ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರುವ ಬಗ್ಗೆ ಹೊರಟ್ಟಿ ಸ್ಪಷ್ಟನೆ
ಹುಬ್ಬಳ್ಳಿ : ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ತೊರೆಯುವ ಬಗ್ಗೆ ಕೆಲ ದಿನಗಳಿಂದ ರಾಜಕೀಯ ವಲಯದಲ್ಲಿ ಮಾತುಗಳು ಹರಿದಾಡುತ್ತಿವೆ. ಈ ಬಗ್ಗೆ ಸಿ.ಎಂ ಇಬ್ರಾಹಿಂ ಅವರು ಬಿಜೆಪಿ ಸೇರುವುದಿಲ್ಲ. ಅವರು ಬಹುಶಃ ಜನತಾದಳ ಸೇರಬಹುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಇಂದು ಸಿ ಎಂ ಇಬ್ರಾಹಿಂ ಅವರು ಹುಬ್ಬಳಿಯ ಬಸವರಾಜ ಹೊರಟ್ಟಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ, ಸಿ.ಎಂ.ಇಬ್ರಾಹಿಂ ಭೇಟಿ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ.
ಹುಬ್ಬಳ್ಳಿಗೆ ಬಂದಾಗೊಮ್ಮೆ ನಾವು ಭೇಟಿಯಾಗುತ್ತಲೇ ಇರುತ್ತೇವೆ. ಸಿ.ಎಂ.ಇಬ್ರಾಹಿಂ ಬಿಜೆಪಿ ಸೇರಲ್ಲ, ಅದು ಉಹಾಪೋಹ. ಅವರು ಜನತಾದಳದಲ್ಲಿ ಮೊದಲಿನಿಂದ ಇದ್ದವರು, ಜನತಾದಳಕ್ಕೆ ಬರಬಹುದು. ಆದರೆ ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕೊರೊನಾ ಸೋಂಕು, ಸಾವಿನ ಪ್ರಮಾಣ ಇಳಿಕೆ: ಆರೋಗ್ಯ ಸಚಿವ ಸುಧಾಕರ್ ಖುಷ್
ಇದೇ ವೇಳೆ ಸಿದ್ದರಾಮಯ್ಯ ಹಾಗೂ ಕುಮರಸ್ವಾಮಿ ವಾಗ್ವಾದದ ಬಗ್ಗೆ ಮಾತನಾಡಿದ ಬಸವರಾಜ್ ಹೊರಟ್ಟಿ, ಅದು ಲವ್ ಮ್ಯಾರೇಜ್ ಆಗಿತ್ತು. ಈಗ ಮುರಿದು ಬಿದ್ದಿದೆ. ಲವ್ ಮ್ಯಾರೇಜ್ ಸಕ್ಸಸ್ ಆಗುವುದಿಲ್ಲ. ಆದ್ದರಿಂದ ಆ ಸಂಬಂಧದ ಕುರಿತು ಈಗ ಮಾತನಾಡುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯವಾಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









