ಕೊರೊನಾ.. ರಾಜ್ಯ.. ರಾಜಕಾರಣ.. ಬಗ್ಗೆ `ಸ್ಫೋಟಕ ಭವಿಷ್ಯ’
ಹಾಸನ : ರಾಜ್ಯ, ಕೊರೊನಾ ವೈರಸ್, ರಾಜಕಾರಣದ ಬಗ್ಗೆ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಸದ್ಯಕ್ಕೆ ಕೊರೊನಾ ವೈರಸ್ ಕಂಟ್ರೋಲ್ ಗೆ ಬರಲ್ಲ.. ರಾಜ್ಯದಲ್ಲಿ ಮತ್ತೆ ಅಕಾಲಿಕ ಮಳೆ ಆಗಲಿದೆ.. ರಾಜ್ಯ ಹಾಗೂ ದೇಶದ ರಾಜಕಾರಣದಲ್ಲಿ ಶೀಘ್ರವೇ ಧೃವೀಕರಣ ಸಂಭವಿಸಲಿದೆ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಭವಿಷ್ಯ ನುಡಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ ಶ್ರೀಗಳು, ಹೊಸ ವರ್ಷದಲ್ಲಿ ಬರುತ್ತಿರುವ ಗ್ರಹಣಗಳು ಬದಲಾವಣೆಯ ಸಂಕೇತಗಳಾಗಿವೆ. ರಾಜ್ಯದಲ್ಲಿ ಪುನಹ ಅಕಾಲಿಕ ಮಳೆ, ಜಲಸಂಬಂಧಿ ಅನಾಹುತಗಳಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಕೊರೊನಾ ಬಗ್ಗೆ ಮಾತನಾಡಿ, ಸದ್ಯಕ್ಕೆ ಕೊರೊನಾ ವೈರಸ್ ಕಡಿಮೆ ಆಗೋದಿಲ್ಲ. ಅದು ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷಗಳ ಕಾಲ ಬೇಕಾಗುತ್ತದೆ. ಈಗ ಬ್ರಿಟನ್ ವೈರಸ್, ಕೊರೊನಾ ವೈರಸ್ ರೂಪಾಂತರ ಅಂತಾರಲ್ಲ, ಅದರ ಬಗ್ಗೆ ಎರಡು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿ “ರಾಜ್ಯ ರಾಜಕಾರಣದಲ್ಲಿ ಶೀಘ್ರವೇ ಧ್ರುವೀಕರಣ ಸಂಭವಿಸಲಿದೆ. ಸಾಕಷ್ಟು ಬದಲಾವಣೆಗಳನ್ನೂ ನಿರೀಕ್ಷಿಸಬಹುದಾಗಿದೆ. ಇದು ರಾಜ್ಯಕ್ಕೆ ಮಾತ್ರವಲ್ಲ ದೇಶ, ಜಾಗತಿಗ ಮಟ್ಟದಲ್ಲೂ ಬದಲಾವಣೆಯಾಗಲಿದೆ ಎಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










