ಮಡಿಕೇರಿ: ಕೊಡಗು ತನ್ನ ಭೌಗೋಳಿಕ ವಿಶೇಷತೆಯ ಜತೆಗೆ ಸಾಂಪ್ರದಾಯಿಕ ಆಚರಣೆಗಳಿಗೂ ರಾಜ್ಯದಲ್ಲೇ ತನ್ನದೇ ಆದ ಛಾಪು ಮೂಡಿಸಿದೆ. ಕೊಡಗಿನ ಹತ್ತಾರು ಗ್ರಾಮಗಳ ಆರಾಧ್ಯದೈವ ನಾಪೋಕ್ಲು ಸಮೀಪವಿರುವ ಬೇತು ಗ್ರಾಮದಲ್ಲಿ ಮಕ್ಕಿ ಶಾಸ್ತಾವು ದೇವರ ಉತ್ಸವ ಗಮನ ಸೆಳೆಯಿತು.
ಶಾಸ್ತಾವು ದೇವರ ಉತ್ಸವಕ್ಕೆ ಹಬ್ಬದ ಕಟ್ಟು ಬೀಳುತ್ತಿದ್ದಂತೆ ಸಕಲ ದೇವಾತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕು. ಬೇಟೆಗೆ ತೆರಳುವುದು, ಎಲೆಗಳನ್ನು ಕೀಳುವುದು ಎಲ್ಲಾ ನಿಷೇಧವಾಗಿರುತ್ತದೆ. ದೇವಾಲಯದ ಆವರಣದಲ್ಲಿ ನಡೆಯುವ ತೆರೆಗಳನ್ನು ವೀಕ್ಷಿಸಲು ಸುತ್ತಮುತ್ತಲಿನ ಹತ್ತಾರು ಗ್ರಾಮದಿಂದ ಭಕ್ತರು ಆಗಮಿಸುತ್ತಾರೆ.

ಈ ಉತ್ಸವ ನಡೆಯುವ ಹಿಂದಿನ ದಿನವೇ ದೇವಾಲಯದ ಅಂಗಳದಲ್ಲಿ ಕಟ್ಟಿಗೆ ಹಾಕಿ ಕೆಂಡ ತಯಾರಿಸಲಾಗುತ್ತದೆ. ಬೆಳಗ್ಗಿನ ಹೊತ್ತಿಗೆ ಅಜ್ಪಪ್ಪ ಕೋಲ, ಮಧ್ಯಾಹ್ನ ವಿಷ್ಣುಮೂರ್ತಿ ಕೋಲ ಜರುಗಿದವು. ಹೀಗೆ ಈ ಕೋಲಗಳು ಸುಡುಬಿಸಿಲಿನಲ್ಲಿ ಕೆಂಡದ ಮೇಲೆ ದೈವ ಪರವಷರಾಗಿ ಮೇಲೇರಿಗೆ ಬೀಳುವ ಸಂದರ್ಭ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿ ಈಡೇರಿಸಲು ಬೇಡಿಕೊಳ್ಳುತ್ತಾರೆ ಮತ್ತು ರೋಮಾಂಚನವಾಗಿರುತ್ತದೆ.
ಬಳಿಕ ಕೋಲದ ಬಳಿ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುವುದು ವಾಡಿಕೆಯೂ ಇದೆ.
ಮಣ್ಣಿನ ನಾಯಿಯ ಗೊಂಬೆ
ಕೊಡಗಿನ ಮಕ್ಕಿಯಲ್ಲಿ ಮತ್ತೊಂದು ವಿಶೇಷವೆಂದರೆ ದೇವರ ಮರದ ಸುತ್ತ ಹರಕೆ ಕಟ್ಟಿ ಮಣ್ಣಿನ ನಾಯಿಯ ಗೊಂಬೆಗಳನ್ನು ತಲತಲಾಂತರದಿಂದ ಇರಿಸಿಕೊಂಡು ಬರುತ್ತಿದ್ದಾರೆ.

ಗ್ರಾಮದಲ್ಲಿ ಯಾವುದೇ ವಸ್ತು ಕಳ್ಳತನವಾದರೆ, ಕಳವು ಮಾಡಿದ ವ್ಯಕ್ತಿ ಹಬ್ಬದ ಸಂದರ್ಭದಲ್ಲೇ ಆಗಮಿಸಿ ತಪ್ಪು ಒಪ್ಪಿಕೂಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಇದಲ್ಲದೆ ಸಂತಾನ, ಮದುವೆ, ಕೌಟುಂಬಿಕ ಸಮಸ್ಯೆಗಳ ಬಗ್ಗೆ ಹೇಳಿಕೊಂಡರೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಕೊಡವರಲ್ಲಿದೆ.
ಮೇ ತಿಂಗಳಿನಲ್ಲಿ ಲಾಕ್‍ಡೌನ್ ಇದ್ದ ಕಾರಣ ಉತ್ಸವ ಸ್ಥಗಿತಗೊಳಿಸಲಾಗಿತ್ತು. ಡಿಸಂಬರ್ ನಲ್ಲಿ ನಡೆಯುವ ವಾರ್ಷಿಕ ಉತ್ಸವ ಅದ್ದೂರಿ ನಡೆಯಿತು. ಭಕ್ತರಿಗೆ ಅನ್ನದಾನದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








