಇದನ್ನು ಶಾಸಗಿ ಶಾಲೆಗಳು ಸಂಘದಿಂದ ಸ್ವಾಗತಿಸುತ್ತೇವೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel