ನೈಟ್ ಕರ್ಫ್ಯೂ ಗೊಂದಲದ ಗೂಡು : ಯತ್ನಾಳ್
ವಿಜಯಪುರ : ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ನಿರ್ಧಾರಕ್ಕೆ ರಾಜ್ಯದೆಲ್ಲೆಡೆ ವಿರೋಧ, ಟೀಕೆಗಳು ವ್ಯಕ್ತವಾಗುತ್ತಿವೆ. ಇದೀಗ ಸರ್ಕಾರದ ಈ ನಿರ್ಧಾರದ ಬಗ್ಗೆ ತಮ್ಮ ಪಕ್ಷದ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರ ರಚನೆಯಾದಗಿನಿಂದಲೂ ಬಿಎಸ್ ವೈ ವಿರುದ್ಧ ಕಿಡಿಕಾರುತ್ತಾ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ಗುಡುಗಿದ್ದಾರೆ. ನೈಟ್ ಕರ್ಫ್ಯೂ ಜಾರಿ ಗೊಂದಲದ ಗೂಡಾಗಿದೆ. ಇದನ್ನ ಮರುಪರಿಶೀಲಿಸಬೇಕೆಂದು ಆಗ್ರಹಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ ಕೊರೊನಾ ಹೆಚ್ಚಾಗುತ್ತಾ, ಹಗಲು ಹೆಚ್ಚಾಗುತ್ತಾ ಗೊತ್ತಿಲ್ಲ. ರಾತ್ರಿ ವೇಳೆ ಸಾಮಾನ್ಯವಾಗಿ ಯಾರೂ ಓಡಾಡಲ್ಲ. ಆಗ ಕಫ್ರ್ಯೂ ಮಾಡಿ ಏನು ಪ್ರಯೋಜನ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಹಗಲು ವೇಳೆ ಕೊರೋನಾ ಸೋಂಕು ಹರಡುವುದಿಲ್ಲವೇ? ಆರೋಗ್ಯ ಮಂತ್ರಿಗೆ ಕನಕಪುರ ಬಂಡೆ ಸವಾಲ್..!
ನೈಟ್ ಕಫ್ರ್ಯೂ ನಿರ್ಧಾರವನ್ನ ಸಿಎಂ ಮರುಪರಿಶೀಲಿಸಬೇಕು. ಈ ರೀತಿ ಅರ್ಧಂಬರ್ಧ ಮಾಡುವ ಬದಲು ಅದನ್ನ ತೆಗೆದುಹಾಕಬೇಕೆಂಬುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









