ಕೊರೊನಾ ಅಪ್ ಡೇಟ್ : ಕಳೆದ 24 ಗಂಟೇಲಿ 23,950 ಕೇಸ್ ಪತ್ತೆ
ನವದೆಹಲಿ : ಕೊರೊನಾ ಕಾಟದ ಮಧ್ಯೆಯೇ ಕೋವಿಡ್ ಹೊಸ ತಳಿಯ ಆರ್ಭಟ ಶುರುವಾಗಿದೆ. ಈ ಮಧ್ಯೆ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,00,99,066ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಪ್ರಕಾರ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 23,950 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದೇ ಅವಧಿಯಲ್ಲಿ 333 ಮಂದಿ ಸಾವನ್ನಪ್ಪಿದ್ದಾರೆ.
ಈ ಮೂಕಲ ದೇಶದಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 1,00,99,066ಕ್ಕೆ ಸಾವಿನ ಸಂಖ್ಯೆ 1,46,444ಕ್ಕೆ ತಲುಪಿದೆ.
ಇನ್ನು ಒಟ್ಟಾರೆ 1,00,99,066 ಮಂದಿ ಸೋಂಕಿತರ ಪೈಕಿ ನಿನ್ನೆ ಒಂದೇ ದಿನ 26,895 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.
ಇದರೊಂದಿಗೆ ಈ ವರೆಗೂ ಒಟ್ಟಾರೆ 96,63,382 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆಂದು ತಿಳಿದುಬಂದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









