ನೈಟ್ ಕರ್ಫ್ಯೂ ಜಾರಿ ದಿನಾಂಕ ಬದಲಾವಣೆ : ಡಿಸೆಂಬರ್ 24ರಿಂದ ಕರ್ಫ್ಯೂ
ಬೆಂಗಳೂರು: ಇಂದಿನಿಂದಲೇ ನೈಟ್ ಕರ್ಫ್ಯೂ ಜಾರಿ ಮಾಡಿರೋದಾಗಿ ತಿಳಿಸಿದ್ದ ಸರ್ಕಾರ ಇದೀಗ ಮತ್ತೊಮ್ಮೆ ಕರ್ಫ್ಯೂ ದಿನಾಂಕ ಬದಲಾವಣೆ ಮಾಡಿರೋದಾಗಿ ಘೋಷಣೆ ಮಾಡಿದೆ. ಇಂದಿನಿಂದ ಅಲ್ಲ ಬದಲಾಗಿ ಡಿಸೆಂಬರ್ 24 ರ ರಾತ್ರಿಯಿಂದ ಕರ್ಫ್ಯೂ ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಅಲ್ಲದೇ ಕರ್ಫ್ಯೂ ವೇಳೆ ಜನರ ಓಡಾಟಕ್ಕೆ ಮಾತ್ರ ನಿಷೇಧ ಹೇರಲಾಗಿದೆ. ಅಗತ್ಯ ವಸ್ತುಗಳ ಸರಬರಾಜಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎನ್ನಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬಿ.ಎಸ್ ಯಡಿಯೂರಪ್ಪನವರು ಈ ಬಗ್ಗೆ ಮಾಹಿತಿ ನೀಡಿದ್ಧಾರೆ. ಆದರೆ ಅವರು ಟ್ವೀಟ್ ನಲ್ಲಿ ತಿಳಿಸಿರುವ ಮಾಹಿತಿ ಗೊಂದಲಭರಿತವಾಗಿದೆ. ಒಂದೆಡೆ ಕರ್ಫ್ಯೂ ಇದೆ ಎಂದಿರುವ ಸಿಎಂ ಬಿಎಸ್ ವೈ ಅವರು ಮತ್ತೊಂದೆಡೆ ರಾತ್ರಿ ಪಾಳಿ ಕೆಲಸ ಮಾಡುವವರಿಗೂ ನಿರ್ಬಂಧ ವಿಧಿಸಿಲ್ಲ. ಕಂಪನಿ ಗುರುತು ಪತ್ರ ನೀಡಿ ಓಡಾಡಬಹುದು ಎಂದು ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ – ಪದವಿ ವಿದ್ಯಾರ್ಥಿನಿ ಲವ್ : ಆತ್ಮಹತ್ಯೆಯಲ್ಲಿ ಅಂತ್ಯ
ಇನ್ನೂ ಸರ್ಕಾರ ಹೊರೆಡಿಸಿರುವ ಸಸುತ್ತೋಲೆಯಲ್ಲಿ ಡಿಸೆಂಬರ್ 24ರ ರಾತ್ರಿ 11ಗಂಟೆಯಿಂದ ಬೆಳಗ್ಗೆ 5ಗಂಟೆವರೆಗೆ ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ವಿವರಿಸಲಾಗಿದೆ. ಇನ್ನೂ ರೂಪಾಂತರಗೊಂಡ ಕೊರೊನಾ ಹಾವಳಿಯಿಂದಾಗಿ ನೈಟ್ ಕರ್ಫ್ಯೂ ಜಾರಿ ಕ್ರಮ ತೆಗೆದುಕೊಳ್ಳಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಡಿ.23ರ ರಾತ್ರಿ 10ರಿಂದಲೇ ಜನವರಿ 2ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಬಿಎಸ್ ವೈ ಆದೇಶ ಹೊರಡಿಸಿದ್ದರು. ಇದೀಗ ಒಂದು ದಿನದ ನಂತರ ಕರ್ಫ್ಯೂ ಜಾರಿಯಾಗಿರೋದಾಗಿ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel