ಮಗಳು ಸ್ನಾನ ಮಾಡುವುದನ್ನು ವಿಡಿಯೋ ಮಾಡ್ತಿದ್ದ ತಂದೆ..!
ಲಂಡನ್: ಮಲತಂದೆ ಓರ್ವ ತನ್ನ ಮಗಳು ಸ್ನಾನ ಮಾಡುವ ದೃಶ್ಯವನ್ನ ಸುಮಾರು 3 ವರ್ಷಗಳ ಕಾಲ ಕದ್ದು ಸೆರೆ ಹಿಡಿದ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ. ಲಾರೆನ್ ಬ್ರೈಟ್ ವುಡ್ ಎಂಬ ಯುವತಿಯನ್ನ ಚಿಕ್ಕ ವಯಸ್ಸಿನಿಂದ ಆಕೆಯ ಮಲತಂದೆ ಲೆವಿಸ್ ನೋಡಿಕೊಳ್ತಿದ್ದ. ಆದ್ರೆ ಆಕೆಗೆ ಗೊತ್ತಿಲ್ಲದೇ ಸುಮಾರು ವರ್ಷಗಳಿಂದ ಆಕೆ ಸ್ನಾನ ಮಾಡುತ್ತಿದ್ದ ವಿಡಿಯೋವನ್ನ ಕದ್ದು ಸೆರೆ ಹಿಡಿದಿದ್ದಾನೆ. ಕೊನೆಗೆ ಆಕೆಯ 18ನೇ ವರ್ಷದ ಬರ್ತ್ ಡೇ ದಿನ ಆತನ ಅಸಲಿಯತ್ತು ಬಯಲಾಗಿದೆ.
ಸ್ವಂತ ಮಗಳ ಮೇಲೆ ತಂದೆಯ ಮೃಗೀಯ ವರ್ತನೆ: ಮಗಳ ಡೈರಿಯಲ್ಲಿತ್ತು ನೋವಿನ ಕಥೆ..!
ಲಾರೆನ್ಸ್ ಸಸ್ನಾನಕ್ಕೆ ಹೋಗಿದ್ದ ವೇಳೆ ಆ ಕ್ಯಾಮೆರಾವನ್ನ ಗಮಿಸಿದ್ದಾಳೆ. ಬಳಿಕ ಈ ಬಗ್ಗೆ ತನ್ನ ತಾಯಿ ಮೈಕೆಲ್ಲೆಗೆ ಮಾಹಿತಿ ನೀಡಿದ್ದಾಳೆ. ಬಳಿಕ ಮೈಕೆಲ್ಲೆ ಈ ಬಗ್ಗೆ ಲೆವಿಸ್ ನನ್ನ ಪ್ರಶ್ನಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಇದಾದ ನಂತರ ತಾನೇ ಪೊಲೀಸರ ಎದುರು ಶರಣಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಸದ್ಯ ನಾರ್ಥ್ಹ್ಯಾಂಪ್ಟನ್ ಕೋರ್ಟ್ಗೆ ವಿಚಾರಣೆಗೆ ಹಾಜರಾದ ಲೆವಿಸ್ 10 ತಿಂಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ. ಜೊತೆಗೆ ಯಾವುದೇ ಸಂಬಳವಿಲ್ಲದೆ 30 ದಿನಗಳ ಕಾರಾಗೃಹ ಕೆಲಸದ ಶಿಕ್ಷೆಯನ್ನು ವಿಧಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








