ಈ ವಿಚಾರಕ್ಕೆ ಮತ್ತಷ್ಟು ಪ್ರವಾಸಿಗರನ್ನ ಆಕರ್ಷಿಸಲಿದೆ ‘ನಂದಿ ಗಿರಿಧಾಮ’!
ಬೆಂಗಳೂರು: ಐತಿಹಾಸಿಕ ನಂದಿ ಬೆಟ್ಟ ಇನ್ನೂ ಹೆಚ್ಚು ಪ್ರವಾಸಿಗರನ್ನ ಆಕರ್ಶಿಸಲು ಸಜ್ಜಾಗ್ತಿದೆ. ಕ್ರಿಸ್ ಮಸ್ ಪ್ರಯುಕ್ತ ಡಿಸೆಂಬರ್ 24ರಿಂದ ವಿಶೇಷವಾಗಿ ಪ್ಯಾರಾ ಗ್ಲೈಡಿಂಗ್ ಆರಂಭಿಸಲು ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ. ನಂದಿ ಬೆಟ್ಟದಲ್ಲಿ ಶೀಘ್ರದಲ್ಲೇ ಪ್ಯಾರಾಗ್ಲೈಡಿಂಗ್ ಆರಂಭವಾಗಲಿದ್ದು, ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ.
ಹೇಳಿಕೇಳಿ ನಂದಿ ಬೆಟ್ಟ ಪ್ರವಾಸಿಗರ ಪಾಲಿನ ಸ್ವರ್ಗವೆಂದೇ ಹೆಸರುವಾಸಿಯಾದ ತಾಣ. ಪ್ರವಾಸೋದ್ಯಮ ಮತ್ತು ತೋಟಗಾರಿಕೆ ವಿಭಾಗ ಜಂಟಿಯಾಗಿ ಈ ಸಮಸ್ಯೆಯನ್ನು ಬಗೆಹರಿಸಲು ನಂದಿ ಗಿರಿಧಾಮದಲ್ಲಿ ಪ್ಯಾರಾ-ಗ್ಲೈಡಿಂಗ್ ಸೇರಿದಂತೆ ಮನರಂಜನಾ ಚಟುವಟಿಕೆಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಅಲ್ಲದೆ ಬೆಟ್ಟದ ಗಮ್ಯ ಸ್ಥಾನದಲ್ಲಿ ಪಕ್ಷಿ ವೀಕ್ಷಣೆಗೂ ಅವಕಾಶ ಕಲ್ಪಿಸಿ ಕೊಡುವ ಯೋಜನೆ ರೂಪಿಸಿಕೊಂಡಿದೆ. ಇನ್ನೂ ಡಿಸೆಂಬರ್ 24 ರಿಂದ ನಂದಿ ಬೆಟ್ಟದಿಂದ ಮೂರು ತಿಂಗಳ ಕಾಲ ಪ್ಯಾರಾಗ್ಲೈಡಿಂಗ್ ನಡೆಸಲು ಖಾಸಗಿ ಕಂಪನಿಗೆ ಸಂಬಂಧಪಟ್ಟ ಇಲಾಖೆಗಳಿಂದ ಈಗಾಗಲೇ ಅನುಮತಿ ಸಹ ಸಿಕ್ಕಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








