ADVERTISEMENT
Monday, March 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪ್ರಮುಖ ಇಂಟರೆಸ್ಟಿಂಗ್  ಸುದ್ದಿಗಳು…! ಪ್ರಪಂಚದ ಸುತ್ತ..!

Namratha Rao by Namratha Rao
December 22, 2020
in Newsbeat, Saaksha Special, ಎಸ್ ಸ್ಪೆಷಲ್
Saakshatv vishwa vismaya episode3
Share on FacebookShare on TwitterShare on WhatsappShare on Telegram

ಪ್ರಮುಖ ಇಂಟರೆಸ್ಟಿಂಗ್  ಸುದ್ದಿಗಳು…! ಪ್ರಪಂಚದ ಸುತ್ತ..!

ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ..!

Related posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

March 30, 2026
ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026

ಮಾಸ್ತಿಫ್ ಬಲಿಷ್ಠ ಶ್ವಾನ ತಳಿಗಳು : ಈ ಶ್ವಾನಗಳ ಬಗ್ಗೆ ನಿಮಗೆಷ್ಟು ಗೊತ್ತು?

Mastiff ಎಂದರೆ ಇಂಗ್ಲೀಷಿನಲ್ಲಿ ಬಲಿಷ್ಠ ದವಡೆ ಉಳ್ಳ, ಹೆಚ್ಚು ತೂಕವುಳ್ಳ, ಇಳಿಬಿದ್ದ ಕಿವಿಗಳುಳ್ಳ ಬಲಿಷ್ಠ ನಾಯಿ ಜಾತಿ ಎಂದರ್ಥ. ಇಂದು ವಿಶ್ವದಾದ್ಯಂತ ಅನೇಕಾರು ಮಾಸ್ಟಿಫ್ ತಳಿಗಳಿವೆ. ಅವುಗಳಲ್ಲೆಲ್ಲ ಹೆಚ್ಚು ದೊಡ್ಡ ಜಾತಿ ಎಂದರೆ ಅದು ಇಂಗ್ಲೆಂಡ್ ಮೂಲದ ಇಂಗ್ಲೀಷ್ ಮ್ಯಾಸ್ತಿಫ್ ! ಇದು 30 ಇಂಚಿನವರೆಗು ಬೆಳೆದು 200 ಪೌಂಡ್ ಗಳವರೆಗು ತೂಗಬಲ್ಲುದು. ಇದನ್ನ ಬುಲ್ ಡಾಗ್ ಎಂದೂ ಕರೆಯುತ್ತಾರೆ. ಕೆಲವು ಜಾತಿಯ ಪಿಟ್ ಬುಲ್ ಗಳೂ ಸಹ ಇದರ ಅಡಿ ಬರುತ್ತವೆ.

ಎರಡನೆಯದ್ದು ಸೌತ್ ಆಫ್ರಿಕನ್ ಮ್ಯಾಸ್ತಿಫ್ ! ಇದರ ಮೂಲ ದಕ್ಷಿಣ ಆಫ್ರಿಕಾ. ದಕ್ಷಿಣ ಆಫ್ರಿಕಾ ಖಂಡದ ಈ ತಳಿಯೂ ಸಹ ಅತ್ಯಂತ ಕಷ್ಟಸಹಿಷ್ಣು ಆಗಿದ್ದು ಕೆಲವೊಮ್ಮೆ ಇಂಗ್ಲೀಷ್ ಮ್ಯಾಸ್ತಿಫ್ ಗಿಂತಲು ಹೆಚ್ಚು ರೋಷದ ನಾಯಿಯಾಗಬಲ್ಲುದು. ಮೂರನೆಯದ್ದು ಔಚಾರ್ಕಾ ಕಕೇಶಿಯನ್ ಮೌಟೇನ್ ಡಾಗ್. ಇದನ್ನ ಕಕೇಶಿಯನ್ ಮ್ಯಾಸ್ತಿಫ್ ಎಂದೂ ಸಹ ಕರೆಯುತ್ತಾರೆ. ಇದರ ಮೂಲ ರಷ್ಯಾ ದೇಶ. ಹಾಗೂ ಕಕೇಶಿಯನ್ ಪ್ರಾಂತ್ಯದ ಅಡಿ ಬರುವ ಜಾರ್ಜಿಯಾ, ಅಜರ್‌ಬೈಜಾನ್, ಅರ್ಮೇನಿಯಾ, ಡಜೆಸ್ತಾನ್ ಮುಂತಾದೆಡೆಯೂ ಸಹ ಇವು ಕಂಡು ಬರುತ್ತವೆ.

ಇವು ಜೂಲು ಕೂದಲಿನ‌ ಬಲಿಷ್ಠ ದವಡೆಯ ನಾಯಿಗಳು. ಒಂದು ಥಿಯರಿಯ ಪ್ರಕಾರ ಇವು ಸಿಂಹವನ್ನೂ ಸಹ ಮಣಿಸುತ್ತವೆ. ಸಂದರ್ಭ ಒದಗಿದರೆ ಸಿಂಹದಂತಹ ಮೃಗವನ್ನೂ ಸಹ ದಾಳಿ ಮಾಡಿ ಕೊಲ್ಲಬಲ್ಲವು. ಮ್ಯಾಸ್ತಿಫ್ ಎಂಬ ಪದ ಲ್ಯಾಟಿನ್ ಹಾಗೂ ರೋಮನ್ ಭಾಷೆಗಳಿಂದ ಬಂದಿದೆ. ವಿಶ್ವದಲ್ಲಿ ಹತ್ತಾರು ಬಗೆಯ ಮ್ಯಾಸ್ತಿಫ್ ಗಳಿವೆ. ಬ್ರೆಜಿಲಿಯನ್, ಫ್ರೆಂಚ್, ಅಮೇರಿಕನ್, ಜರ್ಮನ್, ಸ್ಪ್ಯಾನಿಷ್, ಆಫ್ರಿಕನ್ ಹೀಗೆ. ಜರ್ಮನ್ ಹಾಗೂ ಅಮೇರಿಕನ್ ಮೂಲದ ರಾಟ್‌ವೈಲರ್ ಸಹ ಪ್ರಾಚೀನ ಮ್ಯಾಸ್ತಿಫ್ ತಳಿಗಳಲ್ಲೊಂದು.

ಇಕ್ಕೇರಿ ನಾಯಕರ ಕೋಟೆ ಕಟ್ಟುವ ಕಲೆಯೇ ಅದ್ಭುತ; ಶಿವಪ್ಪನಾಯಕರ ಬಿದನೂರು ಕೋಟೆ ನಿರ್ಮಾಣದ ದೂರದೃಷ್ಟಿ ಮತ್ತು ಭದ್ರತೆಯ ಸವಿವರ:

