ಡಿ. 21 ರಂದು ಗುರು ಶನಿ ಗ್ರಹಗಳ ಅಪರೂಪದ ಮಿಲನ – ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ವೀಕ್ಷಣೆಗೆ ವ್ಯವಸ್ಥೆ conjunction two planets
ಪುತ್ತೂರು, ಡಿಸೆಂಬರ್20: ಚಳಿಗಾಲದ ಅಯನ ಸಂಕ್ರಾಂತಿಯೆಂದು ಕರೆಯಲ್ಪಡುವ ಇದು ಉತ್ತರ ಗೋಳಾರ್ಧವು ಸೂರ್ಯನಿಂದ ದೂರದಲ್ಲಿರುವ ಸಮಯದ ಹಂತವಾಗಿದೆ. ಇದರ ಪರಿಣಾಮವಾಗಿ ಈ ವರ್ಷ ಈ ಪ್ರದೇಶಕ್ಕೆ ಕಡಿಮೆ ಸೂರ್ಯನ ಬೆಳಕು ಬರುತ್ತದೆ. 2020 ಡಿಸೆಂಬರ್ 21 ರ ಸುದೀರ್ಘ ರಾತ್ರಿ ಖಗೋಳದಲ್ಲಿ ಅಭೂತಪೂರ್ವ ಘಟನೆಯೊಂದು ಘಟಿಸಲಿದೆ. conjunction two planets
ಇದೇ ಡಿಸೆಂಬರ್ 21ರಂದು ಗುರು ಮತ್ತು ಶನಿ ಗ್ರಹಗಳು ಒಂದಕ್ಕೊಂದು ಅಪ್ಪಿಕೊಂಡಂತೆ ಕಾಣಲಿದ್ದು, ಎರಡು ಗ್ರಹಗಳ ಎಂಟು ನೂರು ವರ್ಷಗಳ ಬಳಿಕದ ಮಿಲನಕ್ಕೆ ಸಾಕ್ಷಿಯಾಗಲಿವೆ.
ಗುರು ಮತ್ತು ಶನಿ ಗ್ರಹಗಳು ಪ್ರತಿ 20 ವರ್ಷಗಳಿಗೊಮ್ಮೆ ನೇರ ಕಕ್ಷೆಯಲ್ಲಿ ಸಂಧಿಸುತ್ತವೆಯಾದರೂ ಡಿಸೆಂಬರ್ 21ರಂದು ಹತ್ತಿರವಾಗುವಷ್ಟು ಮತ್ತೆ ಹತ್ತಿರವಾಗಲು 800 ವರ್ಷಗಳು ಬೇಕಾಗುತ್ತದೆಯಂತೆ.
ಗುರು ಮತ್ತು ಶನಿಯಂತಹ ಎರಡು ನಿಧಾನ ಗ್ರಹಗಳ ನಡುವಿನ ಸಂಯೋಗವು ಅಪರೂಪದ ಘಟನೆಯಾಗಿದೆ. ಭೂಮಿಗಿಂತ ಐದು ಪಟ್ಟು ದೂರದಲ್ಲಿರುವ ಗುರು, ಸೂರ್ಯನ ಸುತ್ತ ಪರಿಭ್ರಮಿಸಲು 11.86 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಶನಿಯು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ 2ರಷ್ಟು ದೂರದಲ್ಲಿದ್ದು, ಪರಿಭ್ರಮಿಸಲು 29.46 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಎರಡು ಗ್ರಹಗಳ ಸಂಗಮ ಕಾಣಲು ಕನಿಷ್ಠ 20 ವರ್ಷಗಳು ಬೇಕು.
ಅಂಚೆ ಇಲಾಖೆಯ ನೂತನ ಡಾಕ್ಪೇ ಪೇಮೆಂಟ್ ಅಪ್ಲಿಕೇಶನ್ ಬಿಡುಗಡೆ – ಡೌನ್ಲೋಡ್ ಮಾಡುವುದು ಹೇಗೆ – ಇಲ್ಲಿದೆ ಮಾಹಿತಿ
ಮುಂದಿನ ಬಾರಿ ಗುರು ಮತ್ತು ಶನಿ ಗ್ರಹಗಳ ಸಂಗಮವು ಮಾರ್ಚ್ 2080 ರಂದು ನಡೆಯಲಿದೆ. 2040ರಲ್ಲಿ ಈ ಸಮಾಗಮವನ್ನು ಮತ್ತೊಮ್ಮೆ ಸಂಭವಿಸಲಿದ್ದರೂ ಅಂತರ ಎರಡರಷ್ಟಿರುತ್ತದೆ. ಹಾಗಾಗಿ, 0.1 ಡಿಗ್ರಿ ಅಂತರವಿರುವ ಸಮಾಗಮವನ್ನು ವೀಕ್ಷಿಸಲು ಮಾರ್ಚ್ 2080ರವರೆಗೆ ಕಾಯಬೇಕು.
