ಬೆಂಗಳೂರು: ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆ ವಿರುದ್ಧ ಹೋರಾಟಕ್ಕೆ ಸಜ್ಜಾಗಿರುವ ಮಾನ್ಯತೆ ಪಡೆದ ಅನುದಾನರ ರಹಿತ ಖಾಸಗಿ ಶಾಲೆಗಳ ಸಂಘ(ರುಪ್ಸಾ), ಸೋಮವಾರ ರಾಜ್ಯಾದ್ಯಂತ ಆನ್ಲೈನ್ ಕ್ಲಾಸ್ ಬಂದ್ ಮಾಡಿತ್ತು.
ಈ ಸಂಬಂಧ ಶಿಕ್ಷಣ ಸಚಿವ ಸುರೇಶ್ ಕುಮಾರ್, ರುಪ್ಸಾ ಸಂಘದ ಪದಾಧಿಕಾರಿಗಳ ಜತೆ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು. ರುಪ್ಸಾದ 15 ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮಕವಾಗಿದೆ ಸ್ಪಂದಿಸಿದ್ದು, ನಮ್ಮ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಹೀಗಾಗಿ ರುಪ್ಸಾ ಸಂಘದ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಸ್ಥಗಿತಗೊಂಡಿದ್ದ ಆನ್ಲೈನ್ ಕ್ಲಾಸ್ಗಳನ್ನು ಮತ್ತೆ ಪುನಾರಂಭಗೊಳಿಸಲಾಗಿದೆ ಎಂದು ಮಾನ್ಯತೆ ಪಡೆದ ಅನುದಾನರ ರಹಿತ ಖಾಸಗಿ ಶಾಲೆಗಳ ಸಂಘ(ರುಪ್ಸಾ)ದ ಅಧ್ಯಕ್ಷ ಲೋಕೇಶ್ ತಾಳಿಕಟ್ಟಿ ತಿಳಿಸಿದ್ದಾರೆ.
ನಮ್ಮ ಎರಡು ಬೇಡಿಕೆಗಳಿಗೆ ಸಿಎಂ ಜೊತೆ ಚರ್ಚಿಸಬೇಕು ಎಂದು ಸಚಿವರು ಹೇಳಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಟೆಂಟ್ ಶಾಲೆಗಳ ನವೀಕರಣ ವಿಚಾರವಾಗಿ ಒಂದು ವರ್ಷದೊಳಗೆ ಶಾಲೆ ನಿರ್ಮಾಣಕ್ಕೆ ಅವಕಾಶ ಕೊಡಿ ಎಂದು ಕೇಳಿದ್ದೇವೆ. ಬುಧವಾರ ಸಂಘದ ರಾಜ್ಯ ಪದಾಧಿಕಾರಿಗಳ ಸಭೆ ಜರುಗಲಿದೆ. ಸಭೆ ಬಳಿಕ ಶಾಲೆ ಆರಂಭ ಕುರಿತು ನಿರ್ಧಾರ ಪ್ರಕಟಿಸಲಿದ್ದೇವೆ ಎಂದಿದ್ದಾರೆ.

ನಮ್ಮ ಬೇಡಿಕೆಗಳ ಬಗ್ಗೆ ಸಚಿವ ಸುರೇಶ್ ಕುಮಾರ್ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಅವರಿಗೆ ನೋವಾಗುವಂತೆ ಮಾತನಾಡಿದ್ದೆವು. ಇದರಿಂದ ಸಚಿವರಿಗೆ ನೋವಾಗಿತ್ತು. ಅವರೇ ನಮ್ಮ ಸಂಘದವರು ಕರೆಸಿ ಮಾತನಾಡಲು ನಿರ್ಧರಿಸಿದ್ದಾಗಿ ತಿಳಿಸಿದರು. ಹೀಗಾಗಿ ಸಂಘದ ವತಿಯಿಂದ ಸುರೇಶ್ ಕುಮಾರ್ ಅವರಿಗೆ ಕ್ಷಮೆ ಕೇಳಿದ್ದೇವೆ. ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುತ್ತಿರುವುದರಿಂದ ಸರ್ಕಾರ ನಮ್ಮ ಸಮಸ್ಯೆ ಬಗಗೆಹರಿಸಬೇಕಿತ್ತು. ಆದರೆ ಸಮಸ್ಯೆ ಬಗೆಹರಿಸಲು ಸಚಿವರು ಒಪ್ಪಿದ್ದಾರೆ ಎಂದು ಲೋಕೇಶ್ ಹೇಳಿಕೊಂಡಿದ್ದಾರೆ.
ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ತಮ್ಮ ಶಾಲಾ ಕಟ್ಟಡಗಳು ಹಾಗೂ ಮಕ್ಕಳ ಸೇಫ್ಟಿ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಗಳಿಂದ ಎನ್ಒಸಿ ಪಡೆದು ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು. ಸೇಪ್ಟಿ ಪ್ರಮಾಣ ಪತ್ರ ಸಲ್ಲಿಸದ ಶಾಲೆಗಳ ಮಾನ್ಯತೆ ನವೀಕರಣ ಮಾಡುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯಿಂದ ಗ್ರಾಮೀಣ ಪ್ರದೇಶದ ಖಾಸಗಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದು ಆರೋಪಿಸಿ ಮೊದಲು ಆನ್ಲೈನ್ ಕ್ಲಾಸ್, ನಂತರ ಶೈಕ್ಷಣಿಕ ಚಟುವಟಿಕೆ ಬಂದ್ ಹಾಗೂ ಜನವರಿ 6ರಂದು ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ರುಪ್ಸಾ ಸಂಘ ನಿರ್ಧರಿಸಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