ಇಕ್ಕೇರಿಯ ಹಿರಿಯ ವೆಂಕಟಪ್ಪ ನಾಯಕರು ತಮ್ಮ ರಾಜ್ಯ ವಿಸ್ತಾರಕ್ಕಾಗಿ ಕೈಗೊಂಡ ಅನೇಕ ಯುದ್ಧ ದಂಡಯಾತ್ರೆಯ ಪರಿಣಾಮವಾಗಿ ಕರ್ನಾಟಕದ ಪಶ್ಚಿಮ ಕರಾವಳಿಯ ಕಾರವಾರ (ದಕ್ಷಿಣ ಗೋವಾ ಇಂದ) ಇಂದ ಕೇರಳದ ನೀಲೇಶ್ವರದವರೆಗೆ ಮತ್ತು ಪಶ್ಚಿಮ ಘಟ್ಟದ ಮೇಲೂ ಸಹಾ ವಿಜಯ ಫತಾಕೆ ಹಾರಿಸಿ ಹಲವಾರು ಸಾಮಂತರನ್ನು ಸೋಲಿಸಿ ಅಸಂಖ್ಯಾತ ಕೋಟೆಗಳು ಮತ್ತು ಬತ್ತೇರಿಗಳನ್ನು ವಶಪಡಿಸಿಕೊಂಡು 17ನೇ ಶತಮಾನದ ಆದಿಯಲ್ಲಿ ಕರ್ನಾಟಕದ ಅತ್ಯಂತ ಶಕ್ತಿಶಾಲಿ, ಕೀರ್ತಿಶಾಲಿ, ಶ್ರೀಮಂತ ಮತ್ತು ಪ್ರಭಾವಶಾಲಿ ರಾಜನಾಗುತ್ತಾನೆ. ಹಿರಿಯ ವೆಂಕಟಪ್ಪ ನಾಯಕ ಕೋಟೆಯ ವಿನ್ಯಾಸ, ಊರಿನ ವಿನ್ಯಾಸ, ವಾಸ್ತುಶಿಲ್ಪ, ಕೃಷಿ, ನೃತ್ಯ, ಸಂಗೀತ, ನಾಟಕ, ಸಾಹಿತ್ಯ, ಯುದ್ಧ ನೀತಿ ಮತ್ತು ಹಲವಾರು ವಿಷಯಗಳ ಬಗ್ಗೆ ದೀರ್ಘವಾದ ಜ್ಞಾನವನ್ನು ಹೊಂದಿದ್ದು ಅದನ್ನು ತನ್ನ ಚಿಕ್ಕಪ್ಪನ ಮೊಮ್ಮಗ ಶಿವಪ್ಪನಾಯಕನಿಗೆ ಧಾರೆ ಎರೆಯುತ್ತಾನೆ.
ಹಿರಿಯ ವೆಂಕಟಪ್ಪ ನಾಯಕರ ಏಕಮಾತ್ರ ಚಿರಂಜೀವಿಯ ಅಕಾಲಿಕ ಮರಣದಿಂದ ಇಕ್ಕೇರಿಯ ರಾಜಕೀಯದಲ್ಲಿ ಸ್ವಲ್ಪ ಮಟ್ಟಿಗೆ ಬಿರುಗಾಳಿ ಏಳುತ್ತದೆ. ಹಿರಿಯ ವೆಂಕಟಪ್ಪ ನಾಯಕರ ನಂತರದಲ್ಲಿ ಇಕ್ಕೇರಿಯ ಗದ್ದುಗೆ ಏರಲು ರಾಜಪರಿವಾರದಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗುತ್ತದೆ. ಹಿರಿಯ ವೆಂಕಟಪ್ಪ ನಾಯಕರ ಮೊಮ್ಮಗ ವೀರಭದ್ರ ನಾಯಕ ನನ್ನು ಇಕ್ಕೇರಿಯ ರಾಜ ಮಾಡಲು ತೀರ್ಮಾನಿಸಿದ ವೆಂಕಟಪ್ಪ ನಾಯಕನಿಗೆ ಇದಕ್ಕೆ ಅಡ್ಡಿ ಆಗಬಹುದಾದ ಅವನ ಸಹೋದರ ರಾಮರಾಜ ನಾಯಕರ ಮಗ ವಿರೂಪಣ ಒಡೆಯ ನನ್ನು ಸೆರೆಮನೆಗೆ ಹಾಕಿ ಶಿವಪ್ಪನಾಯಕ ಮತ್ತು ಅವನ ಸಹೋದರ ವೆಂಕಟಪ್ಪ ನಾಯಕನಿಗೆ ಬಿದನೂರು ಮತ್ತು ಘಟ್ಟದ ಕೆಳಗಿನ ಕೆಲವು ಪ್ರದೇಶಗಳ ಜವಾಬ್ದಾರಿಯನ್ನು ನೀಡಿ ಇಕ್ಕೇರಿಯ ರಾಜಧಾನಿಯಿಂದ ದೂರ ಇಡುತ್ತಾರೆ.

