ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಮರಣಮೃದಂಗ ಬಾರಿಸುತ್ತಿದ್ದು, ಇದೀಗ ಈ ಹೆಮ್ಮಾರಿ ವೈರಸ್ ಗೆ ರಾಜವಂಶಸ್ಥೆಯೊಬ್ಬರು ಸಾವನ್ನಪ್ಪಿದ್ದಾರೆ. ಸ್ಪೇನ್ ನ ರಾಜಕುಮಾರಿ ಮರಿಯಾ ತೆರೆಸಾ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. 86 ವರ್ಷ ವಯಸ್ಸಿನ ಈಕೆ ಸ್ಪೇನ್‌ನ ರಾಜ ಆರನೇ ಕಿಂಗ್ ಫೆಲಿಪ್‌ರ ಸೋದರ ಸಂಬಂಧಿ. ಈ ಬಗ್ಗೆ ಸ್ಪೇನ್‌ನ ರಾಜಮನೆತನ ಅಧಿಕೃತ ಮಾಹಿತಿ ನೀಡಿದೆ.
ಸ್ಪೇನ್‌ನಲ್ಲಿ ಕೊರೊನಾ ತನ್ನ ಮರಣ ನರ್ತನ ಮಾಡ್ತಿದ್ದು ಈವರೆಗೆ ಕೊರೊನಾದಿಂದ 5982 ಮಂದಿ ಸಾವನ್ನಪ್ಪಿದ್ದಾರೆ. 73,235 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ.







