ವರದಿಗಳ ಪ್ರಕಾರ ಹೊಸ ಕೊರೋನಾ ರೂಪಾಂತರದ 7 ಲಕ್ಷಣಗಳು new COVID strain symptoms
ಲಂಡನ್, ಡಿಸೆಂಬರ್25: ಕೊರೋನವೈರಸ್ ನ ಹೊಸ ರೂಪಾಂತರ ಇಂಗ್ಲೆಂಡ್ ನಲ್ಲಿ ಅವ್ಯವಸ್ಥೆ ಮತ್ತು ಪ್ರಕ್ಷುಬ್ಧ ಸ್ಥಿತಿಗೆ ಕಾರಣವಾಗಿದೆ. ಲಸಿಕೆ ಹೊರಹೊಮ್ಮುವ ಸುದ್ದಿ ಜನರಲ್ಲಿ ಸಾಕಷ್ಟು ಭರವಸೆಯನ್ನು ಮೂಡಿಸಿದರೂ, ರೂಪಾಂತರಿತ ವೈರಸ್ ಭಯ ಮತ್ತು ಆತಂಕವನ್ನು ಉಂಟು ಮಾಡಿದೆ. new COVID strain symptoms

ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಕೆಲವು ಸಾಮಾನ್ಯ ರೋಗಲಕ್ಷಣಗಳಲ್ಲದೆ, ಇತರ 7 ರೋಗಲಕ್ಷಣಗಳು ರೂಪಾಂತರಿತ ವೈರಸ್ ಸೋಂಕಿನ ಸಂಬಂಧ ಹೊಂದಿವೆ ಎಂದು ತಿಳಿಸಿದ್ದಾರೆ.
ವಿಯುಐ 202012/01 ಹೆಸರಿನ ಕೊರೊನಾವೈರಸ್ ನ ಹೊಸ ರೂಪಾಂತರವು ಸ್ಪೈಕ್ ಪ್ರೋಟೀನ್‌ನಲ್ಲಿನ ಆನುವಂಶಿಕ ರೂಪಾಂತರವನ್ನು ಒಳಗೊಂಡಿದೆ. ಇದು ಜನರಲ್ಲಿ ವೈರಸ್ ತಕ್ಷಣ ಮತ್ತು ಸುಲಭವಾಗಿ ಹರಡಲು ಕಾರಣವಾಗಬಹುದು ಎಂದು ಹೇಳಲಾಗಿದೆ. ಇದರರ್ಥ, ಇಂಗ್ಲೆಂಡ್‌ನ ಆಗ್ನೇಯ ಭಾಗದಲ್ಲಿ ಗುರುತಿಸಲಾಗಿರುವ ರೂಪಾಂತರವು 17 ರೂಪಾಂತರಗಳನ್ನು ಹೊಂದಿದೆ.
ಕೋವಿಡ್-19 ನ ಮೂರು ಸಾಮಾನ್ಯ ರೋಗಲಕ್ಷಣಗಳಾದ ಜ್ವರ, ಒಣ ಕೆಮ್ಮು, ವಾಸನೆ ಹಾಗೂ ರುಚಿಯ ಪ್ರಜ್ಞೆಯ ನಷ್ಟ ಮತ್ತು 7 ಇತರ ರೋಗಲಕ್ಷಣಗಳು ಕೊರೊನಾವೈರಸ್ ನ ಹೊಸ ರೂಪಾಂತರದೊಂದಿಗೆ ಸಂಬಂಧ ಹೊಂದಿವೆ.
ಹೊಸ ಕೊರೋನಾ ರೂಪಾಂತರದ ಲಕ್ಷಣಗಳು ಹೀಗಿವೆ
– ಆಯಾಸ
– ಹಸಿವಿನ ಕೊರತೆ
– ತಲೆನೋವು
– ಅತಿಸಾರ
– ಮಾನಸಿಕ ಗೊಂದಲ
– ಸ್ನಾಯು ನೋವು
– ಚರ್ಮದ ದದ್ದು
ಕಿಂಗ್ಸ್ ಕಾಲೇಜಿನ ಸಂಶೋಧಕರ ಪ್ರಕಾರ, ಕೋವಿಡ್-19 ನ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡರೆ ಅದನ್ನು ಅಸಡ್ಡೆ ಮಾಡಬೇಡಿ. ನೀವು ಮತ್ತು ನಿಮ್ಮ ಮನೆಯವರು ತಕ್ಷಣವೇ ಪ್ರತ್ಯೇಕವಾಗಿರಬೇಕು ಮತ್ತು ಆದಷ್ಟು ಬೇಗ ಪರೀಕ್ಷೆಗೆ ಒಳಪಡಬೇಕು.

ಯುನೈಟೆಡ್ ಕಿಂಗ್‌ಡಮ್ ಅನೇಕ ಪೀಡಿತ ಪ್ರದೇಶಗಳಲ್ಲಿ ಲಾಕ್‌ಡೌನ್ ವಿಧಿಸಿದರೆ, ಇತರ ದೇಶಗಳು ವೈರಸ್‌ನ ಹರಡುವಿಕೆಯನ್ನು ನಿಯಂತ್ರಿಸಲು ಗಡಿಗಳನ್ನು ನಿರ್ಬಂಧಿಸಿವೆ.
ಆದರೂ, ವೈಯಕ್ತಿಕ ಮಟ್ಟದಲ್ಲಿ, ನಾವು ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಾಗ ನಮ್ಮನ್ನು ನಾವು ಪ್ರತ್ಯೇಕಿಸಿಕೊಳ್ಳುವುದು ಬಹಳ ಮುಖ್ಯ. ಅದರ ಹೊರತಾಗಿ, ಎಲ್ಲಾ ಸಮಯದಲ್ಲೂ ಸಾಮಾನ್ಯ ಮಾರ್ಗಸೂಚಿಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1341404758230351873?s=19
https://twitter.com/SaakshaTv/status/1341406814479507461?s=19








