ಬೆಂಗಳೂರಿನಲ್ಲಿ 7 ಜನರಲ್ಲಿ ಹೊಸ ತಳಿ ಬ್ರಿಟನ್ ಕೊರೊನಾ ಸೋಂಕು ಪತ್ತೆ..!
ಬೆಂಗಳೂರು : ಬ್ರಿಟನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ 7 ಜನರಲ್ಲಿ ರೂಪಾಂತರಿ ಕೊರೊನಾ ಸೋಂಕು ಪತ್ತೆಯಾಗಿದೆ. ಡಿಸೆಂಬರ್ 19 ರಂದು ಭಾರತಕ್ಕೆ ಆಗಮಿಸಿದ್ದ ಬ್ರಿಟನ್ ವಿಮಾನದಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿತ್ತು, ಇದೀಗ ನಿನ್ನೆ ಮತ್ತೆ ನಾಲ್ವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಏಳು ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಇನ್ನೂ ಬ್ರಿಟನ್ ಸೋಂಕು ಸಿಲಿಕಾನ್ ಸಿಟಿಗೂ ಕಾಲಿಟ್ಟಿರೋದು ಜನರ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ಯಾ ಪೂಜೆ ಕಡ್ಡಾಯ ಆದೇಶ ಹೊರಡಿಸಿದೆ ಈ ರಾಜ್ಯ..!
ಇನ್ನೂ ಡಿಸೆಂಬರ್12 ರಿಂದ 21 ರವರೆಗೂ ಒಟ್ಟು 1,582 ಜನ ಬ್ರಿಟನ್ನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಪೈಕಿ ಏಳು ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನೂ ಉಳಿದವರನ್ನ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಲಾಗುತ್ತಿದೆ. ಇನ್ನೂ 1,582 ಜನರಿಗೂ ಆರ್ಟಿಪಿಸಿಆರ್ ಕೊರೋನಾ ಪರೀಕ್ಷೆ ಮಾಡಿಸಲಾಗ್ತಿದೆ. ಈವರೆಗೂ ಪರೀಕ್ಷೆಗೆ ಒಳಪಟ್ಟವರ ಪೈಕಿ 66 ಜನರ ರಿಪೋರ್ಟ್ ನೆಗೆಟಿವ್ ಬಂದಿದೆ ಎನ್ನಲಾಗ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








