ಕರೆನ್ಸಿ ನೋಟುಗಳ ಮಳೆ ಸುರಿಸಿದ ಕೋತಿ
ಲಕ್ನೋ : ಕೋತಿ ತನ್ನ ತುಂಟಾಟಗಳಿಗೆ ಹೆಸರುವಾಸಿಯಾಗಿರುವ ಪ್ರಾಣಿ. ಮನೆಗಳಲ್ಲಿ ಮನುಷ್ಯರಿಂದ ವಸ್ತುಗಳನ್ನು ಎಳೆಯುವ ಅಭ್ಯಾಸವನ್ನು ಹೊಂದಿರುವ ಏಕೈಕ ಪ್ರಾಣಿ ಅದು ಕೋತಿ.
ಕೋತಿಯ ಕೃತ್ಯಗಳು ಅನೇಕ ನಗೆಪಾಟಲಿಗೀಡಾಗಿವೆ. ಕೆಲವೊಮ್ಮೆ ಕೋತಿಯ ಚೇಷ್ಟೆಗಳು ಹಲವರಿಗೆ ಮಾಡಿರುವುದು ಉಂಟು. ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೌದು..! ಕೋತಿಯೊಂದು ವ್ಯಕ್ತಿಯ ಕೈಯಿಂದ ಬ್ಯಾಗನ್ನು ಕಿತ್ತುಕೊಂಡಿದ್ದೂ ಅಲ್ಲದೆ ಬ್ಯಾಗ್ ನಲ್ಲಿದ್ದ ಹಣವನ್ನ ಗಾಳಿಗೆ ಎಸೆದಿದೆ. ಇದರಿಂದ ಆ ವ್ಯಕ್ತಿಗೆ ಪ್ರಾಣ ಹೋದಂತಾಗಿದೆ.
ಕೊನೆಗೆ ಭಾರಿ ಹರಸಾಹಸದ ಬಳಿಕ ಕೋತಿ ಬಳಿಯಿದ್ದ ಬ್ಯಾಗ್ ಅನ್ನು ಮತ್ತೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಉತ್ತರ ಪ್ರದೇಶದ ಸೀತಾಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ವಿಕಾಸ ಭವನ ರಿಜಿಸ್ಟ್ರಿ ಕಚೇರಿಗೆ ಬಂದಿದ್ದ. ಆತನ ಕೈಯಲ್ಲಿ ಬ್ಯಾಗ್ ಇತ್ತು.
ಅದರಲ್ಲಿ 4 ಲಕ್ಷ ರೂ. ಇತ್ತು. ಈ ವೇಳೆ ಅಲ್ಲಿದ್ದ ಕೋತಿ ಒಂದು ಆ ಬ್ಯಾಗನ್ನು ಕಸಿದುಕೊಂಡು ಹೋಗಿದೆ.
ಈ ಘಟನೆಯಿಂದ ಆತಂಕಗೊಂಡ ಆ ವ್ಯಕ್ತಿ ಜೋರಾಗಿ ಕಿರುಚಿದ್ದಾನೆ. ಬಳಿಕ ಸುತ್ತಮುತ್ತಲಿನ ಜನರು ಅದನ್ನು ಹಿಡಿಯಲು ಯತ್ನಿಸಿದ್ದಾರೆ.
ಕೋತಿ ಚೀಲವನ್ನು ಎಳೆದು ಕೊಂಡೋಗಿದ್ದೂ ಅಲ್ಲದೆ ಅದನ್ನು ತೆರೆದು ಹಣ ತೆಗೆದುಕೊಂಡು ಗಾಳಿಗೆ ಎಸೆಯಲು ಪ್ರಾರಂಭಿಸಿದೆ. ಕೆಲವರು ಕೋತಿಹಿಡಿಯಲು ಮರ ಹತ್ತಿದ್ದು, ಕೋತಿ ಕೊನೆಗೆ ಚೀಲವನ್ನು ಬಿಟ್ಟು ಹೋಗಿದೆ.
ಈ ಬಗ್ಗೆ ಸಮೀಪದ ಕೊತ್ವಾಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









