51 ರ ಪತ್ನಿ ‘ಪರಲೋಕ’ದಲ್ಲಿ, 26ರ ಪತಿ ಪೊಲೀಸ್ ಠಾಣೆಯಲ್ಲಿ : ಅಷ್ಟಕ್ಕೂ ಆಗಿದ್ದೇನು..!
ಪ್ರೀತಿಗೆ ವಯಸ್ಸಿಲ್ಲ. ವಯಸ್ಸಿನ ಅಂತರ ಲೆಕ್ಕಕ್ಕೆ ಬರಲ್ಲ ಅನ್ನೋ ಮಾತಿದೆ. ಅದರಂತೆ ಇಬ್ಬರ ವಯಸ್ಸಿನ ನಡುವೆ ಅಜಗಜಾಂತರ ವ್ಯತ್ಯಾಸವಿದ್ದರೂ ಸಮಾಜಕ್ಕೆ ತಲೆಕೆಡಿಸಿಕೊಳ್ಳದೇ ಮದುವೆಯಾಗಿ ಜೊತೆಯಾಗಿರುವವರನ್ನ ನೋಡಿದ್ದೇವೆ. ಅದೇ ರೀತಿ ಕೇರಳದ ಕಾರಕೋಣಂ ಸಮೀಪದ ಥ್ರೆಸ್ಯಾಪುರಂ ನ ನಿವಾಸಿಯಾಗಿದ್ದ 51 ವರ್ಷದ ಸಖಾ ಕುಮಾರಿ 26 ವರ್ಷದ ಅರುಣ್ ಎಂಬ ಯುವಕನ ಜೊತೆ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಸುಮಾರು 2 ತಿಂಗಳ ಹಿಂದಷ್ಟೇ ಈ ಜೋಡಿ ಮದುವೆಯಾಗಿತ್ತು ಎನ್ನಲಾಘೀಧೇ. ಆದರೆ ಇವರಿಬ್ಬರ ಜೀವನ ಸುಖವಾಗಿರದೇ ದುರಂತ ಅಂತ್ಯ ಕಂಡಿದೆ.
ಹೌದು ಪತ್ನಿ ಸಖಾ ದೇವಿ ನಿಗೂಢವಾಗಿ ಮೃತಪಟ್ಟಿದ್ದಾಳೆ. ಇತ್ತ ಪತ್ನಿ ಸಾವಿನ ಬಳಿಕ ಆಕೆಯ ಪತಿ ಅರುಣ್ ನನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
3 ಮಕ್ಕಳ ತಾಯಿ ಈಕೆ… ಮನೆಯವರ ವಿರೋಧದ ನಡುವೆಯೇ ಮಾಡಿದ ಸಾಧನೆ ನೊಡಿ..!
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪತ್ನಿಯನ್ನ ಅರುಣ್ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದರು. ಇನ್ನೂ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅರುಣ್ ನನ್ನ ವಿಚಾರಣೆ ನಡೆಸಿದಾಗ ಆಕೆ ಕರೆಂಟ್ ಶಾಕ್ ಹೊಡೆದು ಸಾವನಪ್ಪಿದ್ದಾಳೆ ಎಂದು ಹೇಳಿದ್ದಾರೆ. ಆದ್ರೆ ಶವದ ಲಕ್ಷಣಗಳು ಅನುಮಾನಾಸ್ಪದವಾಗಿದ್ದರಿಂದ ತಾತ್ಕಾಲಿಕವಾಗಿ ಅರುಣ್ ನನ್ನ ವಶಕ್ಕೆ ಪಡೆದಿದ್ದಾರೆ. ಇತ್ತ ಪತ್ನಿಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಮುಂದಿನ ತನಿಖೆ ಮುಂದುರೆಸಲಿದ್ದಾರೆ.
ಡ್ರ್ಯಾಗನ್ ರಾಷ್ಟ್ರದಿಂದ 50 ಡ್ರೋನ್ ಗಳ ಖರೀದಿಸಿದ ಪಾಕಿಸ್ತಾನ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