ಡಿಸೆಂಬರ್ 15ರಿಂದ ಗುರು ಮತ್ತು ಶನಿ ಗ್ರಹಗಳು ಆಕಾಶಕಾಯದಲ್ಲಿ ದೂರ ದೂರದಲ್ಲಿ ಗೋಚರಿಸಲಿದ್ದು,
ನಾವು ಭೂಮಿಯ ಯಾವುದೇ ಭಾಗದಲ್ಲಿ ನಿಂತು ನೈಋತ್ಯ ದಿಕ್ಕಿಗೆ ನೋಡಿದರೆ ಗ್ರಹಗಳನ್ನು ಕಾಣಬಹುದಾಗಿದೆ. ಆದರೆ ಇವುಗಳು ಅಪರೂಪದ ಮಿಲನವನ್ನು ನೋಡಲು ಅಸಾಧ್ಯ.
ಸೂರ್ಯ ಮುಳುಗಿದ 45 ನಿಮಿಷಗಳಿಂದ ಒಂದು ಗಂಟೆ ತನಕ ಈ ವಿಸ್ಮಯ ಗೋಚರವಾಗಲಿದೆ ಎಂದು ಖಗೋಳ ಜ್ಞಾನಿಗಳು ತಿಳಿಸಿದ್ದಾರೆ.
ಈ ಜೋಡಿ ಗ್ರಹಗಳು ಸೂರ್ಯ ಮುಳುಗಿದ ನಂತರ ಕೇವಲ 1 ಗಂಟೆ 45 ನಿಮಿಷ ಮಾತ್ರ ಕಾಣ ಸಿಗುತ್ತದೆ ಎಂದು ಖಗೋಳ ಜ್ಞಾನಿಗಳು ತಿಳಿಸಿದ್ದಾರೆ. ಗುರು ಶನಿ ಗ್ರಹಗಳು ಸೂರ್ಯಾಸ್ತದ ನಂತರ 6.15 ರಿಂದ ರಾತ್ರಿ 8ಗಂಟೆಯವರೆಗೆ ಕಾಣಲಿದ್ದು, ಬಳಿಕ ನೈರುತ್ಯದಲ್ಲಿ ಅಸ್ತವಾಗುತ್ತದೆ.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಆಶ್ರಯದಲ್ಲಿ ಡಿಸೆಂಬರ್ 21ರಂದು ಸಾಯಂಕಾಲ ಪಶ್ಚಿಮಾಕಾರದಲ್ಲಿ ಗೋಚರಿಸುವ ಈ ಆಕಾಶ ವಿಸ್ಮಯದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಕಾಲೇಜಿನ ಕ್ರೀಡಾಂಗಣದಲ್ಲಿ ಸಾಯಂಕಾಲ 6.30 ರಿಂದ 7.30 ರ ವರೆಗೆ ಟೆಲಿಸ್ಕೋಪ್ ಮೂಲಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ಖಗೋಳಾಸಕ್ತರಿಗೆ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯಕರ ಹಿಮೋಗ್ಲೋಬಿನ್ ಮಟ್ಟವನ್ನು ಪಡೆಯಲು ನೈಸರ್ಗಿಕ ಮಾರ್ಗಗಳು https://t.co/rudvahCpHj
— Saaksha TV (@SaakshaTv) December 19, 2020
ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ – 2021ರಲ್ಲಿ ಹೆಚ್ಚಾಗಲಿದೆಯಂತೆ ಕೇಂದ್ರ ಸರ್ಕಾರಿ ನೌಕರರ ವೇತನhttps://t.co/Y0eNRNfdWA
— Saaksha TV (@SaakshaTv) December 19, 2020