ಅಮೇರಿಕನ್ ಯಾತ್ರೆ; ವಿಶ್ವವಿಖ್ಯಾತ ನಯಾಗರಾ ಜಲಪಾತದ ಕುರಿತು ನಿಮಗೆ ತಿಳಿದಿರದ ಕೆಲವು ಕೌತುಕದ ಸಂಗತಿಗಳು:

ನಯಾಗರಾ ಜಲಪಾತವು ಎಷ್ಟು ಸುಂದರವೋ ಅಷ್ಟೇ ಆಸಕ್ತಿಕರ ಅಂಶಗಳನ್ನ ಹೊಂದಿದೆ. ಕುದುರೆಲಾಳದ ಜಲಪಾತದಲ್ಲಿ ನಯಾಗರ ೯೦% ನೀರು ಸುರಿದರೆ ಉಳಿದ ೧೦% ನೀರು ಅಮೆರಿಕಾದ ಜಲಪಾತ ಮತ್ತು ಮದುವಣಗಿತ್ತಿಯಮುಸುಕಿನ ಜಲಪಾತಗಳಲ್ಲಿ ಸುರಿಯುತ್ತದೆ. ಹಾಗೇ ಈ ಕುದುರೆಲಾಳದ ಜಲಪಾತ ೯೦ ಪ್ರತಿಶತಃ ಕೆನಡಾದಲ್ಲಿದ್ದರೆ ೧೦ ಪ್ರತಿಶತಃ ಅಮೆರಿಕಾದಲ್ಲಿದೆ.

ಅಮೆರಿಕಾದ ಜಲಪಾತದ ಮೂಲೆಯಲ್ಲೆಲ್ಲೋ ಕಂಡೂ ಕಾಣದಂತಿರುವುದು ಮದುವಣಗಿತ್ತಿಯ ಮುಸುಕಿನ ಜಲಪಾತ. ಕ್ರೈಸ್ತ ಸಂಪ್ರದಾಯದಲ್ಲಿ ಮದುಮಗಳು ಧರಿಸುವ ತೆಳುವಾದ ಬಿಳಿ ಮುಸುಕಿನಂತೆ ಯಾರಿಗೋ ಕಂಡಿರಬೇಕು ಅದಕ್ಕೇ ಈ ಹೆಸರು. ಉಳಿದೆರಡು ದೈತ್ಯರ ಮುಂದೆ ಇದು ಪ್ರಪಂಚದ ಪಾಲಿಗೆ ಬಹುಪಾಲು ಅಜ್ಞಾತವಾಗಿಯೇ ಇದೆ.

ಅಮೆರಿಕಾ ಈ ಜಲಪಾತದ ಸುತ್ತ ಕೈಗಾರಿಕಾ ಅವಕಾಶಗಳನ್ನ ಹುಡುಕ ಹೊರಟರೆ ಕೆನಡಾ ಪ್ರವಾಸೋದ್ಯಮದತ್ತ ಗಮನ ಹರಿಸಿತು. ಅಮೆರಿಕಾದ ಪರಿಸರ ಹೋರಾಟಗಾರರಿಗೆ ಇಲ್ಲಿನ ಉದ್ಯಮ ಲಾಬಿಯ ಎದುರು ಹೋರಾಡಿ ಗೆಲ್ಲಲು ಬಹಳ ಸಮಯ ಬೇಕಾಯಿತು.ಈಗಲೂ ಅಮೆರಿಕಾ ಭಾಗದ ಬಹುಪಾಲು ನೀರು ಜಲವಿದ್ಯುತ್ ಸ್ಥಾವರಕ್ಕೆ ಹರಿವುದರಿಂದ ಜಲಪಾತಕ್ಕೆ ಪ್ರವಹಿಸುವ ನೀರಿನ ಅಗಾಧತೆ ಕಮ್ಮಿಯೇ. ಹಾಗೇ ಕೈಗಾರಿಕೆಗಳಿಂದಾದ ಹಾನಿಯಿಂದ ನಯಾಗರಾ ಪೂರ್ಣ ಚೇತರಿಸಿಕೊಂಡಿಲ್ಲ ಅನ್ನುವುದು ಕೂಡಾ ಸತ್ಯ.

ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ..!

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: Dogshuman intrestingSpecialTouristviralWorld
ShareTweetSendShare
Join us on:

Related Posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

by Shwetha
March 30, 2026
0

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram