ಬಾಕ್ಸಿಂಗ್ ಡೇ ಟೆಸ್ಟ್- ಗಾಯಗೊಂಡ ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್
ಟೀಮ್ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಸೂಚನೆ ನೀಡಿದೆ.
ಈ ನಡುವೆಯೂ ಟೀಮ್ ಇಂಡಿಯಾಗೆ ಮತ್ತೊಂದು ಆಘಾತವಾಗಿದೆ. ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್ ಗಾಯಗೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡದ ಎರಡನೇ ಇನಿಂಗ್ಸ್ ನ ಎಂಟನೇ ಓವರ್ ನಲ್ಲಿ ಉಮೇಶ್ ಯಾದವ್ ಗಾಯಗೊಂಡು ಮೈದಾನದಿಂದ ಹೊರನಡೆದಿದ್ದಾರೆ. ಎಂಟನೇ ಓವರ್ ನ ಮೂರನೇ ಎಸೆತದಲ್ಲಿ ಉಮೇಶ್ ಯಾದವ್ ಸ್ನಾಯು ಸೆಳೆತಕ್ಕೊಳಗಾದ್ರು. . ನಂತರ ಯಾದವ್ ಡ್ರೆಸಿಂಗ್ ರೂಮ್ ಸೇರಿಕೊಂಡ್ರು. ಇನ್ನುಳಿದ ಮೂರು ಎಸೆತಗಳನ್ನು ಮಹಮ್ಮದ್ ಸಿರಾಜ್ ಬೌಲಿಂಗ್ ಮಾಡಿ ಓವರ್ ಮುಗಿಸಿದ್ದರು.
ನಾಲ್ಕು ಓವರ್ ಗಳನ್ನು ಎಸೆದಿದ್ದ ಉಮೇಶ್ ಯಾದವ್ ಟೀಮ್ ಇಂಡಿಯಾಗೆ ಆರಂಭದಲ್ಲೇ ಬ್ರೇಕ್ ನೀಡಿದ್ದರು. ಎರಡನೇ ಓವರ್ ನಲ್ಲಿ ಉಮೇಶ್ ಯಾದವ್ ಅವರು ಆಸ್ಟ್ರೇಲಿಯಾದ ಆರಂಭಿಕ ಜೋಯ್ ಬನ್ರ್ಸ್ ಅವರ ವಿಕೆಟ್ ಅನ್ನು ಉರುಳಿಸಿದ್ದರು.
ಸರಣಿಯಲ್ಲಿ ಈಗಾಗಲೇ ಟೀಮ್ ಇಂಡಿಯಾದ ಇಬ್ಬರು ವೇಗಿಗಳು ಗಾಯಗೊಂಡಿದ್ದಾರೆ. ಇಶಾಂತ್ ಶರ್ಮಾ ಎರಡು ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಇನ್ನು ಮಹಮ್ಮದ್ ಶಮಿ ಅವರು ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದರು.
33ರ ಹರೆಯದ ಉಮೇಶ್ ಯಾದವ್ ಅವರ ಗಾಯ ಯಾವ ರೀತಿ ಪರಿಣಾಮ ಬೀರಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಮೆಲ್ಬರ್ನ್ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಮೂವರು ವೇಗಿಗಳನ್ನು ಕಣಕ್ಕಿಳಿಸಿತ್ತು. ಇಬ್ಬರು ಸ್ಪಿನ್ನರ್ ಗಳು 11ರ ಬಳಗದಲ್ಲಿದ್ದಾರೆ.