ನಡುರಸ್ತೆಯಲ್ಲೇ ಯುವತಿಯ ಮೇಲೆ ಮಚ್ಚಿನಿಂದ ಹಲ್ಲೆ : ಪಾಗಲ್ ಪ್ರೇಮಿ ಅಂದರ್..!
ಹುಬ್ಬಳ್ಳಿ : ಭಗ್ನ ಪ್ರೇಮಿಯೊಬ್ಬ ಹಾಡು ಹಗಲೇ ನಡು ರಸ್ತೆಯಲ್ಲೇ ಯುವತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಜನರು ನೋಡ ನೋಡುತ್ತಿದ್ದಂತೆ ಯುವತಿಯ ಮೇಲೆ ತಲವಾರಿನಿಂದ ಮನಬಂದಂತೆ ಥಳಿಸಿದ್ದಾನೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯುವತಿ ಮೇಲೆ ತಲವಾರಿನಿಂದ ಮನಬಂದಂತೆ ದಾಳಿ ನಡೆಸಿ ಪರಾರಿಯಾಗಿದ್ದಾನೆ. ದಾಳಿ ನಡೆಸಿದ ಪಾಗಲ್ ಪ್ರೇಮಿಯನ್ನು ಕುಂದಗೋಳ ತಾಲೂಕಿನ ರಾಮನು ಗ್ರಾಮದ ಇಸ್ಮಾಯಿಲ್ ಕುಂಕೂರ ಎನ್ನಲಾಗಿದೆ. ಇನ್ನೂ ದಾಳಿಗೊಳಗಾದ 21 ವರ್ಷದ ಯುವತಿ ಆಶಾ ದೋಬಿ ಅಕ್ಸರ ಧಾರವಾಡ ಜಿಲ್ಲೆಯ ಮೊರಬ ಗ್ರಾಮದವಳು ಎನ್ನಲಾಗಿದ್ದು, ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಯುವತಿಯ ಸ್ಥಿತಿ ತೀವ್ರ ಗಂಭೀರವಾಗಿದೆ ಎನ್ನಲಾಗ್ತಿದೆ. ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಪಾಗಲ್ ಪ್ರೇಮಿಯನ್ನ ಅರೆಸ್ಟ್ ಮಾಡಿದ್ದಾರೆ.
5 ದಿನದಲ್ಲಿ 2 ಮದ್ವೆಯಾದ ಟೆಕ್ಕಿ : 6ನೇ ದಿನಕ್ಕೆ ನಾಪತ್ತೆ..!
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರಾದ ಲಾಬುರಾಮ್ ಸಿಂಗ್ ಅವರು, ಯುವತಿ ಮನೆ ಹತ್ತಿರವೇ ಬೆಳಿಗ್ಗೆ 10 ಗಂಟೆಗೆ ಹಲ್ಲೆ ಆಗಿದೆ. ಆರೋಪಿ ಇಸ್ಮಾಯಿಲ್ ಯುವತಿಯ ಮನೆ ಹತ್ತಿರ ಕಾಯ್ದು ನಿಂತು ಅವಳು ಬರುತ್ತಿದುದ್ದನ್ನು ನೋಡಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಈಗಾಗಲೇ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಮೇರಿಕನ್ ಯಾತ್ರೆ; ವಿಶ್ವವಿಖ್ಯಾತ ನಯಾಗರಾ ಜಲಪಾತದ ಕುರಿತು ನಿಮಗೆ ತಿಳಿದಿರದ ಕೆಲವು ಕೌತುಕದ ಸಂಗತಿಗಳು:
ಇನ್ನೂ ಯುವಕ ಹಾಗೂ ಯುವತಿಗೆ ಈ ಹಿಂದಿಯೇ ಪರಿಚಯವಿತ್ತು. ಹಲ್ಲೆಗೊಳಗಾದ ಆಶಾ ನಗರದ ಸೀಮಾ ಗೋಲ್ಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಇನ್ನೂ ಇವರಿಬ್ಬರಿಗೂ ಬಹಳ ಹಿಂದಿನಿಂದಲೇ ಪರಿಚಯವಿತ್ತು. ಅಲ್ಲದೇ ಪ್ರತಿ ನಿತ್ಯ ಆಶಾಳನ್ನು ಇಸ್ಮಾಯಿಲ್ ಅಂಗಡಿಗೆ ಡ್ರಾಪ್ ಮಾಡುತ್ತಿದ್ದ ಎನ್ನಲಾಗಿದೆ. ಇನ್ನೂ ಘಟನೆಯ ಹಿನ್ನೆಲೆ ಸಂಪೂರ್ಣ ವಿವರ ಹಲ್ಲೆಗೊಳಗಾದ ಯುವತಿ ಚೇತರಿಸಿಕೊಂಡ ನಂತರವೇ ತಿಳಿಯಬೇಕಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









