ಜೈವಿಕ ಕೃಷಿ ಪದ್ಧತಿ ಉತ್ತೇಜಿಸಲು ವಿನಯ್ ಗುರೂಜಿ ಮನವಿ
ನವದೆಹಲಿ : ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಇಂದು ದೇಶದಲ್ಲಿ ಜೈವಿಕ ಕೃಷಿ ಪದ್ಧತಿಗೆ ಹೆಚ್ಚು ಪ್ರಾಧಾನ್ಯತೆ ನೀಡುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು ಶ್ರೀ ಡಿ ವಿ ಸದಾನಂದಗೌಡ ಅವರನ್ನು ಅವಧೂತ ಶ್ರೀ ವಿನಯ್ ಗುರೂಜಿ ಅವರು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ನವದೆಹಲಿ ನಿವಾಸದಲ್ಲಿ ಸದಾನಂದಗೌಡ ಅವರನ್ನು ಭೇಟಿಯಾಗಿ ರಾಷ್ಟ್ರೀಯ ರೈತ ದಿನದ ಶುಭಾಶಯ ತಿಳಿಸಿ, ರೈತರ ಹಿತ ಚಿಂತನೆಗಳ ಬಗ್ಗೆ ಚರ್ಚಿಸಲಾಯಿತು.
ದೇಶದಲ್ಲಿ ಆಧುನಿಕ ಮತ್ತು ಅಧಿಕ ಇಳುವರಿ ಹೆಸರಿನಲ್ಲಿ ರಾಸಾಯನಿಕ ಮತ್ತು ರಸಗೊಬ್ಬರಗಳ ಅಧಿಕ ಬಳಕೆ ಆಗುತ್ತಿದ್ದು ಅದು ಇಂದಿನ ಮಾನವನ ಜೀವನ ಶೈಲಿಯಲ್ಲಿ ವ್ಯತಿರಿಕ್ತ ಪರಿಣಾಮ ಬಿರುತ್ತಿದ್ದು, ಮಾನವನ ಆರೋಗ್ಯದ ಏರುಪೇರಾಗಿ ಕ್ಯಾನ್ಸರ್, ಬಿಪಿ, ಸಕ್ಕರೆ ಕಾಯಿಲೆ ಅಂತಹ ಕಾಯಿಲೆಗಳಿಗೆ ತುತ್ತಾಗುತ್ತಿರುವವರ ಸಂಖ್ಯೆ ಅಧಿಕವಾಗಿದೆ.
ರಾಸಾಯನಿಕ ವಸ್ತುಗಳನ್ನು ಬಳಸಿ ಬೆಳೆಯುವ ಆಹಾರ ಪದ್ಧತಿಯಿಂದ ಮಾನವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿದೆ. ನಮ್ಮ ಪುರಾತನ ದಿನಗಳಲ್ಲಿ ಸನಾತನ ಧರ್ಮದ ಪದ್ಧತಿಯಂತೆ ಜೈವಿಕ ಕೃಷಿ ಪದ್ಧತಿ ದೇಶದಲ್ಲಿ ಇಂದು ಅತಿ ಅವಶ್ಯಕವಾಗಿದೆ.
ಜೈವಿಕ ಕೃಷಿ ಪದ್ಧತಿಯಿಂದ ನಮ್ಮ ದೇಶ ಗೋವಿನ ಉಳಿವು ಹಾಗೂ ಅದರ ಗೊಬ್ಬರದಿಂದ ಮಾಡುವ ಕೃಷಿ ಪದ್ದತಿಯು ಮಾನವನ ಆರೋಗ್ಯಕ್ಕೆ ತುಂಬಾ ಒಳ್ಳೆಯ ಹಾಗೂ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ.
ದೇಶಿಯ ತಳಿಯ ಗೋವುಗಳ ಸಂರಕ್ಷಣೆಯಾಗಿ ದೇಶ ಹೆಚ್ಚು ಸಮೃದ್ಧಿಯಾಗುತ್ತದೆ. ಗೋವಿನ ಬೆರಣಿಯಿಂದ ಅಗ್ನಿಹೋತ್ರ ಮಾಡುವುದರಿಂದ ವಾತಾವರಣ ಶುದ್ದಿ ಆಗುವುದರ ಜೊತೆಗೆ ವಾತವರಣದಲ್ಲಿ ಇರುವ ಕೆಲವೊಂದು ಮಾರಕ ವೈರಾಣುಗಳು ಕ್ಷೀಣಿಸಿ ಮಾನವನ ಜೀವನಕ್ಕೆ ಒಳ್ಳೆಯ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಅವಧೂತ ಶ್ರೀ ವಿನಯ್ ಗುರೂಜಿ ಅವರು ಮನವಿ ಸಲ್ಲಿಸಿ ಮಾನ್ಯ ಪ್ರಧಾನ ಮಂತ್ರಿಗಳು ಶ್ರೀ ನರೇಂದ್ರ ಮೋದಿ ಅವರ ಗಮನಕ್ಕೆ ತರವಂತೆ ಪತ್ರ ಸಲ್ಲಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









