ಲಾಕ್ ಡೌನ್ ಮಾಡಿದ್ದರಿಂದ ನನ್ನ ಮೇಲೆ ಹಲವು ಮಂದಿ ಕೋಪ ಮಾಡಿಕೊಂಡಿದ್ದಾರೆ. ಹಾಗಂತ ಪಿ.ಎಂ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಹರಡುವಿಕೆ ತಡೆಯಲು ಇದ್ದ ಒಂದೇ ಒಂದು ಮಾರ್ಗ ಎಂದರೇ ಅದು ಲಾಕ್ ಡೌನ್ ಮಾತ್ರ. ಹಾಗಾಗಿ ಲಾಕ್ ಡೌನ್ ಮಾಡಲಾಗಿದೆ. ನಿಮ್ಮ ಮತ್ತು ನಿಮ್ಮ ಕುಟುಂಬಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಲಾಕ್ ಡೌನ್ ಮಾಡಿದ ಕಾರಣ ಹಲವು ಜನರು ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಇಂದು ಕೊರೊನಾ ವಿರುದ್ದ ಇಡಿ ವಿಶ್ವವೇ ಹೋರಾಟ ನಡೆಸುತ್ತಿದೆ. ನಾವು ಸಹ ಹೋರಾಟ ಮಾಡಬೇಕಾಗಿದೆ. ಲಾಕ್ ಡೌನ್ ನಿರ್ಧಾರ ತೆಗೆದುಕೊಂಡಿದಕ್ಕೆ ನಾನು ನಿಮ್ಮ ಬಳಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. ಲಾಕ್ ಡೌನ್ ಲಕ್ಷ್ಮಣ ರೇಖೆಯನ್ನು ಯಾರು ದಾಟಬಾರದು. ಆ ಮೂಲಕ ಕೊರೊನಾ ವಿರುದ್ದ ನಡೆಯುತ್ತಿರುವ ಹೋರಾಟಕ್ಕಾಗಿ ಸಂಕಲ್ಪ ಮಾಡಿ ಎಂದು ಪಿ.ಎಂ ಮೋದಿ ಮತ್ತೊಮ್ಮೆ ಮನವಿ ಮಾಡಿದ್ದಾರೆ.