3 ಮಕ್ಕಳ ತಾಯಿ ಈಕೆ… ಮನೆಯವರ ವಿರೋಧದ ನಡುವೆಯೇ ಮಾಡಿದ ಸಾಧನೆ ನೊಡಿ..!
ನವದೆಹಲಿ: ಜೀವನದಲ್ಲಿ ನಾವು ಹೀಗೆ ಮಾಡಬೇಕು, ಹಾಗೆ ಮಾಡಬೇಕು.. ಏನೇನೋ ಸಾಧನೆ ಮಾಡ್ಬೇಕು ಅಂತೆಲ್ಲಾ ಕನಸು ಕಂಡಿರುತ್ತೆ. ಆದ್ರೆ ಹೆಚ್ಚಿನ ಜನರು ತಮ್ಮ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗೋದಿಲ್ಲ. ಕೆಲವೊಮ್ಮೆ ಸಮಾಜ ಏನ್ ಹೇಳುತ್ತೋ, ಮನೆಯವರಿಂದ ಒತ್ತಡ, ಹೀಗೆ ನಾನಾ ಕಾರಣಗಳಿಂದ ಅನೇಕರು ಅದ್ರಲ್ಲೂ ಹೆಚ್ಚಾಗಿ ಮಹಿಳೆಯರುವ ತಮ್ಮ ಕನಸಿಗೆ ಎಳ್ಳು ನೀರು ಬಿಟ್ಟು ಯಾವುದೋ ಒಂದು ದಾರಿ ಜೀವನ ನಡೆದ್ರೆ ಸಾಕು ಅಂತ ಇರುತ್ತಾರೆ.
ಅದೇ ರೀತಿ ಜಮ್ಮು ಮತ್ತು ಕಾಶ್ಮೀರದ ಮಹಿಳೆ ಕಥೆ. ಈಕೆ 3 ಮಕ್ಕಳ ತಾಯಿ. ಮನೆಯವರಿಂದ ತೀವ್ರ ಒತ್ತಡವಿತ್ತು. ತನ್ನ ಕನಸು ನನಸಾಗಿಸಿಕೊಳ್ಳುವ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಮನೆಯವರು, ನೆಂಟರು , ನೆರೆ ಹೊರೆಯವರು ಹೀಗೆ ಎಲ್ಲರಿಂದಲೂ ವಿರೋಧ ವ್ಯಕ್ತವಾಗಿತ್ತು. ಆದರೂ ಈಕೆ ಮಾತ್ರ ಇದನ್ನೆಲ್ಲಾ ಕೆರ್ ಮಾಡದೇ ತಾನಂದುಕೊಂಡದನ್ನ ಸಾಧಿಸಿ ತೋರಿಸಿದ್ದಾಳೆ. ಇತರರಿಗೆ ಸ್ಪೂರ್ತಿಯಾಗಿದ್ದಾಳೆ.
500ಕ್ಕೂ ಹೆಚ್ಚು ಜಿಂಕೆಗಳ ಮಾರಣಹೋಮ : ಬೇಟೆಗಾರರ ವಿರುದ್ಧ ಭುಗಿಲೆದ್ದ ಆಕ್ರೋಶ

ಈಕೆಯ ಹೆಸರು ಪೂಜಾದೇವಿ. ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯ ನಿವಾಸಿ. ಈಕೆ ಮಾಡಿರುವ ಸಾಧನೆಯನ್ನ ಈವರೆಗೂ ಆ ರಾಜ್ಯದಲ್ಲೇ ಯಾರೂ ಸಹ ಮಾಡಿರಲಿಲ್ಲ. ಾ ರೀತಿಯಾದ ಸಾಧನೆ ಮಾಡಿ ಇಡೀ ದೇಶದ ಜನರ ಗಮನ ಸೆಳೆದು ನೆಟ್ಟಿಗರಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಅಂದ್ಹಾಗೆ ಜಮ್ಮು-ಕಾಶ್ಮೀರದಲ್ಲಿ ಬಸ್ ಡ್ರೈವರ್ ಆಗುವ ಕನಸನ್ನ ಈಕೆ ಈಗ ನನಸುಮಾಡಿಕೊಮಡಿದ್ದಾಳೆ. ಈ ಮೂಲಕ ಬಸ್ ಚಲಾಯಿಸುತ್ತಿರುವ ರಾಜ್ಯದ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಪೂಜಾ ದೇವಿ. ಇನ್ನೂ ಇವರ ಸಾಧನೆಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕೂಡ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.
ನೈಜೀರಿಯಾ | ಭೀಕರ ರಸ್ತೆ ಅಪಘಾತ : 10 ಮಂದಿ ಸಾವು
ಇನ್ನೂ ಕೇವಲ ಪುರುಷರಷ್ಟೇ ಪ್ರಯಾಣಿಕ ವಾಹನ ಚಲಾಯಿಸಬಹುದು ಎಂಬ ಆಲೋಚನೆಗಳನ್ನ ಹೊಡೆದುರುಳಿಸಿ ತನ್ನ ಕನಸು ನನಸಾಗಿಸಿಕೊಂಡಿದ್ದಾರೆ. ಅಲ್ಲದೇ ಮಹಿಳೆಯರು ತಮ್ಮ ಕನಸಿನ ಉದ್ಯೊಗವನ್ನೇ ಆರಿಸಿಕೊಳ್ಳಿ ಎಂದು ಎಲ್ಲ ಮಹಿಳೆಯರಿಗೆ ಸಂದೇಶ ರವಾನಿಸಿದ್ದಾರೆ ಪೂಜಾ.. ಇನ್ನೂ ಪೂಜಾ ಅವರು ಮೊದಲಿಗೆ ಟ್ಯಾಕ್ಸಿ ಓಡಿಸಲು ಪ್ರಾರಂಭಿಸಿದ್ದರು. ಬಳಿಕ ಟ್ರಕ್ ಕೂಡ ಓಡಿಸಿದ್ದರು. ಇದೀಗ ಬಸ್ ಚಲಾಯಿಸುತ್ತಿದ್ದಾರೆ.
ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿಯಲ್ಲಿ ಬಿಲಿಯಾದ 7 ತಾಲೀಬಾನ್ ಭಯೋತ್ಪಾದಕರು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








