ಆರೋಗ್ಯ ಸಚಿವರಿಂದ ಕಿರುಕುಳ ಆರೋಪ : ಪತ್ರಕರ್ತ ಆತ್ಮಹತ್ಯಗೆ ಯತ್ನ
ಚಿಕ್ಕಬಳ್ಳಾಪುರ : ಆರೋಗ್ಯ ಸಚಿವರು, ಪೊಲೀಸ್ ಇಲಾಖೆ, ಪತ್ರಕರ್ತರು ಸೇರಿಕೊಂಡು ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಚಿಕ್ಕಬಳ್ಳಾಪುರದಲ್ಲಿ ಪತ್ರಕರ್ತನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದ ಈ ಪತ್ರಕರ್ತ ಆರೋಗ್ಯ ಸಚಿವರು, ಪೊಲೀಸರು, ಪತ್ರಕರ್ತರು ಕಿರುಕುಳ ನೀಡುತ್ತಿರುವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಅಶ್ವತ್ ಸತ್ಯ ಆತ್ಮಹತ್ಯೆಗೆ ಯತ್ನಿಸಿರುವವರಾಗಿದ್ದು, ಇವರು ಖಾಸಗಿ ಪತ್ರಿಕೆಯ ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈತ ತನ್ನ ಪೋಸ್ಟ್ ನಲ್ಲಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಪೊಲೀಸ್ ಅಧಿಕಾರಿಗಳು ಹಾಗೂ ಕೆಲ ಪತ್ರಕರ್ತರು ಪಿತೂರಿ ಮಾಡಿ ನನ್ನ ವೈಯಕ್ತಿಕ ಬದುಕನ್ನು ಮುಗಿಸಲು ಷಡ್ಯಂತ್ರ ರೂಪಿಸಿದ್ದಾರೆ. ಅವರಿಗೆಲ್ಲಾ ಕಠಿಣ ಶಿಕ್ಷೆ ಕಾದಿದೆ, ಸಮಯ ಬರಬೇಕಿದೆ ಎಂದು ಭಾವುಕರಾಗಿ ಬರೆದುಕೊಂಡಿದ್ದರು.
ಸದ್ಯ ಅಶ್ವಥ್ ಸತ್ಯ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








