ಮಾದಪ್ಪನ ಸನ್ನಿಧಾನದಲ್ಲಿ ಇತಿಹಾಸದಲ್ಲೇ ದಾಖಲೆ ಕಾಣಿಕೆ ಸಂಗ್ರಹ..!
ಸುಪ್ರಸಿದ್ಧ ಐತಿಹಾಸಿಕ ಶ್ರೀ ಮಲೆಮಹದೇಶ್ವರ ಸನ್ನಿಧಾನದಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಇತಿಹಾಸದಲ್ಲೇ ದಾಖಲೆ ನಿರ್ಮಿಸಿದೆ. ಇತ್ತೀಚೆಗೆ ಮಲೆ ಮಹದೇಶದವರನ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ಮಾಹಿತಿ ಪ್ರಕಾರ ಕೇವಲ 42 ದಿನಗಳಲ್ಲಿ ಹುಂಡಿಯಲ್ಲಿ ಒಟ್ಟು 1.92 ಕೋಟಿ ರೂಪಾಯಿ ನಗದು ಸಂಗ್ರಹವಾಗಿದೆ.
ಕಿಸ್ಮಸ್ ಸಂಭ್ರಮ: ಕ್ರೈಸ್ತ ಬಾಂಧವರಿಗೆ ಶುಭಕೋರಿದ ರಾಷ್ಟ್ರಪತಿ, ಮೋದಿ, ಬಿ ಎಸ್ ವೈ..!
ಇನ್ನೂ 170 ಗ್ರಾಂ. ಚಿನ್ನ ಮತ್ತು 3,850 ಕೆಜಿ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿದೆ. ಕೊರೊನಾ ನಂತರ ಮಾದಪ್ಪನ ಹುಂಡಿಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇನ್ನೂ ಮಹದೇಶ್ವರ ಬೆಟ್ಟದ ಖಾಸಗಿ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ, ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ಸಮಕ್ಷಮದಲ್ಲಿ ಹುಂಡಿ ಎಣಿಕೆ ಕಾರ್ಯ ನೆರವೇರಿತು.
ಈ ವೇಳೆ ಪೊಲೀಸ್ ಬಂದೋಬಸ್ತ್ ಮತ್ತು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿತ್ತು. ಹುಂಡಿ ಎಣಿಕೆ ಪ್ರಕ್ರಿಯೆಯಲ್ಲಿ ಪ್ರಾಧಿಕಾರ ಕಾರ್ಯದರ್ಶಿ ಜಯವಿಭವಸ್ವಾಮಿ, ಅಭಿಯಂತರರು ಮತ್ತು ದೇವಾಲಯದ ಸಿಬ್ಬಂದಿ ವೀರಣ್ಣಾಚಾರ್, ಉಪ ಕಾರ್ಯದರ್ಶಿ ಬಸವರಾಜು, ಬ್ಯಾಂಕ್ ಮ್ಯಾನೇಜರ್ ಮತ್ತು ಪೊಲೀಸ್ ಸಿಬ್ಬಂದಿ ಹಾಜರಿದ್ದರು. ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಹುಂಡಿ ಹಣ ಎಣಿಕೆ ಕಾರ್ಯವು ರಾತ್ರಿ 7ಕ್ಕೆ ಸಂಪೂರ್ಣಗೊಂಡಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








