ನಾಳೆಯಿಂದ ‘ತೇಜಸ್ವಿ ಸೂರ್ಯ ಫುಟ್ಬಾಲ್ ಕಪ್’ ಟೂರ್ನಿ ಶುರು
ಬೆಂಗಳೂರು : ಡಿಸೆಂಬರ್ 25 ರಿಂದ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ತೇಜಸ್ವಿ ಸೂರ್ಯ ಫುಟ್ಬಾಲ್ ಕಪ್ ಟೂರ್ನಿ ಆರಂಭವಾಗಲಿದೆ. ನಗರದ ಒಂಭತ್ತು ವಿವಿಧ ಸ್ಥಳಗಳಲ್ಲಿ ಪಂದ್ಯವಳಿಗೆ 240ಕ್ಕೂ ಹೆಚ್ಚಿನ ತಂಡಗಳು ನೋಂದಣಿಯಾಗಿವೆ.
ಈ ಕುರಿತು ಸಂಸದ ಹಾಗೂ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಬೆಂಗಳೂರು ಫುಟ್ಬಾಲ್ ಪ್ರೇಮಿಗಳ ನಗರವೆಂದು ಇಂಡಿಯನ್ ಸೂಪರ್ ಲೀಗ್‍ನಲ್ಲಿ ಬೆಂಗಳೂರು ಫುಟ್ಬಾಲ್ ತಂಡಕ್ಕೆ ಸಿಗುತ್ತಿರುವ ಅಭೂತಪೂರ್ವ ಸ್ಪಂದನೆಯಿಂದಲೇ ಗೊತ್ತಾಗುತ್ತದೆ.
ಬೆಂಗಳೂರು ದಕ್ಷಿಣ ಸಂಸದರ ಕಚೇರಿಯು ಯುವ ಫುಟ್ಬಾಲ್ ಆಟಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಟೂರ್ನಿ ಆಯೋಜಿಸುತ್ತಿದೆ. ಮುಂದಿನ 3 ದಿನಗಳ ಕಾಲ ರೋಚಕ ಫುಟ್ಬಾಲ್ ಪಂದ್ಯಗಳ ಹಣಾಹಣಿಗೆ ನಗರ ಸಾಕ್ಷಿಯಾಗಲಿದೆ.” ಎಂದರು.
ಇನ್ನು 9 ವಿವಿಧ ಫುಟ್ಬಾಲ್ ಟರ್ಫ್‍ಗಳಲ್ಲಿ ಪಂದ್ಯ ಆಯೋಜನೆಗೊಳಿಸಲಾಗಿದ್ದು, ಕಿಕ್ ಸ್ಟಾರ್ಟ್ ಎಫ್‍ಸಿ(ಜೆಪಿ ನಗರ), ಫಿಟ್ ಆನ್ ಸ್ಪೋಟ್ರ್ಸ್(ಗೊಟ್ಟಿಗೆರೆ), ಸ್ಪೋಟ್ರ್ಸ್ ರಶ್(ಜಯನಗರ), ರಶ್ ಅರೇನಾ(ರಾಜಾಜಿನಗರ),
ಟೈಗರ್ 5 ಬನಶಂಕರಿ, ಡ್ರಿಬಲ್ ಅರೇನಾ(ಉತ್ತರಹಳ್ಳಿ), ಗೋಲ್ಡನ್ ಲೆಗ್(ಹೆಚ್ ಎಸ್ ಆರ್ ಲೇಔಟ್), ಟರ್ಫ್ ಪಾರ್ಕ್ (ಕೋರಮಂಗಲ) & ಟರ್ಫ್ ಪಾರ್ಕ್, ಹೆಚ್ ಎಸ್ ಆರ್ ಲೇಔಟ್ ಗಳಲ್ಲಿ ಪಂದ್ಯಗಳು ನಡೆಯಲಿವೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel